ಮೂಡು ಅಲೆವೂರು ಕರ್ವಾಲು ಸರಕಾರಿ ಶಾಲಾ ಮಕ್ಕಳಿಗೆ ಕರ್ವಾಲಿನ ಶ್ರೀ ವಿಷ್ಣು ಸ್ನೇಹ ಬಳಗದಿಂದ ಶಾಲಾ ಪರಿಕರ ವಿತರಣೆ

ಮೂಡು ಅಲೆವೂರು ಕರ್ವಾಲು ಸರಕಾರಿ ಶಾಲಾ ಮಕ್ಕಳಿಗೆ ಕರ್ವಾಲಿನ ಶ್ರೀ ವಿಷ್ಣು ಸ್ನೇಹ ಬಳಗ ಎನ್ನು ಸಂಸ್ಥೆಯ ದತ್ತು ಸ್ವೀಕಾರ ಕಾರ್ಯಕ್ರಮದಡಿ, ಇವರ ಕೋರಿಕೆಯ ಮೇರೆಗೆ ಸಂಸ್ಥೆಯ ಹಿತೈಷಿಯಾದ ಶ್ರೀ‌ ಹರಿಕ್ರಷ್ಣ ಭಟ್ ಮೂಡು ಅಲೆವೂರು ಕರ್ವಾಲು ಇವರು ಸುಮಾರು ರೂ.11500/- ಮೊತ್ತದ ನೋಟ್ ಪುಸ್ತಕ, ಪೆನ್ ಪೆನ್ಸಿಲ್ ಇತ್ಯಾದಿ ಮಕ್ಕಳಿಗೆ ಬೇಕಾಗುವ ಪರಿಕರಗಳನ್ನು ನೀಡಿರುವರು. ಅವರಿಗೆ ಶ್ರೀ ವಿಷ್ಣು ಸ್ನೇಹ ಬಳಗ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಕರ್ವಾಲು ಇವರು ಧನ್ಯವಾದಗಳನ್ನು ಅರ್ಪಿಸಿರುವರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸವಿತಾ, ಪೋಷಕರಾದ ಹರೀಶ್ ನಾಯ್ಕ್, ಮಾನಸ ಮತ್ತಿತರರು ಉಪಸ್ಥಿತರಿದ್ದರು.

Leave a comment

Design a site like this with WordPress.com
Get started