
ಅಲೆವೂರು ಸಂತೆಯಲ್ಲಿ ಇಂದು ಬಿಜೆಪಿ ಕಾಪು ಮಂಡಲ ಹಾಗೂ ಕಾಪು ಬಿಜೆಪಿ ಯುವಮೋರ್ಚ ವತಿಯಿಂದ ಅಲೆವೂರು ಜೋಡುರಸ್ತೆ ಬಳಿ ಸಂತೆಯಲ್ಲಿ ಮೋದೀಜಿ ಜನ್ಮದಿನದ ಅಂಗವಾಗಿ *ಸೇವೆ ಮತ್ತು ಸಮರ್ಪಣೆ* ಕಾರ್ಯಕ್ರಮದ ಅಂಗವಾಗಿ ಬಟ್ಟೆ ಚೀಲ ವಿತರಿಸಿ ಗ್ರಾಹಕರಿಗೆ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಕಾಪು ಬಿಜೆಪಿ ಯುವಮೋರ್ಚ ಅಧ್ಯಕ್ಷರಾದ ಸಚಿನ್ ಸುವರ್ಣ, ಉದ್ಯಾವರ ಬಿಜೆಪಿ ಯುವಮೋರ್ಚ ಮಾಹಾಶಕ್ತಿಕೇಂದ್ರದ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ನಿಕಟಪೂರ್ವ ತಾಲೂಕು ಪಂಚಾಯತ್ ಸದಸ್ಯರಾದ ಬೇಬಿ ರಾಜೇಶ್, ಪಂಚಾಯತ್ ಸದಸ್ಯರಾದ ಅವಿನಾಶ್ ಶೆಟ್ಟಿಗಾರ್, ಪಕ್ಷದ ಪ್ರಮುಖರಾದ ರವಿ ಸೇರಿಗಾರ್, ಅರುಣ್ ಆಚಾರ್ಯ, ನಾರಾಯಣ ಆಚಾರ್ಯ, ರೋಷನ್ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 100 ಬ್ಯಾಗ್ ವಿತರಿಸಲಾಯಿತು.