ಸೆ.30 ರಿಂದ ಮೂರು‌ದಿನ ಕಾಪು ಬಿಜೆಪಿ ಕಚೇರಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಖಾದಿ ಮೇಳ.


ಗಾಂಧಿ ಜಯಂತಿ ಪ್ರಯುಕ್ತ ಪಕ್ಷದ ಸಂಸ್ಥಾಪಕ ಸದಸ್ಯರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ರವರ ಆಶಯವಾದ ಸ್ವದೇಶಿ, ಸ್ವಭೂಷಾ, ಸ್ವಭಾಷಾ ಚಿಂತನೆಯಂತೆ ಸ್ವದೇಶಿ ವಸ್ತುಗಳನ್ನು ಪ್ರೋತ್ಸಾಹಿಸಲು *ಕಾಪು ಬಿಜೆಪಿ ಬಿಜೆಪಿ ಕಚೇರಿಯಲ್ಲಿ* *ಖಾದಿ ಭಂಡಾರ* ಖಾದಿ ಬಟ್ಟೆ, ವಸ್ತುಗಳ ಪ್ರದರ್ಶನ ಹಾಗೂ ಖರೀದಿ ಮೇಳವನ್ನು ಆಯೋಜಿಸಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ದಿನಾಂಕ 30.09.21 ರಂದು ಬೆಳಿಗ್ಗೆ 9.30 ಕ್ಕೆ ಕಾಪು ಬಿಜೆಪಿ ಕಚೇರಿಯಲ್ಲಿ ನಡೆಯಲಿದ್ದು ನಡೆಯಲಿದೆ ಎಂದು ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ತಿಳಿಸಿರುವರು. ಅಲ್ಲದೆ ಸ್ವದೇಶಿ ವಸ್ತುಗಳನ್ನು ಪ್ರೋತ್ಸಾಹಿಸಲು ಕಡ್ಡಾಯವಾಗಿ ಪ್ರತಿಯೊಬ್ಬರೂ ಏನಾದರೊಂದು ಖಾದಿ ವಸ್ತುವನ್ನು ಖರೀದಿಸಬೇಕಾಗಿ ವಿನಂತಿಸಿರುವರು.

Leave a comment

Design a site like this with WordPress.com
Get started