
News by: ಜನತಾಲೋಕವಾಣಿನ್ಯೂಸ್
ಕಾಪು: ಮಿಥುನ್ ರೈ ನಿನ್ನೆ ಪ್ರತಿಭಟನಾ ವೇಳೆಯಲ್ಲಿ ನಮ್ಮ ಉಡುಪಿ ಚಿಕ್ಕ ಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಯವರ ಕುರಿತು ನೀಡಿದ ಸೆಲ್ಫಿ ಹೇಳಿಕೆ ಹಾಸ್ಯಾಸ್ಪದ ಮತ್ತು ಮೂರ್ಖತನದ್ದಾಗಿದೆ. ನಮ್ಮ ಸಂಸದರು ನಮಗೆ ಯಾವಾಗಲೂ ಲಭ್ಯವಿದ್ದು ಅವರು ಊರಲ್ಲಿ ಇಲ್ಲದಿದ್ದಾಗ ಸಕ್ರಿಯವಾಗಿ ಸ್ಪಂಧಿಸಲು ಅವರ ಕಚೇರಿ ಸದಾ ತೆರೆದಿರುತ್ತದೆ. ಇದೇ ಬರುವ ದಿನಾಂಕ ಸೆ.30 ರಂದು ಕಾಪು ಪೇಟೆಯಲ್ಲಿ ಮಾನ್ಯ ಸಂಸದರ ಕಾರ್ಯಕ್ರಮ ನಿಗದಿಯಾಗಿದ್ದು ನಾವು ಸುಮಾರು 500 ಜನ ಸೆಲ್ಫಿ ತೆಗೆಯಲು ಸಿಧ್ಧರಿದ್ದೇವೆ. ಮಿಥುನ್ ರೈ ಯವರು ಹಣದೊಂದಿಗೆ ಬರಬೇಕು ಮತ್ತು ಅವರ ಪಕ್ಷ ಕಾರ್ಯಕರ್ತರನ್ನೂ ಬೇಕಾದರೆ ಕರೆತರಲಿ. ಸೆಲ್ಫಿಗೆ ನಾವು ಅವಕಾಶ ಒದಗಿಸುತ್ತೇವೆ.
ಒಂದು ಸೆಲ್ಫಿಗೆ ಐದು ಸಾವಿರ ನೀಡುವುದಾದರೆ ಅವರ ಬಳಿ ಹಣ ಎಷ್ಟಿರಬಹುದು? ಕಷ್ಟಪಟ್ಟು ದುಡಿದ ಹಣ ಹಾಗೆ ನೀಡುವರೇ? ವಿಧಾನ ಸಭಾ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರ ಹೇಳಿಕೆಯಂತೆ ಕಾಂಗ್ರೆಸ್ ನವರು ಮೂರು ತಲೆಮಾರಿಗೆ ಬೇಕಾದಷ್ಟು ಹಣ ಭ್ರಷ್ಟಾಚಾರ ಮೂಲಕ ಮಾಡಿದ್ದು ಇದನ್ನು ಪರೋಕ್ಷವಾಗಿ ಮಿಥುನ್ ರೈ ಒಪ್ಪಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದವರು ಸುಮ್ಮನೆ ಕಾಮಿಡಿ ಮಾತನಾಡುವುದು ಬಿಟ್ಟು ಗಂಭೀರವಾಗಿರುವ ಸಮಸ್ಯೆಗಳ ಬಗ್ಗೆ ಮಾತನಾಡುವುದು ಕಲಿತರೆ ಒಳ್ಳೆಯದು. ಪಿಎಫ್ಐ ಯಂತಹ ದೇಶದ್ರೋಹಿಗಳ ಕೇಸು ಖುಲಾಸೆಗೊಳಿಸಿದ್ದು ನಿಮ್ಮ ಪಕ್ಷ. ಇಂತಹ ದೇಶವಿರೋಧಿಗಳ ಬಗ್ಗೆ ಮಾತನಾಡಲು ಧೈರ್ಯ ಇಲ್ಲದೆ ತುಷ್ಟೀಕರಣದ ಪರಮಾವಧಿಗೆ ತಲುಪಿರುವ ನಿಮ್ಮ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಖಂಡಿತವಾಗಿತಯೂ ಹೇಳ ಹೆಸರಿಲ್ಲದಂತೆ ಮಾಡುವರು ಜನತೆ.