
ಶ್ರೀ ವಿಷ್ಣು ಸ್ನೇಹ ಬಳಗ ಕರ್ವಾಲು ಇದರ ವತಿಯಿಂದ ಕರ್ವಾಲಿನ ಸರಕಾರಿ ಶಾಲೆಯಲ್ಲಿ *ನಮ್ಮೂರ ಕನ್ನಡ ಶಾಲಾ ಉತ್ಸವ* ಎನ್ನುವ ಹೆಸರಿನಲ್ಲಿ ವಿಶಿಷ್ಠವಾಗಿ ಆಚರಿಸಲಾಯಿತು.
ಬೆಳಿಗ್ಗಿನಿಂದ ಸಂಜೆಯತನಕ ಊರಿನವರು ಹಾಗೂ ಶಾಲಾ ಪಕ್ಕದ ಊರಿನ ಶಾಲಾಭಿಮಾನಿಗಳು ಒಟ್ಟು ಸೇರಿ ಶಾಲಾ ಸ್ವಚ್ಚತಾ ಕಾರ್ಯಕ್ರಮ, ಹೂದೋಟ, ಪೌಷ್ಟಿಕ ತೋಟ, ಬಣ್ಣ ಬಳಿಯುವುದು ಇತ್ಯಾದಿ ಕೆಲಸಗಳನ್ನು ಶ್ರಮದಾನ ಮೂಲಕ ನಡೆಸಿದರು. ಸಭಾ ಕಾರ್ಯಕ್ರಮ ನಡೆಸಿ ಕನ್ನಡ ತಾಯಿಗೆ ಹಾಗೂ ಭಾರತಾಂಬೆಗೆ ಪುಷ್ಪಾರ್ಚನೆ ಮಾಡಲಾಯಿತು. ಭಾರತ 105 ಕೋಟಿ ವ್ಯಾಕ್ಸಿನ್ ನೀಡಿ ದಾಖಲೆ ಮಾಡಿರುವ ಸಂದರ್ಭದಲ್ಲಿ ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 7 ಜನ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಉದ್ಯಮಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪಾ ಜಿ ಸುವರ್ಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ನಯನ ಗಣೇಶ್ ಶಾಲಾ ಮುಖ್ಯೋಪಾಧ್ಯಾಯರಾದ ಸವಿತಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಉಪಸ್ಥಿತರಿದ್ದರು.
ನಿಕಟಪೂರ್ವ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು ಭೇಟಿ ನೀಡಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರಾದ ಸೌಮ್ಯ ಸುರೇಶ್ ನಾಯಕ್, ಶ್ರೀಮತಿ ಎಸ್ ಶೆಟ್ಟಿ, ಮಣಿಪುರ ಪಂಚಾಯತ್ ಸದಸ್ಯರಾದ ಪದ್ಮನಾಭ ನಾಯಕ್, ಪ್ರಜ್ವಲ್ ಹೆಗ್ಡೆ, ಸ್ಥಳೀಯ ಪ್ರಮುಖರಾದ ರಘುರಾಮ ಭಟ್, ಅಶೋಕ್ ಕುಮಾರ್ ಅಲೆವೂರು, ಸಂತೋಷ್ ಶೆಣೈ, ಸುರೇಶ್ ಶೆಟ್ಟಿಗಾರ್ ಕರ್ವಾಲು, ಸುರೇಶ್ ಕರ್ವಾಲು, ಗಣಪತಿ ಪಾಟ್ಕರ್, ಸುರೇಖ ಸುರೇಂದ್ರ ನಾಯಕ್, ಪ್ರತಿಭಾ ಪಾಟ್ಕರ್ ಅಲೆವೂರು ಯುವಕ ಸಂಘ ಹಾಗೂ ಯುವಸಂಘಟನೆ ಕೊಡಂಗಳ ಇದರ ಸದಸ್ಯರುಗಳು, ಶ್ರೀ ವಿಷ್ಣು ಸ್ನೇಹ ಬಳಗದ ಸದಸ್ಯರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲ ಹಾಗೂ ನಂತರದ ಭಾವಚಿತ್ರಗಳಿವು.