Design a site like this with WordPress.com
Get started

ಕೇಂದ್ರ ಬಜೆಟ್ – ‘ಆತ್ಮ ನಿರ್ಭರದಿಂದ ಅಮೃತ ಕಾಲದತ್ತ ಭಾರತ’ : ಉಡುಪಿ ಜಿಲ್ಲಾ ಬಿಜೆಪಿ

News By: ಜನತಾಲೋಕವಾಣಿನ್ಯೂಸ್

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರವರು ಮಂಡಿಸಿರುವ ಕೇಂದ್ರ ಬಜೆಟ್-2023 ಒಂದು ಅತ್ಯುತ್ತಮ ಬಜೆಟ್. ‘ನೀರಸ ಜಗತ್ತಿಗೆ ಭಾರತ ಒಂದೇ ಭರವಸೆ’ ಎಂಬ ಮಾತಿನಂತೆ ಈ ಬಜೆಟ್ ಉತ್ತರದಾಯಿಯಾಗಿ ಮೂಡಿ ಬಂದಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ದಿವಾಕರ ಶೆಟ್ಟಿ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ 2023ಬೇ ಸಾಲಿನ ಕೇಂದ್ರ ಬಜೆಟ್ ಕುರಿತು ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಫೆಡರಲ್ ಸಿಸ್ಟಮ್‌ನಲ್ಲಿರುವ ಭಾರತದಂತಹ ದೇಶದಲ್ಲಿ ಇಂತಹ ಆಶಾದಾಯಕ ಬಜೆಟನ್ನು ಮಂಡಿಸಲು ನಿಖರವಾದ ದೂರದರ್ಶಿತ್ವ ಇಟ್ಟುಕೊಂಡಿರುವ ಸದೃಢ, ಸಶಕ್ತ ಸರಕಾರದಿಂದ ಮಾತ್ರ ಸಾಧ್ಯ. ಕೋವಿಡ್‌ನಂತಹ ಸಂಕಷ್ಟದ ಕಾಲದಲ್ಲಿ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿಗೆ ಲಸಿಕೆ ನೀಡಿರುವುದು ಭಾರತ. ಭವಿಷ್ಯದಲ್ಲಿ ದೇಶವನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕೆಂಬ ಉದಾತ್ತ ಚಿಂತನೆಯೊಂದಿಗೆ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡು ಸವಾಲುಗಳನ್ನು ಮೆಟ್ಟಿ ನಿಂತು ಆರ್ಥಿಕ ಶಿಸ್ತು ಕಾಪಾಡಿಕೊಂಡು ಮಂಡಿಸಿದ ಅಭಿವೃದ್ಧಿ ಪರ ಬಜೆಟ್ ಇದಾಗಿದೆ.

*ವೈಶಿಷ್ಟ್ಯತೆಗಳು :*

1. ಸ್ವಾತಂತ್ರ್ಯಾನಂತರ ಪ್ರಸಕ್ತ ನೂತನ ಸೆಂಟ್ರಲ್ ವಿಸ್ತಾ ಯೋಜನೆಯ ಹಿನ್ನೆಲೆಯಲ್ಲಿ ಪ್ರಸ್ತುತ ಪಾರ್ಲಿಮೆಂಟ್ ಭವನದಲ್ಲಿ ಮಂಡಿಸಿರುವ ಕೊನೆಯ ಬಜೆಟ್.

2. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 2ನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್.

3. ಬಜೆಟ್ ಗಾತ್ರ ರೂ.45.03 ಲಕ್ಷ ಕೋಟಿ.

4. ಈ ಬಜೆಟ್‌ನಲ್ಲಿ ವಿತ್ತೇಯ ಕೊರತೆ 5.9%.

5. 2022-23ರ ಬಜೆಟ್‌ಗೆ ಹೋಲಿಸಿದರೆ 14% ಪ್ರಗತಿ.

6. ‘ದೇಶದ ಅಮೃತ ಕಾಲದ ಮೊದಲ ಬಜೆಟ್’ ಎಂಬ ಖ್ಯಾತಿ.

7. ಅಭಿವೃದ್ಧಿಗೆ 7 ಸೂತ್ರಗಳನ್ನು ಇಟ್ಟುಕೊಂಡು ಮಾಡಿದ ಪ್ರಥಮ ಬಜೆಟ್.

