
ಕಾಪು: ಯಶ್ ಪಾಲ್ ಸುವರ್ಣ ಅವರಿಗೆ ಕೊಲೆ ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯ. ಸಮಾಜಘಾತುಕ ಶಕ್ತಿಗಳು ಹಿಂದುತ್ವ ಹಾಗೂ ಬಿಜೆಪಿ ಗಾಗಿ ಕೆಲಸ ಮಾಡುವವರನ್ನು ಈ ರೀತಿ ಬೆದರಿಸುವುದು ಅವರ ಶಂಡತನ. ಇಂತಹ ಸಮಾಜಘಾತುಕ ಶಕ್ತಿಗಳನ್ನು ಪೋಲಿಸ್ ಇಲಾಖೆ ಕೂಡಲೇ ಮಟ್ಟ ಹಾಕಬೇಕು. ಇಂತಹ ಬೆದರಿಕೆಗಳಿಂದ ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆ ಇದೆ.
ಯಶ್ ಪಾಲ್ ಸುವರ್ಣ ಕೇವಲ ಬಿಜೆಪಿಯ ಆಸ್ತಿಯಲ್ಲ. ಅವರು ಹಿಂದೂ ಸಮಾಜದ ಆಸ್ತಿ. ಅವರಿಗೆ ನಮ್ಮಂತಹ ಲಕ್ಷಾಂತರ ಹಿಂದೂಗಳ ಆಶೀರ್ವಾದವಿದೆ ಬೆಂಬಲವಿದೆ. ಭಾರತೀಯ ಜನತಾ ಪಾರ್ಟಿ ಅವರ ಜೊತೆಗಿದೆ. ಅದರೊಂದಿಗೆ ಪಕ್ಷಾತೀತವಾಗಿ ಹಿಂದು ಸಮಾಜ ಅವರೊಂದಿಗೆ ಇದೆ. ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಿದರೆ ಪರಿಣಾಮ ಗಂಭೀರವಾದೀತು ಎಂದು ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ ನಾಯಕ್ ಎಚ್ಚರಿಕೆ ನೀಡಿದ್ದಾರೆ.