
ಸರ್ಕಾರಿ ಕನ್ನಡ ಶಾಲೆ ಉಳಿಸಿ ಅಭಿಯಾನದಡಿ ನಮ್ಮ ಸಂಸ್ಥೆಯ ಕರ್ವಾಲು ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮದಡಿ ಮಕ್ಕಳಿಗೆ ಬ್ಯಾಗ್ ಕೊಡುವ ಕಾರ್ಯಕ್ರಮ ಇಂದು ನಡೆಯಿತು. ಮುಖ್ಯ ಅಭ್ಯಾಗತರಾಗಿ ಡಾ.ಸುದರ್ಶನ್ ಭಟ್, ರಘುರಾಮ ಭಟ್, ಹಾಗೂ ನೀತಾ ಪ್ರಭು ಉಪಸ್ಥಿತರಿದ್ದರು. ಶಾಲಾ ಅಭಿವ್ರಧ್ಧಿಗೆ ಹಾಗೂ ಮಕ್ಕಳಿಗೆ ಬೇಕಾಗುವ ಸಕಲ ಸಹಕಾರ ನೀಡಲು ನಾವೆಲ್ಲ ಸದಾ ಸಿಧ್ಧ ಎಂದು ಆಗಮಿಸಿದ ಗಣ್ಯರು ಹೇಳಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ನಾಗರಾಜ್ ಆಚಾರ್ಯ, ಮುಖ್ಯೋಪಾಧ್ಯಾಯರಾದ ಸವಿತ, ವಿಷ್ಣು ಸ್ನೇಹ ಬಳಗದ ಸದಸ್ಯರುಗಳಾದ ರಾಘವೇಂದ್ರ ಆಚಾರ್ಯ, ದಿನೇಶ್ ನಾಯಕ್, ಪೋಷಕರು, ಕೆಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 49 ಬ್ಯಾಗ್ ಹಸ್ತಾಂತರಿಸಿ ಇದಕ್ಕಾಗಿ ಧನ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಲಾಯಿತು