
ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಹೆಚ್ಚಾಯಿತೆಂದು ವಾದಿಸುವವರೆ, ಒಂದು ಮನೆಯಲ್ಲಿ ಕನಿಷ್ಠ ನಾಲ್ಕು ಜನರಿದ್ದರೆ ನಾಲ್ಕು ಜನರಿಗೆ ಎಂಟು ವ್ಯಾಕ್ಸಿನ್ ಉಚಿತವಾಗಿ ದೊರೆಯುತ್ತದೆ. ಒಂದು ವ್ಯಾಕ್ಸಿನ್ ಗೆ ಕನಿಷ್ಠ 780 ರೂಪಾಯಿ ಇದೆ. ನಾಲ್ಕು ಜನರಿಗೆ ಎಂಟು ವ್ಯಾಕ್ಸಿನ್ ಗೆ ಸುಮಾರು 6240 ರೂಪಾಯಿ ಆಗುತ್ತದೆ. ಪೆಟ್ರೋಲ್ ಗ್ಯಾಸ್ ಬೆಲೆ ಕಡಿಮೆ ಮಾಡಿ ಇದನ್ನು ಮನೆಯವರಿಂದಲೇ ಭರಿಸುವಂತಿದ್ದರೆ ಬಡವರಿಗೆ ವ್ಯಾಕ್ಸಿನ್ ಪಡೆಯುವುದು ಸಾಧ್ಯವಿತ್ತೇ?
ಕಿಸಾನ್ ಸಮ್ಮಾನ್ ಮೂಲಕ ಪ್ರತೀ ರೈತರ ಕುಟುಂಬಕ್ಕೆ ಕನಿಷ್ಠ 6000 ರೂಪಾಯಿ ಮೋದಿ ಸರಕಾರ ನೀಡುತ್ತಿದೆ.
ಆಯುಷ್ಮಾನ್ ಯೋಜನೆ ಮೂಲಕ ಬಡವರಿಗೆ ರೂ. 5ಲಕ್ಷದವರೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ವೆಚ್ಚ ಭರಿಸಿವುದು ನಮ್ಮ ಮೋದಿ ಸರಕಾರ.
12 ಮತ್ತು 330 ರೂಪಾಯಿಯ ಅತ್ಯಂತ ಕಡಿಮೆ ವಿಮಾ ಮೊತ್ತದ ಮೂಲಕ ರೂ.2ಲಕ್ಷದಷ್ಟು ವಿಮಾ ಭದ್ರತೆ ನೀಡುತ್ತಿದೆ ನಮ್ಮ ಮೋದಿ ಸರಕಾರ.
ಜನೌಷಧಿ ಕೇಂದ್ರ ಮೂಲಕ ನೂರು ರೂಪಾಯಿಯ ಔಷಧಿಗಳು ಕೇವಲ ಮೂವತ್ತು ರೂಪಾಯಿಯಷ್ಟರ ಕಡಿಮೆ ಮೊತ್ತಕ್ಕೆ ನೀಡುತ್ತಿದೆ ನಮ್ಮ ಮೋದಿ ಸರಕಾರ.
ಭಯೋತ್ಪಾದನೆ ಮೂಲಕ ದಿನಂಪ್ರತಿ ಪತ್ರಿಕೆಗಳಲ್ಲಿ ನಮ್ಮ ಯೋಧರ ಹಾಗೂ ನಾಗರಿಕರ ಸಾವು ಕಾಣುತ್ತಿದ್ದ ನಮಗೆ ಇದೀಗ ಅಂತಹ ಘಟನೆಗಳೇ ಮರೆತು ಹೋಗುವಂತೆ ಮಾಡುತ್ತಿದೆ ನಮ್ಮ ಮೋದಿ ಸರಕಾರ.
75 ವರ್ಷಗಳ ನಂತರ ಸ್ವಾತಂತ್ರ್ಯ ಅಮ್ರತ ಮಹೋತ್ಸವದ ಸಂಧರ್ಭದಲ್ಲಿ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಮತ್ತು ಜಮ್ಮು ಕಾಶ್ಮೀರದ ಮೂಲೆಮೂಲೆಗಳಲ್ಲಿ ಪ್ರಥಮ ಬಾರಿಗೆ ಧ್ವಜಾರೋಹಣ ಮಾಡಿಸಿದ್ದು ನಮ್ಮ ಮೋದಿ ಸರಕಾರ. ತಾಯಿ ಹಾಲುಕುಡಿದಿದ್ದರೆ ಬಂದು ಲಾಲ್ ಚೌಕ್ ನಲ್ಲಿ ಧ್ವಜಾರೋಹಣ ಮಾಡಿ ಎಂದು ಗನ್ ಚಾಲೆಂಜ್ ಮಾಡುತ್ತಿದ್ದ ದೇಶದ್ರೋಹಿಗಳಿಗೆ ಉತ್ತರ ನೀಡಿದ್ದು ನಮ್ಮ ಮೋದಿ ಸರಕಾರ.
ಹಿಂದಿನ ಸರಕಾರ ತೈಲಬಾಂಡ್ ಖರೀದಿಸಿ ಮಾಡಿದ ಸುಮಾರು 1ಲಕ್ಷದ 14 ಸಾವಿರ ಕೋಟಿ ಸಾಲದಲ್ಲಿ ಸುಮಾರು 76ಸಾವಿರ ಕೋಟಿ ತೀರಿಸಿದ ಹೆಮ್ಮೆಯ ಮೋದಿ ಸರಕಾರ ನಮ್ಮದು.
ಹೇಳಲು ನೂರಾರು ವಿಷಯಗಳಿವೆ. ಬಿಜೆಪಿ ಹಾಗೂ ಮೋದಿ ಬೆಂಬಲಿಸಲು ಇಷ್ಟು ವಿಷಯಗಳು ಸಾಕಲ್ಲವೆ? ನಮ್ಮ ಒಂದೊಂದು ಮತವನ್ನು ನಾವು ನೀಡಿದ್ದು ಸಾರ್ಥಕ ಎನ್ನುವ ಭಾವ ಇಂತಹ ವಿಚಾರಗಳಿಂದಲೇ ಬರುವುದು. ಮತ್ತು ಇಂತಹ ವಿಚಾರಗಳಿಗಾಗಿಯೇ ನಾವು ಮತ್ತೆ ಮತ್ತೆ ಬಿಜೆಪಿಯನ್ನು ಬೆಂಬಲಿಸುವುದು.