*ಬಜೆಟ್‌ಗೆ ಪೂರಕ ಮತ್ತು ಉತ್ತೇಜಿತ ಅಂಶಗಳು :*

ಬಿಜೆಪಿ ನೇತೃತ್ವದ ಸರಕಾರದ 8 ವರ್ಷಗಳ ಸಾಧನೆಗಳೇ ಈ ಬಜೆಟ್ ಮಂಡನೆಗೆ ದಾರಿ ದೀಪ ಮತ್ತು ಮಾನದಂಡವಾಗಿದೆ.

1) ದೇಶದಲ್ಲಿ ಡಿಜಿಟಲ್ ಕ್ರಾಂತಿಯೇ ಜರಗುತ್ತಿದೆ. 2022ನೇ ವರ್ಷದಲ್ಲಿ ಸುಮಾರು ರೂ.7,400 ಕೋಟಿ ಡಿಜಿಟಲ್ ವ್ಯವಹಾರವಾಗಿದೆ.

2) ದೇಶದಲ್ಲಿ 11.74 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

3) ಉಜ್ವಲ ಯೋಜನೆಯಡಿಯಲ್ಲಿ ಸುಮಾರು 9.4 ಕೋಟಿ ಉಚಿತ ಗ್ಯಾಸ್ ಸಂಪರ್ಕ ಮಾಡಲಾಗಿದೆ.

4) 220 ಕೋಟಿ ಮಂದಿಗೆ ಉಚಿತ ಕೋವಿಡ್ ಲಸಿಕೆಯನ್ನು ನೀಡಲಾಗಿದೆ.

5) 47.8 ಕೋಟಿ ಜನ್‌ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.

6) ರೂ. 44.64 ಕೋಟಿ ಆಯುಷ್ಮಾನ್ ಆರೋಗ್ಯ ವಿಮೆ ಪಾವತಿಸಲಾಗಿದೆ.

7) ಕೃಷಿ ಸಮ್ಮಾನ್ ಯೋಜನೆಯಡಿ 11.4 ಕೋಟಿ ರೈತರಿಗೆ ರೂ.2.20 ಲಕ್ಷ ಕೋಟಿ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗಿದೆ.

*ನಾಲ್ಕು ಅವಕಾಶಗಳು (ಅಮೃತ ಕಾಲಕ್ಕೆ 4 ಸ್ತಂಭಗಳು):*

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ದೇಶದ ಬಹುಮುಖ್ಯ ನಾಲ್ಕು ಅವಕಾಶಗಳನ್ನು ಗುರುತಿಸಿ ಅದನ್ನು ಸದೃಢಗೊಳಿಸಲು ಪೂರಕ ವ್ಯವಸ್ಥೆಗಳನ್ನು ಒದಗಿಸಿದ್ದಾರೆ.

1) *ಆರ್ಥಿಕ ಬಲಾಡ್ಯ ನಾರೀ ಶಕ್ತಿ :*

ಮಹಿಳೆಯರ ಆರ್ಥಿಕ ಸಶಕ್ತೀಕರಣ, ಮಹಿಳಾ ಉಳಿತಾಯ ಪತ್ರ ಬಿಡುಗಡೆ ಮತ್ತು 81 ಲಕ್ಷ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು.

2) *ಸಾಂಪ್ರದಾಯಕ ಕುಶಲ ಕರ್ಮಿಗಳ ಕೌಶಲ್ಯ :*

‘ವಿಶ್ವಕರ್ಮ ಕೌಶಲ್ಯ ಸಮ್ಮಾನ ಯೋಜನೆ’ಯನ್ನು ರೂಪಿಸಿ ಎಲ್ಲಾ ತರಹದ ಕುಶಲ ಕರ್ಮಿಗಳಿಗೆ ಸಹಾಯ.

3) *ಪ್ರವಾಸ್ಕೋದ್ಯಮ ಗುರುತಿಸಿ ಅಭಿವೃದ್ಧಿ ಪಡಿಸುವುದು :*

ದೇಶದ 50 ಪ್ರವಾಸಿ ಕೇಂದ್ರಗಳನ್ನು ಗುರುತಿಸಿ, ಅಭಿವೃದ್ಧಿ ಪಡಿಸಿ, ಅಗತ್ಯ ಪ್ರಚಾರ ಮೂಲಕ ಮಾಹಿತಿ ನೀಡುವುದು.

