
News by: ಜನತಾಲೋಕವಾಣಿನ್ಯೂಸ್
ಬೆಂಗಳೂರು: ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ನಾಡ ಪ್ರಭು ಕೆಂಪೇಗೌಡರ ಹೆಸರು ಇಡುವ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಬಿಜೆಪಿ ದಾಖಲೆ ಬಿಡುಗಡೆ ಮಾಡಿ ತಿರುಗೇಟು ನೀಡಿದೆ.
ಇಂದು ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಭೇಟಿ ನೀಡಿ, ಕೆಂಪೇಗೌಡ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಈ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಪ್ರತ್ಯುತ್ತರ ನೀಡಿದೆ.
ಹುಟ್ಟುವ ಮಗುವಿಗೆಲ್ಲಾ ನಾಮಕರಣ ಮಾಡಿದ್ದು ನಾನೇ ಎನ್ನುವಂತೆ ಹೇಳಿಕೊಳ್ಳುವ ಸಿದ್ದರಾಮಯ್ಯನವರೇ, ಏರ್ಪೋಟ್’ಗೆ ನಾಡ ಪ್ರಭು ಕೆಂಪೇಗೌಡರ ಹೆಸರು ಇಡುವ ತೀರ್ಮಾನ ಮಾಡಿದ್ದು ಬಿಜೆಪಿ ಸರ್ಕಾರ. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಫೆಬ್ರವರಿ 27, 2009 ರಲ್ಲಿಯೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅಲ್ಲದೇ 2011 ಮಾರ್ಚ್ 4 ರಂದು ಸದನದಲ್ಲಿ ಘೋಷಣೆ ಮಾಡಿ, ಮಾರ್ಚ್ 7 ರಂದು ರಾಜ್ಯ ಸಚಿವ ಸಂಪುಟದಲ್ಲಿ ಆದೇಶ ಮಾಡಿತ್ತು.
ಆದರೆ, ಕೆಂಪೇಗೌಡರ ಹೆಸರನ್ನು ಏರ್ಪೋಟ್’ಗೆ ಇಡಬೇಕೊ? ಬೇಡವೊ ಎಂದು ತೀರ್ಮಾನ ಮಾಡಲು ಅಂದಿನ ಯುಪಿ ಸರ್ಕಾರ 4 ವರ್ಷ ತೆಗೆದುಕೊಂಡಿತ್ತು.
ಇದೀಗ ಟಿವಿ ಕ್ಯಾಮರಾ ಮುಂದೆ ಬಂದು ಒಳ್ಳೆಯದಕ್ಕೆಲ್ಲಾ ನಾನೇ ಕಾರಣ ಎನ್ನುವ ಸಿದ್ದರಾಮಯ್ಯರೇ, ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ನಾಲ್ಕು ವರ್ಷ ನಿಮ್ಮ ಯುಪಿಎ ಸರ್ಕಾರ ಕಾಯಿಸಿದ್ದು ಯಾಕೆ ?
ರಾಜ್ಯದ ಜನತೆಗೆ ಉತ್ತರ ಹೇಳಿ. ಉತ್ತರ ಇದೆಯೆ ಸುಳ್ಳುರಾಮಯ್ಯ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.