
News By: ಜನತಾಲೋಕವಾಣಿನ್ಯೂಸ್
ಕಾಪು: ಚುನಾವಣಾ ಪೂರ್ವಭಾವಿಯಾಗಿ ಕಾಪು ಕ್ಷೇತ್ರದಲ್ಲಿ ಎಲ್ಲ ಪದಾಧಿಕಾರಿಗಳ ಸರಣಿ ಸಭೆ ನಡೆಯಿತು. ಪದಾಧಿಕಾರಿಗಳ, ಮೋರ್ಚಗಳ, ಮಹಾಶಕ್ತಿಕೇಂದ್ರಗಳ, ಹಾಗು ಹಲವು ಅಪೇಕ್ಷಿತ ಪದಾಧಿಕಾರಿಗಳ ಸಭೆಗಳು ಪತ್ಯೇಕವಾದ ಅವಧಿಗಳೊಂದಿಗೆ ನಡೆಯಿತು. ಸುಮಾರು ಮುನ್ನೂರರಷ್ಟು ಸಂಖ್ಯೆ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವ ದ್ರಢ ಸಂಕಲ್ಪ ಹೊತ್ತು ತೆರಳಿದರು.
ಈ ಅವಧಿಗಳಲ್ಲಿ ಆಯಾ ಪದಾಧಿಕಾರಿಗಳ ಜವಾಬ್ದಾರಿಗಳು, ಹಾಗೂ ಚುನಾವಣೆ ಗೆಲ್ಲಬೇಕಾದ ಅನಿವಾರ್ಯತೆ ಹಾಗೂ ಕಾರ್ಯಕತಂತ್ರಗಳ ಬಗ್ಗೆ ವಿಮರ್ಶೆ ಹಾಗೂ ಚರ್ಚೆ ನಡೆಯಿತು. ಯಾವುದೇ ಭಾಷಣಗಳಿಗೆ ಸೀಮಿತವಾಗದೆ ಜೇವಲ ಸಂಘಟನಾತ್ಮಕವಾಗಿ ಚುನಾವಣೆ ಎದುರಿಸಿ ಗೆಲ್ಲುವ ಕುರಿತು ಚರ್ಚಿಸಲಾಯಿತು.
ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಲಾಲಾಜಿ ಆರ್ ಮೆಂಡನ್ ಇವರ ಮಾರ್ಗದರ್ಶನ ನೀಡಿದರು. ಸರಣಿ ಸಭೆಗಳಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ನಯನ ಗಣೇಶ್, ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ವಿಭಾಗ ಪ್ರಭಾರಿಗಳಾದ ಉದಯ್ ಕುಮಾರ್ ಶೆಟ್ಟಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಕುಮಾರ್, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮಟ್ಟಾರು ರತ್ನಾಕರ ಹೆಗ್ಡೆ, ಶ್ಯಾಮಲ ಕುಂದರ್, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಅನಿಲ್ ಶೆಟ್ಟಿ , ಜಿಲ್ಲಾ ಸಹಕಾರಿ ಪ್ರಕೋಷ್ಠ ಸಂಚಾಲಕರಾದ ಮುರಳೀಧರ ಪೈ, ಮಂಡಲ ಪದಾಧಿಕಾರಿಗಳು ಭಾಗವಹಿಸಿದ್ದರು. ಮಂಡಲ ಹಾಗೂ ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.