
News by: ಜನತಾಲೋಕವಾಣಿನ್ಯೂಸ್
ಕಾಪು: ಮಣಿಪುರ ಗ್ರಾಮ ಪಂಚಾಯತ್ ಬೂತ್ ಸಂಖ್ಯೆ 54 ರ ಬೂತ್ ಸಭೆ ಇಂದು ನಡೆಯಿತು. ಅಧ್ಯಕ್ಷತೆಯನ್ನು ಬೂತ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ವಹಿಸಿದ್ದರು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಬಿಜೆಪಿ ಬೆಳೆದು ಬಂದ ಹಾದಿ, ಪ್ರಸ್ತುತ ದೇಶದ ವಿಚಾರಗಳು ಹಾಗೂ ಬೂತ್ ವಿಜಯ ಅಭಿಯಾನದ ಬಗ್ಗೆ ವಿವರಿಸಿದರು. ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಪಕ್ಷದ ಬಲವರ್ಧನೆ ಮಾಡಲು ವಿನಂತಿಸಿದರು. ಪಂಚಾಯತ್ ಸದಸ್ಯರುಗಳಾದ ಆಶಾ, ಪದ್ಮಾನಾಭ ನಾಯಕ್, ಶಕ್ತಿಕೇಂದ್ರ ಪ್ರಮುಖ್ ಪ್ರಜ್ವಲ್ ಹೆಗ್ಡೆ ಹಾಗೂ ರಾಜೇಶ್, ವಿಸ್ತಾರಕ್ ದಿನಕರ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾದ ವಿಜಯ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.