Design a site like this with WordPress.com
Get started

ಕರ್ನಾಟಕದಲ್ಲಿ ಕರ್ಪ್ಯೂ ಅವಧಿಯಲ್ಲಿ ಬದಲಾವಣೆ

ಸಾಂಧರ್ಭಿಕ ಚಿತ್ರ@janathalokavani

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ವೀಕೆಂಡ್‌ ಕರ್ಪ್ಯೂ ಜಾರಿ ಮಾಡಲಾಗಿದೆ. ಇಂದಿನಿಂದ (ಜನವರಿ 7 ) ರಿಂದ ಸೋಮವಾರದ ವರೆಗೆ ಕರುನಾಡು ಸಂಪೂರ್ಣವಾಗಿ ಸ್ತಬ್ದವಾಗಲಿದೆ. ಆದ್ರೀಗ ರಾಜ್ಯದಲ್ಲಿ ವೀಕೆಂಡ್‌ ಕರ್ಪ್ಯೂ ಅವಧಿಯನ್ನು (Weekend Curfew Timings Change) ರಾತ್ರಿ 8 ರ ಬದಲು 10 ಗಂಟೆಯಿಂದ ಜಾರಿಗೆ ಬರಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ತಿಳಿಸಿದ್ದಾರೆ.

ಕೊರೊನಾ ಹಾಗೂ ಓಮಿಕ್ರಾನ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್‌ ಅಧಿಕಾರಿಗಳು ಹಾಗೂ ಕೋವಿಡ್‌ ತಜ್ಞರ ಜೊತೆಗೆ ಸಭೆ ನಡೆಸಿದ್ದಾರೆ. ಸಭೆಯ ನಂತರದಲ್ಲಿ ಮಾತನಾಡಿದ ಅವರು, ವೀಕೆಂಡ್‌ ಕರ್ಪ್ಯೂ ಅವಧಿಯನ್ನು ಬದಲಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನು ಜಿಲ್ಲಾ ಕೇಂದ್ರಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ವೀಕೆಂಡ್ ಕರ್ಪ್ಯೂ ಅವಧಿಯನ್ನು ಆಯಾಯ ಜಿಲ್ಲಾಧಿಕಾರಿಗಳು ನಿರ್ಧಾರ ಮಾಡಬಹುದು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಕ್ಷಣಕ್ಕೊಂದು ಆದೇಶ ಹೊರಬರುತ್ತಿದೆ. ಒಂದೆಡೆಯಲ್ಲಿ ಜನರು ವೀಕೆಂಡ್‌ ಕರ್ಪ್ಯೂ, ನೈಟ್‌ ಕರ್ಪ್ಯೂ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವಲ್ಲೇ ಸಚಿವರು, ಅಧಿಕಾರಿಗಳು ಕ್ಷಣಕ್ಕೊಂದು ಹೇಳಿಕೆ ನೀಡುವ ಮೂಲಕ ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ.

ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಏನಿರುತ್ತೆ, ಏನಿರಲ್ಲ

ರಾಜ್ಯದಲ್ಲಿ ಓಮಿಕ್ರಾನ್​ ಸೋಂಕು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಕೋವಿಡ್​ ಸೋಂಕು ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರೋದರಿಂದ ರಾಜ್ಯ ಸರ್ಕಾರ ನೈಟ್​ ಕರ್ಫ್ಯೂ ಹಾಗೂ ವಿಕೇಂಡ್ ಕರ್ಫ್ಯೂ ಆದೇಶಗಳನ್ನು ಹೊರಡಿಸಿದೆ. ಶುಕ್ರವಾರ ರಾತ್ರಿ 10 ಗಂಟೆಗೆ ಆರಂಭವಾಗಲಿರುವ ವೀಕೆಂಡ್​ ಕರ್ಫ್ಯೂ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಇರಲಿದೆ. ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಹಾಗಾದರೆ ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಯಾವೆಲ್ಲ ಸೇವೆಗಳಿಗೆ ನಿರ್ಬಂಧವಿದೆ. ಹಾಗೂ ಯಾವೆಲ್ಲ ಚಟುವಟಿಕೆಗಳಿಗೆ ಅವಕಾಶವಿದೆ ಎಂಬುದಕ್ಕೆ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ :

  • ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆಗಳು, ತುರ್ತು ಸೇವೆಗಳು , ಕೊರೊನಾ ನಿರ್ವಹಣೆಗೆ ಸಂಬಂಧಿಸಿದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು ಕಾರ್ಯನಿರ್ವಹಿಸಲಿವೆ.
  • ಐಟಿ ಹಾಗೂ ಕೈಗಾರಿಕಾ ವಲಯಗಳಿಗೆ ಕರ್ಫ್ಯೂ ಅವಧಿಯಲ್ಲಿ ನಿರ್ಬಂಧ ಇರುವುದಿಲ್ಲ. ಕಂಪನಿಯ ಗುರುತಿನ ಚೀಟಿಯನ್ನು ತೋರಿಸುವ ಮೂಲಕ ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ.
  • ರೋಗಿಗಳು ಹಾಗೂ ಅವರ ಸಂಬಂಧಿಗಳು, ಲಸಿಕೆ ತೆಗೆದುಕೊಳ್ಳುವವರು ತುರ್ತು ಸೇವೆಗಳ ಅಗತ್ಯ ಇರುವವರು ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಓಡಾಟ ನಡೆಸಬಹುದಾಗಿದೆ.
  • ಹಣ್ಣು ಹಾಗೂ ತರಕಾರಿ ಅಂಗಡಿ, ಡೈರಿ ಉತ್ಪನ್ನಗಳು, ದಿನಸಿ ಅಂಗಡಿಗಳು,ಮೀನು ಹಾಗೂ ಮಾಂಸದ ಅಂಗಡಿ, ಪ್ರಾಣಿಗಳಿಗೆ ಸಂಬಂಧಿಸಿದ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
  • ಬೀದಿ ಬದಿ ವ್ಯಾಪಾರಿಗಳೂ ಎಂದಿನಂತೆ ವ್ಯಾಪಾರ ವ್ಯವಹಾರ ನಡೆಸಬಹುದು. ನ್ಯಾಯಬೆಲೆ ಅಂಗಡಿಗಳೂ ಈ ಅವಧಿಯಲ್ಲಿ ತೆರೆಯಲಿವೆ.
  • ಹೋಂ ಡೆಲಿವರಿ ಪಡೆಯುವವರಿಗೆ ಮುಕ್ತ ಅವಕಾಶ ಇರಲಿದೆ. ರೆಸ್ಟಾರೆಂಟ್ ಹಾಗೂ ಹೋಟೆಲ್ಗಳಲ್ಲಿ ಪಾರ್ಸಲ್ ಮಾತ್ರ ಪಡೆಯಬಹುದು.
  • ವಿರಳ ಸಂಖ್ಯೆಯಲ್ಲಿ ಬಸ್ ಸೇವೆ, ರೈಲು ಸೇವೆ ಹಾಗೂ ವಿಮಾನ ಸೇವೆ ಕೂಡ ಇರಲಿದೆ. ಖಾಸಗಿ ವಾಹನಗಳು ಹಾಗೂ ಟ್ಯಾಕ್ಸಿಗಳ ಓಡಾಟಕ್ಕೂ ಅವಕಾಶ ನೀಡಲಾಗಿದೆ.
  • ಪ್ರಯಾಣಿಕರು ತಮ್ಮ ಟಿಕೆಟ್ನ್ನು ತೋರಿಸುವ ಮೂಲಕ ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಿಗೆ ಸಂಚರಿಸಬಹುದಾಗಿದೆ.
  • ಮೆಟ್ರೋ ಪ್ರಯಾಣದ ಸಮಯದಲ್ಲಿ ಪರಿಷ್ಕರಣೆ ಮಾಡಲಾಗುವುದು.
  • ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಮದುವೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಆಚರಿಸಲು ಅನುಮತಿ ನೀಡಲಾಗಿದೆ.
  • ಸಾರ್ವಜನಿಕ ಉದ್ಯಾನವಗಳು ಬಂದ್ ಇರಲಿವೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: