
News By: ಜನತಾಲೋಕವಾಣಿನ್ಯೂಸ್
ಉಡುಪಿ: ಪಕ್ಷದ ಸೂಚನೆಯಂತೆ ‘ವಿಜಯ ಸಂಕಲ್ಪ ಅಭಿಯಾನ’ದ ಅಂಗವಾಗಿ ಜ.29ರಂದು ಅಂಬಲಪಾಡಿ ಬೂತ್ 178ರ ವ್ಯಾಪ್ತಿಯಲ್ಲಿ ನಡೆದ ಮನೆ ಮನೆ ಬೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಅಂಬಲಪಾಡಿ ಶರತ್ ಶೆಟ್ಟಿ ಯವರ ಮನೆಯಲ್ಲಿ ವೀಕ್ಷಿಸಿ, ವರದಿ ಮತ್ತು ಫೋಟೋವನ್ನು ಆನ್ಲೈನ್ ಮೂಲಕ ‘ಮನ್ ಕೀ ಬಾತ್’ ವೆಬ್ಸೈಟ್ ಗೆ ಅಪ್ಲೋಡ್ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯೋಗೀಶ್ ಶೆಟ್ಟಿ ಅಂಬಲಪಾಡಿ, ಅಂಬಲಪಾಡಿ ಬೂತ್ 178ರ ಅಧ್ಯಕ್ಷ ಮಹೇಂದ್ರ ಕೋಟ್ಯಾನ್, ಕಾರ್ಯದರ್ಶಿ ಅಶೋಕ್ ಅಂಚನ್, ಅಂಬಲಪಾಡಿ-ಕಡೆಕಾರು ಮಹಾಶಕ್ತಿ ಕೇಂದ್ರದ ಯುವ ಮೋರ್ಚಾ ಉಪಾಧ್ಯಕ್ಷ ವಿನೋದ್ ಪೂಜಾರಿ, ಪಕ್ಷದ ಪ್ರಮುಖರಾದ ಅನಿಲ್ ರಾಜ್ ಅಂಚನ್, ಪ್ರವೀಣ್ ಕುಮಾರ್, ಬೂತ್ ಸಮಿತಿ ಸದಸ್ಯರು ಹಾಗೂ ಶರತ್ ಶೆಟ್ಟಿ ಮತ್ತು ಮನೆಯವರು ಉಪಸ್ಥಿತರಿದ್ದರು.