
News by: ಜನತಾಲೋಕವಾಣಿನ್ಯೂಸ್
ಕಾಪು: ಇಂದು ದಿನಾಂಕ 24/12/2022 ಕಾಪು ಮಂಡಲ ಮಹಿಳಾಮೋರ್ಚಾದಿಂದ “ಆದರ್ಶ ಅಂಗನವಾಡಿ ಅಭಿಯಾನ ” ಕಾರ್ಯಕ್ರಮಕ್ಕೆ ಆಯ್ಕೆಯಾದ ಕುತ್ಯಾರು ಯುವಕ ಮಂಡಲದ ಬಳಿಯಲ್ಲಿರುವ ಅಂಗನವಾಡಿಯಲ್ಲಿ ಸಮಾರೋಪ ಸಮಾರಂಭ ನಡೆಯಿತು .
ಪ್ರಾರಂಭದಲ್ಲಿ ಅಂಗನವಾಡಿಯ ಮಕ್ಕಳಿಗೆ ಆರೋಗ್ಯ ತಪಾಸಣಾ ನಡೆಯಿತು . ಅಂಗನವಾಡಿಯ ಸುತ್ತ ಇಂಟರ್ ಲಾಕ್ ಹಾಗು ಗೋಡೆಗೆ ಪೈಂಟ್ ನ ಅಗತ್ಯ ಇದ್ದು ಕಾಪು ಶಾಸಕರಾದ ಶ್ರೀಯುತ ಲಾಲಾಜಿ ಆರ್ ಮೆಂಡನ್ ಅವರು ಸರಕಾರದ ವತಿಯಿಂದ 2.00 ಲಕ್ಷ ಅನುದಾನವನ್ನು ಒದಗಿಸಿ ಕೊಟ್ಟರು . ಇಂದು ಅಂಗನವಾಡಿಗೆ ಅಗತ್ಯ ಇದ್ದ ಎಲ್ಲಾ ಕಾಮಗಾರಿಗಳನ್ನು ಸಂಪೂರ್ಣ ಗೊಳಿಸಿ ಹಾಗೆಯೇ ಮಕ್ಕಳಿಗೆ ಅಗತ್ಯವಿರುವ ಚಾರ್ಟ್, ಚಾಪೆ ,ಆಟಿಕೆ ಸಾಮಾನುಗಳನ್ನು ಒದಗಿಸಿ ಕಾಪು ಮಂಡಲ ಮಹಿಳಾಮೋರ್ಚಾದಿಂದ ಆದರ್ಶ ಅಂಗನವಾಡಿ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ದತ್ತು ಪಡೆದ ಕುತ್ಯಾರು ಯುವಕ ಮಂಡಲದ ಬಳಿಯಲ್ಲಿರುವ ಅಂಗನವಾಡಿಯಲ್ಲಿ ಸಮಾರೋಪ ಕಾರ್ಯಕ್ರಮವನ್ನು ನೆರವೇರಿಸಲಾಯಿತು .
ಕಾಪು ಮಂಡಲದ ಮಹಿಳಾಮೋರ್ಚಾದ ಅಧ್ಯಕ್ಷರಾದ ಸುಮಾ ಶೆಟ್ಟಿ ಅವರು ಸ್ವಾಗತ ಮಾಡಿದರು . ರಾಜ್ಯ ಮಹಿಳಾಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು . ದೀಪ ಬೆಳಗಿಸಿ ಕಾಪು ಶಾಸಕರಾದ ಶ್ರೀಯುತ ಲಾಲಾಜಿ ಆರ್ ಮೆಂಡನ್ ಅವರು ದತ್ತು ಪಡೆದ ಅಂಗನವಾಡಿಯನ್ನು ಮತ್ತು ವಿವಧ ಪರಿಕರಗಳನ್ನು ಹಸ್ತಾಂತರ ಮಾಡಿದರು .ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ , ನಿಕಟಪೂರ್ವ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ ಮತ್ತು ಜಿಲ್ಲಾ ಮಹಿಳಾಮೋರ್ಚಾದ ಅಧ್ಯಕ್ಷರಾದ ವೀಣಾ ಶೆಟ್ಟಿ ಅವರು ಶುಭಸಂಶನೆಗೈದರು. ಕಾರ್ಯಕ್ರಮದಲ್ಲಿ ಕುತ್ಯಾರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಲತಾ ಆಚಾರ್ಯ, ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ , ಉಪಾಧ್ಯಕ್ಷರಾದ ಗೀತಾಂಜಲಿ ಸುವರ್ಣ, ಜಿಲ್ಲಾ ಮಹಿಳಾಮೋರ್ಚಾದ ಪ್ರಧಾನ ಕಾರ್ಯದರ್ಶಿ ರಶ್ಮಿತ ಶೆಟ್ಟಿ , ಶಿರ್ವ ಸಿ ಎ ಬ್ಯಾಂಕಿನ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ ,ಫಲಿಮಾರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಮಕ್ಕಳ ಪೋಷಕರು , ಅಂಗನವಾಡಿಯ ಕಾರ್ಯಕರ್ತೆ ಇಂದಿರಾ ಶೆಟ್ಟಿ , ಸಹಾಯಕಿ ನಿಶಾ ಅವರು ಶಾಸಕರನ್ನು ಗೌರವಿಸಿದರು . ಉಪಸ್ಥಿತರಿದ್ದರು . ಕಾಪು ಮಂಡಲ ಮಹಿಳಾಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುರೇಖಾ ಶೈಲೇಶ್ ನಿರೂಪಣೆ ಮಾಡಿದರು , ಮಂಡಲ ಮಹಿಳಾಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ನೀತಾ ಗುರುರಾಜ್ ಅವರು ವಂದನಾರ್ಪಣೆ ಮಾಡಿದರು .