
ಕಾಪು: ಕಾಪು ಬಿಜೆಪಿ ಮಹಿಳಾಮೋರ್ಚವತಿಯಿಂದ ಇಂದು ಕುರ್ಕಾಲು ಗಿರಿನಗರ ಬಳಿಯ ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ್ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ರಾಜ್ಯ ಮಹಿಳಾಮೋರ್ಚ ಪ್ರಧಾನಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ ನೇತ್ರತ್ವದಲ್ಲಿ ಕಾಪು ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾಶೆಟ್ಟಿ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಸಿಬ್ಬಂಧಿಯಿಂದ ಪೌಷ್ಟಿಕ ಆಹಾರದ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ನಂತರದಲ್ಲಿ ಗರ್ಭಿಣಿ ಯುವತಿ ಮಾಳವಿಕಾ ಇವರಿಗೆ ಸೀಮಂತ ಬಡಿಸುವ ಕಾರ್ಯಕ್ರಮ ನಡೆಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ನಡಿಯಿತು. ಸುಮಾರು ೨೪ ಜನ ಮಕ್ಕಳಿಗೆ ಪೌಷ್ಟಿಕ ಆಹಾರ ಹಣ್ಣು ಹಂಪಲುಗಳನ್ನು ನೀಡಲಾಯಿತು.
ಅರ್ಥಪೂರ್ಣವಾದ ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಭಾಗವಹಿಸಿ ಪೋಷಣ್ ಅಭಿಯಾನ್ ಕುರಿತಾಗಿ ಮಾತನಾಡಿ ಒಳ್ಳೆಯ ಕಾರ್ಯಕ್ರಮ ಆಯೋಜನೆಗಾಗಿ ಮಹಿಳಾಮೋರ್ಚದ ಎಲ್ಲ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಡಲ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ನೀತಾ ಗುರುರಾಜ್, ಸುರೇಖ ಶೈಲೇಶ್, ಮಂಡಲ ಪದಾಧಿಕಾರಿಗಳಾದ ಶಕುಂತಳ, ಸೌಮ್ಯ ಶೆಟ್ಟಿ, ಪ್ರಮೀಳ ಆಚಾರ್ಯ, ಶಾಂತ, ಸುದಕ್ಷಿಣಿ, ಅಂಗನವಾಡಿ ಕಾರ್ಯಕರ್ತರಾದ ಸುಶೀಲಾ, ಗ್ಲಾಡಿಸ್ ಹಾಗೂ ಸಹಾಯಕರಾದ ಸುಜಾತ, ಆಶಾ ಕಾರ್ಯಕರ್ತೆಯರು, ಮಕ್ಕಳ ಪೋಷಕರು ಮತ್ತಿತರರು ಉಪಸ್ಥಿತರಿದ್ದರು.