
News By: ಜನತಾಲೋಕವಾಣಿನ್ಯೂಸ್
ಆರ್.ಎಸ್.ಎಸ್. ಕಚೇರಿಗೆ ಮುತ್ತಿಗೆ ಯತ್ನ ಖಂಡನೀಯ
ಉಡುಪಿ: ಇಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.)ದ ಕಚೇರಿಗೆ ಪಿ.ಎಫ್.ಐ ಕಾರ್ಯಕರ್ತರು ಮುತ್ತಿಗೆ ಹಾಕಲು ಪ್ರಯತ್ನಿಸಿರುವುದು ಖಂಡನೀಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎನ್.ಐಎ ಅಧಿಕಾರಿಗಳು ದೇಶಾದ್ಯಂತ ತಪ್ಪಿತಸ್ಥರಾದ ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಕಚೇರಿ ಮೇಲೆ ದಾಳಿ ನಡೆಸಿದಾಗ ಉಡುಪಿಯಲ್ಲಿ ಕೆಲವು ಕಿಡಿಗೇಡಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಅಂಥವರನ್ನು ಹದ್ದುಬಸ್ತಿನಲ್ಲಿಟ್ಟು ಮಟ್ಟಹಾಕಲು ಪೊಲೀಸ್ ಇಲಾಖೆ ಮತ್ತು ಸರ್ಕಾರ ಅತ್ಯಂತ ದಿಟ್ಟ ಹೆಜ್ಜೆ ಇಡಲಿದೆ.
ಅತ್ಯಂತ ಶಾಂತಿ ಪ್ರಿಯ ಉಡುಪಿಯಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಪ್ರಯತ್ನಿಸುತ್ತಿರುವ ಇಂಥ ಯುವಕರಿಗೆ ಮುಸಲ್ಮಾನ ನಾಯಕರು ಇನ್ನಾದರೂ ಬುದ್ಧಿ ಹೇಳಬೇಕು. ಇಲ್ಲವಾದಲ್ಲಿ ಅವರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಕಳಿಸುವುದು ಶತಃಸಿದ್ಧ ಎಂದು ಕುಯಿಲಾಡಿ ತಿಳಿಸಿದ್ದಾರೆ.