
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಜನತೆಯ ಆರೋಗ್ಯ ಸಂರಕ್ಷಣೆಯ ಸತ್ಕಾರ್ಯದಲ್ಲಿ ಸೇವಾ ನಿರತರಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರಾದ ಉಡುಪಿಯ ಪ್ರವೀಣ, ಮಲ್ಪೆಯ ವಿಶಾಲ ನಾಯ್ಕ್ ಹಾಗೂ ಆಶಾ ಕಾರ್ಯಕರ್ತೆಯರಾದ ಅಂಬಲಪಾಡಿ ನಗರದ ಸರಸ್ವತಿ ಕೆ. ಶ್ರೀಯಾನ್, ಅಂಬಲಪಾಡಿ ಗ್ರಾಮಾಂತರದ ಗಾಯತ್ರಿ, ಕಪ್ಪೆಟ್ಟು ವಾರ್ಡಿನ ನಿಶಾ ಕಿದಿಯೂರು ಮತ್ತು ಉಚಿತ ಆಟೋ ಸೇವೆ ನೀಡುತ್ತಿರುವ ಆಟೋ ಚಾಲಕ ಶ್ರೀನಿವಾಸ್ ಕಪ್ಪೆಟ್ಟು ಇವರನ್ನು ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅಂಬಲಪಾಡಿ ದೇವಳಲ್ಲಿ ಶಾಲು ಹೊದೆಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಯೇಶನ್ ಅಧ್ಯಕ್ಷ ವಾಮನ್ ಪಾಲನ್, ಕಾರ್ಯದರ್ಶಿ ಮೇಘ, ಯುವಕ ಮಂಡಲ(ರಿ.) ಅಧ್ಯಕ್ಷ ಹರೀಶ್ ಪಾಲನ್, ಕೋವಿಡ್-19 ಹೆಲ್ಪ್ ಡೆಸ್ಕ್ ಅಂಬಲಪಾಡಿ ಇದರ ವಿವಿಧ ಸೇವಾ ವಿಭಾಗಗಳ ಪ್ರಮುಖರಾದ ಶಿವಕುಮಾರ್ ಅಂಬಲಪಾಡಿ, ಅಜಿತ್ ಕಪ್ಪೆಟ್ಟು, ಸತೀಶ್ ಭಂಡಾರಿ ಮತ್ತು ಹರೀಶ್ ಅಂಬಲಪಾಡಿ ಉಪಸ್ಥಿತರಿದ್ದರು.