4) *’ಹಸಿರೇ ಉಸಿರು’ ಎಂಬಂತೆ ಎಲ್ಲದರಲ್ಲಿಯೂ ಹಸಿರಿಗೆ ಉತ್ತೇಜನ :*

ಹಸಿರು ಇಂಧನ, ಹಸಿರು ಶಕ್ತಿ, ಹಸಿರು ಕೃಷಿ, ಹಸಿರು ಸಾರಿಗೆ, ಹಸಿರು ಕಟ್ಟಡ, ಹಸಿರು ಉಪಕರಣ, ಇಂಗಾಲದ ಹೊರ ಸೂಸುವಿಕೆ ತಡೆಯುವುದು.

*ಸಪ್ತ ಸೂತ್ರಗಳು :*

ಬಜೆಟ್ ವಿನಿಯೋಗವನ್ನು 7 ಮಜಲುಗಳನ್ನಾಗಿ ವಿಂಗಡಿಸಿ ಅದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಿ, ಹಣಕಾಸು ಒದಗಿಸಿ ದೇಶವು ತ್ವರಿತ ಗತಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವಂತೆ ಮಾಡುವ ಉದ್ದೇಶದಿಂದ ಸಪ್ತ ಸೂತ್ರಗಳನ್ನು ಅಳವಡಿಸಲಾಗಿದೆ.

1) *ಶ್ರೀ ಅನ್ನ ಯೋಜನೆ :*

ದೇಶದ 20 ರಾಜ್ಯಗಳಲ್ಲಿ ಸಿರಿಧಾನ್ಯ ಕೃಷಿಗೆ ಭಾರೀ ಪ್ರೋತ್ಸಾಹ, ಕೃಷಿ ಉತ್ತೇಜನ ನಿಧಿ ಸ್ಥಾಪಿಸುವುದು, ನರೇಗಾ ಯೋಜನೆಗೆ ರೂ.6,000 ಕೋಟಿ ಒದಲಿಸುವುದು. ಕೃಷಿಗೆ ರೂ.20 ಲಕ್ಷ ಕೋಟಿ ಸಾಲ.

2) *ವಿಶ್ವಕರ್ಮ ಕೌಶಲ್ಯ ಸಮ್ಮಾನ್ ಯೋಜನೆ :*

ಗುಡಿ ಕೈಗಾರಿಕೆ, ಬುಡಕಟ್ಟು ಜನಾಂಗಕ್ಕೆ ಉದ್ಯೋಗವಕಾಶ, ಆದಿವಾಸಿ ಹಾಗೂ ಕೊರಗ ಜನಾಂಗದವರಿಗೆ ವಿಫುಲ ಅವಕಾಶ.

3) *ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಧ್ಯಮ ವರ್ಗಕ್ಕೆ ಸರ್ವ ಸಹಕಾರ :*

ಹಿರಿಯರಿಗೆ ಉಳಿತಾಯ ಯೋಜನೆ, ಸ್ತ್ರೀಯರಿಗೆ ಸಮ್ಮಾನ ಯೋಜನೆ, ಮಹಿಳಾ ಉಳಿತಾಯ ಪತ್ರ ಹಾಗೂ ಮಧ್ಯಮ ವರ್ಗಕ್ಕೆ ಉತ್ತೇಜನ.

4) *ಕೌಶಲ್ಯಾಭಿವೃದ್ಧಿ ಮೂಲಕ ಯುವ ಶಕ್ತಿಗೆ ಉತ್ತೇಜನ :*

ದೆಹಲಿಯಲ್ಲಿ ಯುನಿಟಿ ಮಾಲ್, ಸ್ಕಿಲ್ ಇಂಡಿಯಾ ಸೆಂಟರ್, 3 ವರ್ಷದಲ್ಲಿ 47 ಲಕ್ಷ ಯುವಕರಿಗೆ ಸ್ಟೈಪಂಡ್.

5) *ಹಸಿರು ಹೊದಿಕೆ :*

ಎಲ್ಲಾ ಅಭಿವೃದ್ಧಿ ವಿಷಯದಲ್ಲಿ ಹಸಿರೇ ಉಸಿರು ಎಂಬ ಧ್ಯೇಯದೊಂದಿಗೆ ಯೋಜನೆ.

