
NEWS By: ಜನತಾಲೋಕವಾಣಿನ್ಯೂಸ್
ಕಾಪು: ಪಡುಬಿದ್ರಿ ಪಂಚಾಯತ್ ನ 181 & 182 ನೇ ಬೂತ್ ಪ್ರಮುಖರ ಸಭೆಯು ಶಕ್ತಿಕೇಂದ್ರ ಅಧ್ಯಕ್ಷರಾದ ರವಿಶೆಟ್ಟಿ ಅವರ ಮನೆಯಲ್ಲಿ ನಡೆಯಿತು. *ಬೂತ್ ವಿಜಯ ಅಭಿಯಾನದ* ಬಗ್ಗೆ ಸಭೆಯಲ್ಲಿ ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಪಕ್ಷ ನೀಡಿದ ಐದು ಅಂಶಗಳ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆ ಬೆಟ್ಟು ಜಿಲ್ಲಾ ಉಸ್ತುವಾರಿಗಳಾದ ಕೇಸರಿ ಯುವರಾಜ್ ಹಾಗೂ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಹಿರಿಯರಾದ ರಮಾಕಾಂತ್ ದೇವಾಡಿಗ, ಬಾಲಕ್ರಷ್ಣ ದೇವಾಡಿಗ, ಪಂಚಾಯತ್ ಸದಸ್ಯರುಗಳು ಕಾರ್ಯಕರ್ತರು ಪಕ್ಷದ ಪ್ರಮುಖರು ಹಾಜರಿದ್ದರು.