ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರ – ಅಲೆವೂರು ಪಂಚಾಯತ್ ವ್ಯಾಪ್ತಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆ



ಕಾಪು: ಚುನಾವಣಾ ಪೂರ್ವಭಾವಿಯಾಗಿ ಅಲೆವೂರು ಪಂಚಾಯತ್ ವ್ಯಾಪ್ತಿಯ ಬೂತ್ ಅಧ್ಯಕ್ಷರುಗಳು, ಶಕ್ತಿಕೇಂದ್ರ ಪ್ರಮುಖರು, ಪಂಚಾಯತ್ ಸದಸ್ಯರುಗಳು ಹಾಗೂ‌ ಪಕ್ಷದ ಪ್ರಮುಖ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಮುಂದಿನ ದಿನದಲ್ಲಿ ಬೂತ್ ಮಟ್ಟದಲ್ಲಿ ಮಾಡಬೇಕಾದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ರವರು ನೀಡಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ ಸರಕಾರದ ಸಾಧನೆಗಳ ಬಗ್ಗೆ ಮಾತನಾಡಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಎಲ್ಲರೂ ಸಮಯ ನೀಡಲು ವಿನಂತಿಸಿದರು. ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್, ಶಕ್ತಿಕೇಂದ್ರ ಪ್ರಮುಖ್ ರಾದ ಆಶಿಶ್ ಶೆಟ್ಟಿ ಹಾಗೂ ಶೇಖರ ಆಚಾರ್ಯ, ಹಿರಿಯರಾದ ಹರೀಶ್ ಸೇರಿಗಾರ್, ರಾಘವೇಂದ್ರ ಭಟ್ ಮಾರ್ಪಳ್ಳಿ, ಹೇಮಂತ್ ಶೆಟ್ಟಿ, ಅಶೋಕ್ ಶೆಟ್ಟಿಗಾರ್, ಶಶಿಕಲಾ ಶೆಟ್ಟಿ, ಕೇಶವ ಶೆಟ್ಟಿಗಾರ್, ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a comment

Design a site like this with WordPress.com
Get started