ಗಾಂಧಿ ಜಯಂತಿ ಪ್ರಯುಕ್ತ ಸೆ.29ರಂದು ಬುಧವಾರ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ “ಖಾದಿ ಮೇಳ”

ಬಿಜೆಪಿ ಉಡುಪಿ ಜಿಲ್ಲೆ ಆಶ್ರಯದಲ್ಲಿ ‘ಸೇವೆ ಮತ್ತು ಸಮರ್ಪಣ ಅಭಿಯಾನ’ದ ಅಂಗವಾಗಿ ಅ.2ರಂದು ನಡೆಯಲಿರುವ ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಖಾದಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಾಳೆ ಸೆ.29 ಬುಧವಾರ ಬೆಳಿಗ್ಗೆ 9.30ರಿಂದ ಬಿಜೆಪಿ ಜಿಲ್ಲಾ ಕಛೇರಿ ಕಡಿಯಾಳಿಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಸಂಘ, ಉಡುಪಿ ಇದರ ಸಹಯೋಗದೊಂದಿಗೆ ‘ಖಾದಿ ಮೇಳ’ ನಡೆಯಲಿದೆ.

ಈ ಖಾದಿ ಮೇಳದಲ್ಲಿ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಖಾದಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ.

ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತ ಬಂಧುಗಳು ‘ಖಾದಿ ಮೇಳ’ದಲ್ಲಿ ಭಾಗವಹಿಸಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸೇವೆ ಮತ್ತು ಸಮರ್ಪಣೆ ಅಭಿಯಾನದ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕಾಗಿ ವಿನಂತಿ.

ಸದಾನಂದ ಉಪ್ಪಿನಕುದ್ರು
ಶಿವಕುಮಾರ್ ಅಂಬಲಪಾಡಿ
ಅಭಿಯಾನದ ಜಿಲ್ಲಾ ಸಂಚಾಲಕರು

ಸುಪ್ರಸಾದ್ ಶೆಟ್ಟಿ ಬೈಕಾಡಿ
ರವೀಂದ್ರ ಕುಮಾರ್
ನಯನಾ ಗಣೇಶ್
ಪ್ರಮೀಳಾ ಹರೀಶ್
ಗಾಂಧಿ ಜಯಂತಿ ಕಾರ್ಯಕ್ರಮದ
ಜಿಲ್ಲಾ ಸಂಚಾಲಕರು

Leave a comment

Design a site like this with WordPress.com
Get started