ಅಗ್ನಿಪಥ್ ಯೋಜನೆಯಲ್ಲಿ ಅಗ್ನಿವೀರ ಸೈನಿಕನಾಗಿ ಅಲೆವೂರಿನ ಯುವಕ ಚಿದಾನಂದ ಆಯ್ಕೆ:ಶಾಸಕ ಲಾಲಾಜಿ ಆರ್ ಮೆಂಡನ್ ಅವರಿಂದ ಗೌರವಾರ್ಪಣೆ

News by: ಜನತಾಲೋಕವಾಣಿನ್ಯೂಸ್

ಕಾಪು: ಮೋದೀಜಿ ಸರಕಾರದ ನೂತನ ಯೋಜನೆಯಾದ ಅಗ್ನಿಪಥ್ ಯೋಜನೆಯಲ್ಲಿ ಅಗ್ನಿವೀರ ಸೈನಿಕನಾಗಿ ಆಯ್ಕೆಯಾದ ಅಲೆವೂರಿನ ಯುವಕ ಚಿದಾನಂದ ಇವರನ್ನು, ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ಮನೆಗೆ ತೆರಳಿ ಗೌರವಾರ್ಪಣೆ ಮಾಡಿದರು. ಜಿಲ್ಲೆಯಲ್ಲಿ ಕೇವಲ 2 ಜನ ಅಗ್ನಿವೀರರಾಗಿ ಆಯ್ಕೆಯಾಗಿದ್ದು ,ಮಾನ್ಯ ಶಾಸಕರು ಸೈನಿಕರ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೊರಂಗ್ರಪಾಡಿ ಸಿಎ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಸೇರಿಗಾರ್, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಪಂಚಾಯತ್ ಸದಸ್ಯರು, ಮಾಜಿ ಅಧ್ಯಕ್ಷರಾದ ಶಶಿಕಲಾ ಶೆಟ್ಟಿ, ಶಕ್ತಿಕೇಂದ್ರ ಪ್ರಮುಖರುಗಳಾದ ಆಶೀಶ್ ಶೆಟ್ಟಿ, ಶೇಖರ ಆಚಾರ್ಯ, ಕಾರ್ಯಕರ್ತರುಗಳಾದ ಸುರೇಶ್ ನಾಯಕ್, ಹನಮಪ್ಪ ಮಾದರ ಗುರುಕಿರಣ್ ಮತ್ತಿತರರು ಉಪಸ್ಥಿತರಿದ್ದರು. ಅರುಣ್ ಆಚಾರ್ಯ ಇವರ ಮುತುವರ್ಜಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಚಿದಾನಂದ ರವರ ತಂದೆ ರಮೇಶ್ ತಾಯಿ ರಂಗವ್ವ ಮತ್ತು ಸಹೋದರ ಉಪಸ್ಥಿತರಿದ್ದರು.

Leave a comment

Design a site like this with WordPress.com
Get started