
ಕಾಪು: ಮೋದೀಜಿಯವರ ಆಡಳಿತದ 8 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಜಿಲ್ಲಾ ಬಿಜೆಪಿ ಸೂಚನೆಯಂತೆ “ಸೇವೆ-ಶುಶಾಸನ ಹಾಗೂ ಬಡವರ ಕಲ್ಯಾಣ” ಕಾರ್ಯಕ್ರಮದ ಪೂರ್ವಭಾವಿ ಸಭೆ ಕಾಪು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಸುಮಾರು 17 ಅಂಶಗಳ ಕಾರ್ಯಕ್ರಮಗಳ ಸಂಚಾಲಕರುಗಳಿಗೆ ಜವಾಬ್ದರಿಗಳನ್ನು ನೀಡಲಾಗಿ ಎಲ್ಲಾ ಪಂಚಾಯತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜರುಗುವಂತೆ ಮುತುವರ್ಜಿ ವಹಿಸಲು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ವಿನಂತಿಸಿದರು. ಸಂಚಾಲಕರುಗಳು ತಮ್ಮ ತಮ್ಮ ವಿಷಯಗಳ ಬಗೆಗಿನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಶಾಸಕರಾದ ಲಾಲಾಜಿ ಆರ್ ಮೆಂಡನ್ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ವಿವರಿಸುತ್ತ ಪಕ್ಷವನ್ನೂ ಬಲವರ್ಧನೆ ಗೊಳಿಸಬೇಂದು ಕರೆ ನೀಡಿದರು. ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮಂಡಲ ಪ್ರಧಾನಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಡಲ ಪದಾಧಿಕಾರಿಗಳು, ಮಹಾಶಕ್ತಿಕೇಂದ್ರ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಶಕ್ತಿ ಕೇಂದ್ರ ಪ್ರಮುಖರು, 17 ಕಾರ್ಯಕ್ರಮದ ಸಂಚಾಲಕರು ಸಹಸಂಚಾಲಕರು ಉಪಸ್ಥಿತರಿದ್ದರು.