ದೇಶದ ನೂತನ ರಾಷ್ಟ್ರಪತಿಯಾಗಿ ಶ್ರೀಮತಿ ದ್ರೌಪದಿ ಮುರ್ಮು ಆಯ್ಕೆ ಪ್ರಜಾಪ್ರಭುತ್ವದ ಹಿರಿಮೆಗೆ ಸಂದ ಗೌರವ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ದೇಶದ 15ನೇ ರಾಷ್ಟ್ರಪತಿಯಾಗಿ ಮೊಟ್ಟಮೊದಲ ಬಾರಿಗೆ ಬುಡಕಟ್ಟು ಜನಾಂಗದ ಮಹಿಳೆ ಶ್ರೀಮತಿ‌ ದ್ರೌಪದಿ ಮುರ್ಮು ರವರು ಅಭೂತಪೂರ್ವ ದಾಖಲೆಯ ಮತಗಳಿಂದ ಆಯ್ಕೆಯಾಗಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.‌

ದೇಶದ ಪ್ರಥಮ ಪ್ರಜೆಯಾಗಿ ಶ್ರೀಮತಿ ದ್ರೌಪದಿ ಮುರ್ಮು‌ ರವರ ಆಯ್ಕೆ ಪ್ರಜಾಪ್ರಭುತ್ವದ ಹಿರಿಮೆಗೆ ಸಂದ ಗೌರವ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ದೇಶದ ನೂತನ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ರವರಿಗೆ ಅಭಿನಂದನೆ ಸಲ್ಲಿಸಿರುವ ಕುಯಿಲಾಡಿ, ರಾಷ್ಟ್ರಪತಿಯವರ ರಾಷ್ಟ್ರ ಹಿತದ ಕಾಯಕದ ಮೂಲಕ ಸಮಾಜದ ಕಟ್ಟ‌ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ‌ ಅಂತ್ಯೋದಯ ಪರಿಕಲ್ಪನೆಯು ಇನ್ನಷ್ಟು ಸದೃಢವಾಗಿ ಸಾಕಾರಗೊಳ್ಳುವಂತಾಲಿ ಎಂದು‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started