ಉಡುಪಿ ಪುರಭವನದಲ್ಲಿ ಜಿಲ್ಲಾ ಬಿಜೆಪಿಯಿಂದ ಆಶೀರ್ವಾದ ಯಾತ್ರೆ, ನೂತನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಅಭಿನಂದನೆ.

ಪಕ್ಷ ಸಂಘಟನೆ ಮತ್ತು ಮುಂಬರಲಿರುವ ಜಿ.ಪಂ., ತಾ.ಪಂ. ಚುನಾವಣೆಗಳ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ‘ಆಶೀರ್ವಾದ ಯಾತ್ರೆ ಸಮಾವೇಶ’ ಹಾಗೂ ನೂತನ ‘ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆಯವರ ಅಭಿನಂದನಾ ಸಮಾರಂಭ’ವು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಆಗಸ್ಟ್ 16, ಸೋಮವಾರ ಬೆಳಿಗ್ಗೆ 11.45ಕ್ಕೆ ಉಡುಪಿ ಪುರಭವನದಲ್ಲಿ ನಡೆಯಲಿದೆ.

ಈ ಸಮಾರಂಭದಲ್ಲಿ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಮಂಡಲ, ಪ್ರಕೋಷ್ಠ, ಮಹಾ ಶಕ್ತಿಕೇಂದ್ರ, ಶಕ್ತಿ ಕೇಂದ್ರ ಮತ್ತು ಬೂತ್ ಗಳ ಪದಾಧಿಕಾರಿಗಳು, ವಿವಿಧ ಸ್ತರದ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಕೇಂದ್ರ ಸಚಿವರನ್ನು ಬೆಳಿಗ್ಗೆ ಗಂಟೆ 11.00ಕ್ಕೆ ಉಡುಪಿ ಜಿಲ್ಲಾ ವ್ಯಾಪ್ತಿಯ ಹೆಜಮಾಡಿಯಲ್ಲಿ ಸ್ವಾಗತಿಸಿ, ಕಾಪು ಮೂಲಕ ಬರಮಾಡಿಕೊಳ್ಳಲಾಗುವುದು.

ಸಚಿವರು ಮಧ್ಯಾಹ್ನ ಗಂಟೆ 1.30ಕ್ಕೆ ಉಡುಪಿ ಶ್ರೀ ಕೃಷ್ಣ ಮಠವನ್ನು ಸಂದರ್ಶಿಸಿ, 2.00 ಗಂಟೆಗೆ ಸ್ವಾಮೀಜಿಯವರ ದರ್ಶನಗೈದು, 2.30ಕ್ಕೆ ಬಿಜೆಪಿ ಜಿಲ್ಲಾ ಕಛೇರಿಗೆ ಬೇಟಿ ನೀಡಲಿದ್ದಾರೆ.

ಮಧ್ಯಾಹ್ನ 3.00 ಗಂಟೆಗೆ ಪೆರ್ಡೂರಿನಲ್ಲಿ ಮತ್ತು 3.30ಕ್ಕೆ ಹೆಬ್ರಿಯಲ್ಲಿ ಕೇಂದ್ರ ಸಚಿವರನ್ನು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಸ್ವಾಗತಿಸಲಿದ್ದಾರೆ. ಸಂಜೆ ಗಂಟೆ 5.00ಕ್ಕೆ ಸಚಿವರು ಶ್ರೀ ಶೃಂಗೇರಿ ಮಠವನ್ನು ಸಂದರ್ಶಿಸಲಿದ್ದಾರೆ.

Leave a comment

Design a site like this with WordPress.com
Get started