Design a site like this with WordPress.com
Get started

ಸರ್ವ ಸ್ಪರ್ಶಿ ಸರ್ವ ವ್ಯಾಪಿ ಹಸಿರು ಬಜೆಟ್ : ಕುಯಿಲಾಡಿ ಸುರೇಶ್ ನಾಯಕ್

News By: ಜನತಾಲೋಕವಾಣಿನ್ಯೂಸ್

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಈ ಬಾರಿ ಮಂಡಿಸಿರುವ ಬಜೆಟ್ ಯುವ ಸ್ನೇಹಿ, ರೈತ ಸ್ನೇಹಿಯಾಗಿ ಸಪ್ತ ಸೂತ್ರಗಳೊಂದಿಗೆ ಸರ್ವ ಸ್ಪರ್ಶಿ ಸರ್ವ ವ್ಯಾಪಿ ಹಸಿರು ಬಜೆಟ್ ಆಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ವಿನಿಯೋಗಿಸುವ ಉತ್ತಮ ದೂರದರ್ಶಿತ್ವದ ಯೋಜನೆ ನೀಡಲಾಗಿದೆ. ಜಗತ್ತಿನೆಲ್ಲೆಡೆ ಆರ್ಥಿಕ ಹಿಂಜರಿತ ಇದ್ದರೂ ದೇಶದ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋವಿಡ್ ಸಂದರ್ಭದಲ್ಲಿ ಘೋಷಿಸಿರುವ ಸಣ್ಣ ಉದ್ದಿಮೆದಾರರಿಗೆ ನೀಡುವ ರೂ.10 ಲಕ್ಷ ಸಾಲ ಯೋಜನೆಯಾದ ‘ಕ್ರೆಡಿಟ್ ಗ್ಯಾರಂಟಿ’ಯನ್ನು ಮುಂದುವರಿಸಲಾಗಿದೆ. ಜೊತೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಘೋಷಿಸಿರುವ ಬಡವರಿಗೆ ಉಚಿತ ಪಡಿತರ ನೀಡುವ ‘ಶ್ರೀ ಅನ್ನ ಯೋಜನೆ’ಯನ್ನು ಮುಂದುವರಿಸಲಾಗಿದೆ. 50 ಹೊಸ ವಿಮಾನ ನಿಲ್ದಾಣಗಳ ಘೋಷಣೆ ಸಹಿತ 30 ರಾಜ್ಯಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಯೋಜನೆಯ ಮೂಲಕ ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಲಾಗಿದೆ.

ಕುಶಲಕರ್ಮಿಗಳಿಗೆ ‘ವಿಶ್ವಕರ್ಮ ಕೌಶಲ್ಯ ಅಭಿವೃದ್ಧಿ’ ಯೋಜನೆ ಜಾರಿಗೊಳಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಜೊತೆಗೆ ವಾಹನ ಗುಜರಿ ನೀತಿಯಡಿ ಹಳೆ ಸರ್ಕಾರಿ ವಾಹನಗಳನ್ನು ಬದಲಾಯಿಸುವಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಮಹಿಳಾ ಉದ್ದಿಮೆದಾರರಿಗೆ ‘ಮಹಿಳಾ ಸಮ್ಮಾನ್’ ಯೋಜನೆ ಜಾರಿಗೊಳಿಸಲಾಗಿದೆ. ಮಧ್ಯಮ ವರ್ಗದ ಜನತೆಗೆ ಆದಾಯ ತೆರಿಗೆಯಲ್ಲಿ ಬಹುನಿರೀಕ್ಷಿತ ವಿನಾಯಿತಿ ಘೋಷಿಸಲಾಗಿದೆ.

ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ; ಕಟ್ಟಕಡೆಯ ಜನತೆಯನ್ನು ತಲುಪುವುದು; ಮೂಲಸೌಕರ್ಯ; ಸಾಮರ್ಥ್ಯದ ಸದ್ಬಳಕೆ; ಪರಿಸರ ಸ್ನೇಹಿ ಅಭಿವೃದ್ಧಿ; ಯುವಶಕ್ತಿಗೆ ಉತ್ತೇಜನ; ಅರ್ಥಿಕ ಸುಧಾರಣೆ, ಈ ಸಪ್ತ ಮಂತ್ರಗಳ ಭದ್ರ ಬುನಾದಿಯಲ್ಲಿ ಮಂಡಿಸಿರುವ ಕೇಂದ್ರ ಬಜೆಟ್ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಲಿದೆ.

ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವ ಜೊತೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಸಾಮಾನ್ಯ ಜನತೆ, ಕೃಷಿಕರು, ಉದ್ಯಮ, ಯುವ ಮತ್ತು ಮಹಿಳಾ ವರ್ಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿರುವ ಅತ್ಯುತ್ತಮ ಬಜೆಟ್ ಇದಾಗಿದೆ ಎಂದು ಕುಯಿಲಾಡಿ ತಿಳಿಸಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: