ಶಿಲ್ಪಾ ಜಿ‌ ಸುವರ್ಣ ಇವರಿಂದ ಅಲೆವೂರು ಕೊರಗ ಸಮುದಾಯದ 40 ಮನೆಗಳಿಗೆ ಹಣ್ಣು ಹಂಪಲು ಹಾಗೂ ಬೆಡ್ ಶೀಟ್ ವಿತರಣೆ

ಮೋದೀಜಿಯವರ ಜನ್ಮದಿನದ ಅಂಗವಾಗಿ‌ ಸೇವೆ ಮತ್ತು‌ಸಮರ್ಪಣೆ ಕಾರ್ಯಕ್ರಮದ ಅಂಗವಾಗಿ ಅಲೆವೂರು ಸಿಧ್ಧಾರ್ಥನಗರದ ಕೊರಗ ಸಮಯದಾಯದ ಸುಮಾರು 40 ಮನೆಗಳಿಗೆ ರಾಜ್ಯ ಮಹಿಳಾಮೋರ್ಚ ಪ್ರಧಾನ‌ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ ಇವರ ನೇತ್ರತ್ವದಲ್ಲಿ ಹಣ್ಣು ಹಂಪಲು ವಿತರಣೆ ಹಾಗೂ ಬೆಡ್ ಶೀಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಮೋದಿ ಸರಕಾರದ ಸಾಧನೆಯನ್ನು ಸವಿಸ್ತಾರವಾಗಿ ವಿವರಿಸಿದರು ಮತ್ತು ಮೋದಿಜಿಯವರಿಗೆ ಜನಸಾಮಾನ್ಯರಿಗೆ ಆಯುಷ್ಮಾನ್, ಉಚಿತ ವ್ಯಾಕ್ಸಿನ್, ಕಿಸಾನ್ ಸಮ್ಮಾನ್, ಉಜ್ವಲ ಮುಂತಾದ ಯೋಜನೆಗಳನ್ನು ನೀಡಿದುದಕ್ಕಾಗಿ ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ಕಾಪು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ ಮಾಂಬೆಟ್ಟು, ಗೋಪಾಲ್ ಕೃಷ್ಣ ರಾವ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಶಿಲ್ಪಾ ಜಿ ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರು ಆದ ವೀಣಾ ಶೆಟ್ಟಿ, ಮಂಡಲ ಕಾರ್ಯದರ್ಶಿ ಮಾಲಿನಿ ಇನ್ನಂಜೆ, ಕಾಪು ಮಹಿಳಾ ಮೋರ್ಚಾ ಅಧ್ಯಕ್ಷರು ಆದ ಸುಮಾ ಶೆಟ್ಟಿ, ಉದ್ಯಾವರ ಮಹಾಶಕ್ತಿಕೇಂದ್ರ ಪ್ರಧಾನಕಾರ್ಯದರ್ಶಿ ಅಶೋಕ್ ಕುಮಾರ್ ಅಲೆವೂರು, ಶಕ್ತಿಕೇಂದ್ರ ಪ್ರಮುಖ್ ಆದ ಶೇಖರ ಆಚಾರ್ಯ ಹಾಗೂ ಆಶಿಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಅವಿನಾಶ್ ಶೆಟ್ಟಿಗಾರ್, ತಾ.ಪಂ. ಮಾಜಿ‌ಸದಸ್ಯರಾದ ಬೇಬಿ ರಾಜೇಶ್ ಸ್ಥಳೀ‌ಯ ಪ್ರಮುಖರಾದ ಸುಮತಿ ಸೇರಿಗಾರ್, ರವಿ, ಅಶೋಕ್ ಶೆಟ್ಟಿಗಾರ್, ಅರುಣ್ ಆಚಾರ್ಯ, ವಿಜೇತ್ ಬೆಳ್ಳರ್ಪಾಡಿ, ಸಂತೋಷ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Leave a comment

Design a site like this with WordPress.com
Get started