
ಉಡುಪಿ:ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಜಯಂತಿ ಅಂಗವಾಗಿ ಅಲೆವೂರು ಪಂಚಾಯತ್ ವ್ಯಾಪ್ತಿಯ 9 ಬಸ್ ನಿಲ್ದಾಣಗಳನ್ನು, ಕರ್ವಾಲು, ಕೆಮ್ತೂರು, ಮಾರ್ಪಳ್ಳಿ, ಮಣಿಪಾಲ ರಸ್ತೆ ಬಳಿ ಒಟ್ಟು 4 ಕಡೆ ಸ್ವಚ್ಚತಾ ಕಾರ್ಯಕ್ರಮಗಳನ್ನು, ಒಬ್ಬ ನೇಕಾರರಿಗೆ ಸನ್ಮಾನ, 2 ಶಕ್ತಿಕೇಂದ್ರಗಳಲ್ಲಿ ಈ ಮಹಾನ್ ಪುರುಷರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಹಾಗೂ ಸಭಾ ಕಾರ್ಯಕ್ರಮನಡೆಸಿ ಅವರ ಚಿಂತನೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ನೇತ್ರತ್ವವನ್ನು ಶಕ್ತಿಕೇಂದ್ರ ಪ್ರಮುಖರಾದ ಶೇಖರ ಆಚಾರ್ಯ ಹಾಗೂ ಆಶಿಶ್ ಶೆಟ್ಟಿ ವಹಿಸಿದ್ದರು. ಪಂಚಾಯತ್ ಸದಸ್ಯರಾದ ಶಾಂತ ನಾಯ್ಕ್, ಪ್ರಶಾಂತ್ ಆಚಾರ್ಯ, ಗೀತಾ ಶೆಟ್ಟಿಗಾರ್, ರೇಣುಕಾ ಶೆಟ್ಟಿ, ಅವಿನಾಶ್ ಶೆಟ್ಟಿಗಾರ್, ನಿಕಟಪೂರ್ವ ತಾಲೂಕು ಪಂಚಾಯತ್ ಸದಸ್ಯರಾದ ಬೇಬಿ ರಾಜೇಶ್, ಮಹಾಶಕ್ತಿಕೇಂದ್ರ ಪ್ರಧಾನಕಾರ್ಯದರ್ಶಿ ಅಶೋಕ್ ಕುಮಾರ್, ಪ್ರಮುಖ ಕಾರ್ಯಕರ್ತರುಗಳಾದ ಸಂತೀಷ್ ಶೆಣೈ, ಸತೀಶ್ ಶೆಟ್ಟಿ ನೆಹರೂನಗರ, ಅರುಣ್ ಆಚಾರ್ಯ, ಸುರೇಶ್ ನಾಯಕ್ ಕರ್ವಾಲು, ಕೇಶವ ಶೆಟ್ಟಿಗಾರ್, ಕ್ರಷ್ಣ ಜತ್ತನ್ನ, ಹಂಸರಾಜ್ ಸನಿಲ್, ನಾಗರಾಜ ಆಚಾರ್ಯ, ರಾಘವೇಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಉಪಸ್ಥಿತರಿದ್ದು ಮಹಾತ್ಮರ ಬಗ್ಗೆ ಮಾಹಿತಿ ನೀಡಿದರು.