8) *ಮೂಲ ಸೌಕರ್ಯ ಹೆಚ್ಚಿಸುವುದು :*

ರಸ್ತೆ, ರೈಲು, ಮುಂತಾದ ಮೂಲ ಸೌಕರ್ಯಕ್ಕೆ ದಾಖಲೆ ಮಟ್ಟದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಈ ಪ್ರಮಾಣ ಕಳೆದ ವರ್ಷಕ್ಕಿಂತ 33% ಹೆಚ್ಚಳವಾಗಿದೆ.

7) *ಡಿಜಿಟಲ್ ಟಚ್:*

100 ಹೆಚ್ಚಿನ ಲ್ಯಾಬ್ ಸ್ಥಾಪನೆ ಹಾಗೂ ಎಲ್ಲಾ ವಲಯಕ್ಕೆ 5ಜಿ ಸೇವೆ.

*ಆದಾಯ ತೆರಿಗೆ :*

ಆದಾಯ ತೆರಿಗೆಯ ಹೊಸ ನಿಯಮದಲ್ಲಿ ಐತಿಹಾಸಿಕ ಬದಲಾವಣೆ ಮಾಡಲಾಗಿದ್ದು, ರೂ.7.00 ಲಕ್ಷದ ವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ವೇತನದಾರರಿಗೆ ರೂ.50,000/- ಸ್ಟ್ಯಾಂಡರ್ಡ್ ಡಿಡಕ್ಷನ್ ಅವಕಾಶ

*ಆದಾಯ ತೆರಿಗೆ ದರ*
0 ರಿಂದ 3 ಲಕ್ಷ .. 0%
3 ರಿಂದ 6 ಲಕ್ಷ .. 5%
6 ರಿಂದ 9 ಲಕ್ಷ .. 10%
9 ರಿಂದ 12 ಲಕ್ಷ .. 15%
12 ರಿಂದ 15 ಲಕ್ಷ .. 20%
20 ರಿಂದ .. 30%

*ಉಲ್ಲೇಖನೀಯ ಅಂಶಗಳು :*

1) ಬಿಜೆಪಿ ಸರಕಾರ ಬರುವ ಮೊದಲು ಬಜೆಟ್ ಗಾತ್ರ ರೂ.15.00 ಲಕ್ಷ ಕೋಟಿ ಆಗಿದ್ದು, ಪ್ರಸಕ್ತ ಬಜೆಟ್ ಗಾತ್ರ ರೂ.45.03 ಲಕ್ಷ ಕೋಟಿ ಆಗಿರುತ್ತದೆ. ಅಂದರೆ 3 ಪಟ್ಟು ಹೆಚ್ಚಳವಾಗಿದೆ.

2) ಅದೇ ರೀತಿ 2013ರಲ್ಲಿ ದೇಶದ ಜಿ.ಡಿ.ಪಿ. ರೂ.112.00 ಲಕ್ಷ ಕೋಟಿ ಆಗಿದ್ದು, ಈಗ ರೂ.270.00 ಲಕ್ಷ ಕೋಟಿ ಆಗಿರುತ್ತದೆ. ಅಂದರೆ ಎರಡೂವರೆ ಪಟ್ಟು ಹೆಚ್ಚಳವಾಗಿದೆ.

3) ಬಿಜೆಪಿ ಸರಕಾರ ಬರುವ ಮೊದಲು ವಿಶ್ವದಲ್ಲಿ ಭಾರತ 10ನೇ ಆರ್ಥಿಕ ಶಕ್ತಿಯಾಗಿತ್ತು. ಪ್ರಸಕ್ತ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ.

4) ಐ.ಎಂ.ಎಫ್., ವಿಶ್ವ ಬ್ಯಾಂಕ್ ಮತ್ತು ತಜ್ಞರ ಅಂದಾಜಿನ ಪ್ರಕಾರ 2030ಕ್ಕೆ ಭಾರತ 3ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. 2045ಕ್ಕೆ ಭಾರತ 2ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ.

5) ದೇಶದ ವಿದೇಶಿ ವಿನಿಮಯ ಗಾತ್ರ 600 ಬಿಲಿಯನ್ ಡಾಲರ್ ತಲುಪಿದೆ.

6) ದೇಶದ ಅಭಿವೃದ್ಧಿಯ ಧನಾತ್ಮಕ ಚಿಂತನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಹಾಗೂ ಸದೃಢ ಸರಕಾರದಿಂದ ಮಾತ್ರ ಇಂತಹ ಅಭಿವೃದ್ಧಿ ಪರ, ಜನ ಪರ ಬಜೆಟ್ ಮೂಲಕ ಐತಿಹಾಸಿಕ ಸಾಧನೆ ಸಾಧ್ಯವಾಗಲಿದೆ.

*ಐ.ಎಂ.ಎಫ್. ಮಾತಿನಂತೆ ‘ಭಾರತ ಇಂದು ವಿಶ್ವದ ಪ್ರಕಾಶಮಾನ ಕೇಂದ್ರ’.*

*ಬಜೆಟ್ ನಲ್ಲಿ ಘೋಷಿಸಿದ ಪ್ರಮುಖ ಯೋಜನೆಗಳು :*

1) ಕೋವಿಡ್ ಕಾಲದಲ್ಲಿ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗಿತ್ತು, ಅದನ್ನು ಡಿ.31, 2023ರ ವರೆಗೆ ವಿಸ್ತರಿಸಲಾಗಿದೆ.

2) 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.

3) ಎಲ್ಲಾ ನಗರಕ್ಕೆ ಸ್ಯಾನಿಟೇಶನ್ ಯಂತ್ರ ಸರಬರಾಜು ಮಾಡುವ ಯೋಜನೆ ಹಾಕಲಾಗಿದೆ.

4) ಏಕಲವ್ಯ ವಸತಿ ಶಾಲೆಗಳಗೆ 38,000 ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ.

5) 5ಜಿ ಸೇವೆಗಾಗಿ 100 ಹೊಸ ಲ್ಯಾಬ್‌ಗಳನ್ನು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ಥಾಪಿಸಲಾಗುವುದು.

8) 50 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು.

7) 50 ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಿ, ಪ್ರಚುರಪಡಿಸಲಾಗುವುದು.

8) ಎಲ್ಲಾ ರಾಜ್ಯಗಳಿಗೂ ‘ವಂದೇ ಭಾರತ’ ರೈಲು ಓಡಿಸಲಾಗುವುದು.

9) ಸಹಕಾರಿ ಸಂಘಗಳ ಪಕ್ಕಾ ಲೆಕ್ಕ ತೆಗೆದು ಅದನ್ನು ಅಭಿವೃದ್ಧಿ ಪಡಿಸಿ ರೂ.3 ಕೋಟಿ ತನಕ ವ್ಯವಹಾರ ನಡೆಸಲಾಗುವುದು.

10) ಕಳೆದ ವರ್ಷದ ಬಜೆಟ್ ಕೊರತೆ 8.70%; ಆದರೆ ಈ ಬಾರಿಯ ಕೊರತೆ 5.90% ಆಗಿದ್ದು, 2025ರ ನಂತರ 3.50%ರ ಗುರಿ ಹಾಕಲಾಗಿದೆ.

11) ಮೂಲಭೂತ ಸೌಕರ್ಯಕ್ಕಾಗಿ ರಾಜ್ಯಗಳಿಗೆ 50 ವರ್ಷದ ಬಡ್ಡಿ ರಹಿತ ಸಾಲ ನೀಡಲು ರೂ.1.50 ಲಕ್ಷ ಕೋಟಿ ನಿಗದಿಪಡಿಸಲಾಗಿದೆ.

12) ನಿರ್ಯಾತ ಜಾಸ್ತಿ ಮಾಡುವ ಗುರಿಯೊಂದಿಗೆ ಆಮದು ಮಾಡುವ ಕಚ್ಚಾ ವಸ್ತುವಿಗೆ ಕಸ್ಟಂ ಡ್ಯೂಟಿ ಕಡಿಮೆ ಮಾಡಲಾಗಿದೆ.

13) ಸಿರಿಧಾನ್ಯಕ್ಕೆ ‘ಶ್ರೀ ಅನ್ನ ಯೋಜನೆ’ ಜಾರಿ ಮಾಡಿ 20 ರಾಜ್ಯಗಳಲ್ಲಿ ಬೆಳೆಯಲು ಗುರಿ ನಿಗದಿಪಡಿಸಲಾಗಿದೆ.

14) ಕೃಷಿ, ಹೈನು, ಪಶು, ಮೀನುಗಾರಿಕೆಗಳ ಸಾಲಕ್ಕಾಗಿ ರೂ.20 ಲಕ್ಷ ಕೋಟಿ ತೆಗೆದಿರಿಸಲಾಗಿದೆ.

15) ಮತ್ಸ್ಯ ಸಂಪದಕ್ಕೆ ರೂ.8,೦೦೦ ಕೋಟಿ ತೆಗೆದಿರಿಸಲಾಗಿದೆ.

16) ರೋಗ ಮುಕ್ತ ಗಿಡ ಸರಬರಾಜಿಗಾಗಿ ರೂ.2,200 ಕೋಟಿ ಒದಗಿಸಲಾಗಿದೆ.

17) ಆರೋಗ್ಯ ಕ್ಷೇತ್ರಕ್ಕೆ ರೂ.88,956 ಕೋಟಿಯನ್ನು ಒದಗಿಸಲಾಗಿದೆ.

18) ಉದ್ಯಮಕ್ಕೆ ಸಿಂಗಲ್ ವಿಂಡೋ ಸ್ಥಾಪಿಸಿ ಪಾನ್ ಸಂಖ್ಯೆಯ ಒಂದೇ ದಾಖಲೆ ಮಾಡಲಾಗುವುದು.

19) ಹಿರಿಯ ನಾಗರಿಕರಿಗೆ ಹೆಚ್ಚಿನ ಅನುಕೂಲ ಮಾಡಲಾಗಿದೆ.

20) ಮಹಿಳಾ ಸಂಪದದಂತೆ ಎಂ.ಎಸ್.ಎಸ್. ಪತ್ರ 2 ವರ್ಷಕ್ಕೆ ರೂ.2 ಲಕ್ಷ ನಿಗದಿಪಡಿಸಲಾಗಿದೆ.

21) ಪ್ರಧಾನಮಂತ್ರಿ ಆವಾಸ್ ಯೋಜನೆಗೆ ರೂ.78,000 ಕೋಟಿ ನಿಗದಿಪಡಿಸಲಾಗಿದೆ.

22) ‘ದೇಖೋ ಅಪ್ನಾ ದೇಶ್’ ಉಲ್ಲೇಖದೊಂದಿಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು.

23) 30 ಸ್ಕಿಲ್ ಇಂಡಿಯಾ ಕೌನ್ಸಿಲ್ ಗಳನ್ನು ಸ್ಥಾಪಿಸಲಾಗುವುದು.

24) ಪ್ರತೀ ಜಿಲ್ಲೆಗಳಲ್ಲಿ ಶಿಕ್ಷಕ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು.

25) ಸರಕಾರಿ ನೌಕರರಿಗೆ ತರಬೇತಿಗಾಗಿ ‘ಮಿಶನ್ ಕರ್ಮಯೋಗಿ ಯೋಜನೆ’ ಹಾಕಲಾಗಿದೆ.

26) ಸಣ್ಣ ಕೈಗಾರಿಕೆಗಳಿಗೆ ತೆರಿಗೆ ರಾಜಿ ಪದ್ಧತಿ ತರಲಾಗಿದೆ.

27) ಕರ್ನಾಟಕದ ಭದ್ರಾ 2ನೇ ಹಂತದ ಯೋಜನೆಗೆ ರೂ.5,300 ಕೋಟಿ ತೆಗೆದಿಟ್ಟು, ಅದನ್ನು ರಾಷ್ಟ್ರೀಯ ಯೋಜನೆ ಮಾಡಲಾಗಿದೆ.

28) ಈ ಸಲದ ಬಜೆಟ್ ‘ಹಸಿರು ಬಜೆಟ್’ ಆಗಿದ್ದು, ಹಸಿರು ಯೋಜನೆ ಎಲ್ಲಾ ಘಟ್ಟಗಳಲ್ಲಿ ಹಾಕಿಕೊಳ್ಳಲಾಗಿದೆ.

29) ಕರ್ನಾಟಕದ ನಿಮ್ಯಾನ್ಸ್ ಆಸ್ಪತ್ರೆಗೆ ರೂ.130 ಕೋಟಿ ಕಾದಿರಿಸಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: