
ಕಾಪು: ಉಡುಪಿ ತಾಲೂಕಿನ ಮರ್ಣೆ ಗ್ರಾಮದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರಾದ *ಪ್ರಜ್ವಲ್ ಹೆಗ್ಡೆ, ವಾಣಿ, ಸುರೇಖ ಮತ್ತು ಪದ್ಮನಾಭ ನಾಯಕ್ ಕೊಡಂಗಳ* ಇವರ ಮುತುವರ್ಜಿಯಲ್ಲಿ ಮೋದೀಜಿ ಆಡಳಿತದ ಎಂಟು ವರ್ಷದ ಆಚರಣಾ ಹಿನ್ನಲೆಯಲ್ಲಿ ಆಯುಷ್ಮಾನ್ ಕ್ಯಾಂಪ್ ಮಾಡಲಾಯಿತು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಮೋದೀಜಿ ಆಡಳಿತದ ಬಗ್ಗೆ ವಿವರಿಸಿದರು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಭಾಗವಹಿಸಿ ಮೋದಿ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಸದಸ್ಯರುಗಳಾದ ಪ್ರಜ್ವಲ್ ಹೆಗ್ಡೆ, ಪದ್ಮನಾಭ ನಾಯಕ್ ಸುರೇಖ, ವಾಣಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ರವೀಂದ್ರ ಹಲ್ದೋಣ್ಕರ್, ಹಿರಿಯರಾದ ಪದ್ಮನಾಭ ಹೆಗ್ಡೆ ಉಪಸ್ಥಿತರಿದ್ದರು. ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಬಗ್ಗೆ ಮಾಹಿತಿ ನೀಡಲಾಯಿತು. ಸುಮಾರು 150 ಕ್ಕೂ ಹೆಚ್ಚು ಜನ ಆಯುಷ್ಮಾನ್ ಕಾರ್ಡ್ ನೋಂದಾಯಿಸಿಕೊಂಡರು.