
ಉಡುಪಿ: ಇತ್ತೀಚೆಗೆ ನಡೆದ ಆರ್ ಎಸ್ ಬಿ ಫ್ರೆಂಡ್ಸ್ ನೇತ್ರತ್ವದ ವಿಷ್ಣು ಟ್ರೋಫಿಯಲ್ಲಿ ಉಳಿದ ಹಣವನ್ನು ಕರ್ವಾಲು ಸರಕಾರಿ ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ನೀಡಿದ ಸಂಸ್ಥೆ, ಈ ಕ್ರಿಕೆಟ್ ಪಂದ್ಯಾಟದಿಂದ ಉಳಿಕೆಯಾದ ಮೊತ್ತ ಸುಮಾರು ರೂ.63 ಸಾವಿರವನ್ನು ಶಾಲಾ ಮುಖ್ಯೋಪಾಧ್ಯಾಯರ ಉಪಸ್ಥಿತಿಯಲ್ಲಿ ಶಾಲೆಯನ್ನು ದತ್ತು ಪಡೆದ ಶ್ರೀ ವಿಷ್ಣು ಸ್ನೇಹ ಬಳಗ ಸಂಸ್ಥೆಗೆ ನೀಡಲಾಯಿತು. ಶಾಲಾ ಮುಖ್ಯೊಪಾಧ್ಯಾಯರಾದ ಶ್ರೀಮತಿ ಸವಿತಾರವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಸುರೇಶ್ ನಾಯಕ್, ರಮೇಶ್ ಕಾಮತ್, ರೋಹಿತ್ ಪ್ರಭು, ವಿಘ್ನೇಶ್ ನಾಯಕ್, ಸುಬ್ರಹ್ಮಣ್ಯ ನಾಯಕ್, ದಿನೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.