
News by: ಜನತಾಲೋಕವಾಣಿನ್ಯೂಸ್
ಉಡುಪಿ: ‘ಸೇವಾ ಪಾಕ್ಷಿಕ’ ಅಭಿಯಾನ ಹಾಗೂ ‘ಗಾಂಧಿ ಜಯಂತಿ’ ಆಚರಣೆ ಪ್ರಯುಕ್ತ ಅ.2 ರವಿವಾರ ಬಿಜೆಪಿ ಉಡುಪಿ ಜಿಲ್ಲೆಯಾದ್ಯಂತ ವಿವಿಧ ಮಂಡಲಗಳ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ‘ಖಾದಿ ಮೇಳ’ವನ್ನು ಆಯೋಜಿಸಿದೆ:
* ಜಿಲ್ಲಾ ಬಿಜೆಪಿ ವತಿಯಿಂದ : ಬಿಜೆಪಿ ಜಿಲ್ಲಾ ಕಛೇರಿ ಉಡುಪಿ (ಬೆಳಿಗ್ಗೆ 10.00ಕ್ಕೆ)
ಉದ್ಘಾಟನೆ: ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾಧ್ಯಕ್ಷರು, ಬಿಜೆಪಿ ಉಡುಪಿ ಜಿಲ್ಲೆ
* ಕಾರ್ಕಳ ಮಂಡಲ : ಕಾರ್ಕಳ ಬಸ್ ನಿಲ್ದಾಣ (3 ದಿನಗಳು) (ಬೆಳಿಗ್ಗೆ 7.30ಕ್ಕೆ)
ಉದ್ಘಾಟನೆ: ವಿ.ಸುನಿಲ್ ಕುಮಾರ್, ಇಂದನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ
* ಕುಂದಾಪುರ : ಮಂಡಲ ಕಛೇರಿ (3 ದಿನಗಳು) (ಬೆಳಿಗ್ಗೆ 9.30ಕ್ಕೆ)
ಉದ್ಘಾಟನೆ: ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕರು, ಕುಂದಾಪುರ
* ಬೈಂದೂರು : ಮಂಡಲ ಕಛೇರಿ (3 ದಿನಗಳು) (ಬೆಳಿಗ್ಗೆ 9.30ಕ್ಕೆ)
ಉದ್ಘಾಟನೆ: ಬಿ.ಎಮ್. ಸುಕುಮಾರ್ ಶೆಟ್ಟಿ,
ಶಾಸಕರು, ಕುಂದಾಪುರ
* ಉಡುಪಿ ಗ್ರಾಮಾಂತರ : ಮಂಡಲ ಕಛೇರಿ (ಸೆ.4ರಂದು ಬೆಳಿಗ್ಗೆ 9.30ಕ್ಕೆ)
ಉದ್ಘಾಟನೆ: ಕೆ.ರಘುಪತಿ ಭಟ್, ಶಾಸಕರು, ಉಡುಪಿ
ಬಿಜೆಪಿ ಕಾಪು ಮಂಡಲದಲ್ಲಿ ಸೆ.30ರಂದು ನಡೆದ ಖಾದಿ ಮೇಳಕ್ಕೆ ಶಾಸಕ ಲಾಲಾಜಿ ಅರ್. ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ ಹಾಗೂ ಪಕ್ಷದ ಮುಖಂಡರ ಸಮ್ಮುಖದಲ್ಲಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವೆ ಕು! ಶೋಭಾ ಕರಂದ್ಲಾಜೆ ಚಾಲನೆ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆಯಡಿ ಖಾದಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಯೋಜಿಸಿರುವ ಖಾದಿ ಮೇಳದಲ್ಲಿ ಸಾರ್ವಜನಿಕ ಬಂಧುಗಳು, ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತ ಬಂಧುಗಳು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿ, ಖಾದಿ ಉತ್ಪನ್ನಗಳನ್ನು ಖರೀದಿಸಿ, ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಬೇಕಾಗಿ ‘ಸೇವಾ ಪಾಕ್ಷಿಕ’ ಅಭಿಯಾನದ ಜಿಲ್ಲಾ ಸಂಚಾಲಕ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಸಹ ಸಂಚಾಲಕರಾದ ಸದಾನಂದ ಉಪ್ಪಿನಕುದ್ರು, ಶಿವಕುಮಾರ್ ಅಂಬಲಪಾಡಿ ಹಾಗೂ ‘ಗಾಂಧಿ ಜಯಂತಿ ಆಚರಣೆ ಮತ್ತು ಖಾದಿ ಮೇಳ’ದ ಜಿಲ್ಲಾ ಸಂಚಾಲಕ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಸಹ ಸಂಚಾಲಕರಾದ ಅನಿತಾ ಶ್ರೀಧರ್ ಹಾಗೂ ದಾವೂದ್ ಅಬೂಬಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.