Design a site like this with WordPress.com
Get started

ಅಮೇರಿಕಾದಲ್ಲಿ ‘ you can criticize God, but you can’t criticize Israel…’ ಎನ್ನುವ ಮಾತಿದೆ . ಇಸ್ರೇಲ್ ಅಂದರೆ ಶಕ್ತಿ. ಜಗತ್ತು ಪೂಜಿಸುವುದು ಶಕ್ತಿಯನ್ನ !!

ಇಸ್ರೇಲ್ ಎನ್ನುವ ಪದ ಎಷ್ಟು ಪವರ್ ಫುಲ್ ಅಂತ ಹಲವು ಸರ್ತಿ ಅನ್ನಿಸಿದೆ . ಜಗತ್ತಿನಲ್ಲಿ ಇರುವ ನೂರಾರು ದೇಶಗಳಲ್ಲಿ ಇಸ್ರೇಲ್ ಒಂದು. ಆದರೆ ನೂರರಲ್ಲಿ ಒಂದಾಗದೆ ಉಳಿದದ್ದು ಜಗತ್ತಿನಲ್ಲಿ ಅದಕ್ಕೆ ಆ ಮಟ್ಟದ ಕೀರ್ತಿ ತಂದು ಕೊಟ್ಟಿದೆ ಅನ್ನಬಹುದು . ಇಸ್ರೇಲ್ ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿ ನೆನಪು ಬರುವುದು ಪ್ಯಾಲೇಸ್ತೀನ್ ನವರು ಮಾಡುವ ಒಂದು ದಾಳಿಗೆ ಉತ್ತರವಾಗಿ ಇವರು ಮಾಡುವ ಎರಡು ಅಥವಾ ಮೂರು ಮರು ದಾಳಿಗಳು . ಇಸ್ರೇಲಿಗಳು ತಮ್ಮ ಮೇಲೆ ಆದ ಆಕ್ರಮಣಕ್ಕೆ ಹುಲುಬುತ್ತಾ ಅಥವಾ ಶೋಕ ಆಚರಿಸುತ್ತಾ ಕೂರುವ ಜಾಯಮಾನದವರಲ್ಲ . ದಾಳಿಗೆ ವಿರುದ್ಧವಾಗಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಹಾನಿ ಮಾಡುವ ದಾಳಿ ಮಾಡುವುದು ಜಗತ್ತಿಗೆ ಇಸ್ರೇಲ್ ಬಗ್ಗೆ ತಿಳಿದಿರುವ ಅತಿ ಸಾಮಾನ್ಯ ವಿಷಯ . ಇಸ್ರೇಲ್ ತನ್ನ ಸುತ್ತ ಇರುವ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿಲ್ಲ . ಇಸ್ರೇಲ್ ಸುತ್ತಾ ಲೆಬನಾನ್ , ಸಿರಿಯಾ , ಸೌದಿ ಅರೇಬಿಯಾ , ಪ್ಯಾಲೇಸ್ತೀನ್, ಜೋರ್ಡನ್ , ಈಜಿಪ್ಟ್ ದೇಶಗಳನ್ನ ಹೊಂದಿದೆ . ಇವೆಲ್ಲಾ ಮುಸ್ಲಿಂ ದೇಶಗಳು . ಈ ಎಲ್ಲಾ ದೇಶಗಳಿಗೂ ಇಸ್ರೇಲ್ ಎಂದರೆ ರಕ್ತ ಕುದಿಯುತ್ತದೆ . ಅದಕ್ಕೆ ಕಾರಣ ಇಸ್ರೇಲ್ ಇರುವ ಜಾಗ ನಮ್ಮದು ಇಸ್ರೇಲ್ ಗೆ ಸೇರಿದ್ದೇ ಅಲ್ಲ ಎನ್ನುವುದು ಬಹಳ ಹಳೆಯ ವಾದ . ಹೀಗಾಗಿ ಇಸ್ರೇಲ್ ಸದಾ ಎಚ್ಚರದಿಂದ ಇರಬೇಕಾದ ಪರಿಸ್ಥಿತಿಯಲ್ಲಿದೆ . ಸದಾ ಒಂದಲ್ಲ ಒಂದು ಆಕ್ರಮಣಗಳಿಗೆ ಇಸ್ರೇಲ್ ಗುರಿಯಾಗುತ್ತಲೇ ಇರುತ್ತದೆ . ಇಸ್ರೇಲ್ ಗೆ ನೀವು ಭೇಟಿ ಕೊಟ್ಟಿದ್ದೆ ಆದರೆ ಅಲ್ಲಿ ಅಘೋಷಿತ ಯುದ್ಧದ ಪರಿಸರ ಇರುವುದು ನಿಮ್ಮ ಅರಿವಿಗೆ ಬಂದಿತು . ಹಾಗೆಂದು ಜನ ಭಯಭೀತರಾಗಿದ್ದಾರೆ ಎಂದುಕೊಂಡರೆ ಅದು ತಪ್ಪು . ಜನ ಸಾಮಾನ್ಯ ರೀತಿಯಲ್ಲಿ ತಮ್ಮ ಜೀವನ ನೆಡೆಸುತ್ತಾ ಇರುತ್ತಾರೆ . ಜೋರಾಗಿ ಸೈರನ್ ಕೂಗುತ್ತದೆ . ಆ ಸೈರನ್ ಯುದ್ಧದ ಅಥವಾ ಆಪತ್ತು ಎನ್ನುವ ಸಂಕೇತ . ಜನ ಇಂತಹ ಸೈರನ್ ಗೆ ಹೊಂದಿಕೊಂಡಿದ್ದಾರೆ . ಅಲ್ಲಿ ಪ್ಯಾನಿಕ್ ಅನ್ನುವುದು ಇಲ್ಲ .ನಿಮ್ಮ ಪಕ್ಕದಲ್ಲಿ ಬೀಚ್ ನಲ್ಲಿ ಮಲಗಿದ್ದ ಪುರುಷ ಅಥವಾ ಮಹಿಳೆ ಕೆಲವು ನಿಮಿಷಗಳಲ್ಲಿ ಸೈನಿಕರಾಗಿ ಬದಲಾಗುತ್ತಾರೆ . ಪ್ರವಾಸಿಗನಿಗೆ ಕೀಪ್ ಯುವರ್ ಕೂಲ್ ಎಲ್ಲಾ ಕಂಟ್ರೋಲ್ ನಲ್ಲಿದೆ ಎನ್ನುವ ತಣ್ಣನೆಯ ಭಾವನೆ ನೀಡುತ್ತಾರೆ . ಮುಂದಿನ ಕತೆ , ಇಸ್ರೇಲಿಗಳು ನೀಡುವ ಖಡಕ್ ಉತ್ತರ ಜಗತ್ತಿಗೆ ತಿಳಿದಿದೆ . ಇಷ್ಟೆ ಆಗಿದ್ದರೆ ಇಸ್ರೇಲ್ ವಿಶೇಷ ಅನ್ನಿಸುತ್ತಾ ಇರಲಿಲ್ಲ ಜಗತ್ತಿಗೆ ಒಂದು ದಾರಿಯಾದರೆ ಇಸ್ರೇಲಿಗಳು ಮಾತ್ರ ತಮ್ಮದೆ ದಾರಿಯಲ್ಲಿ ತಮ್ಮದೆ ವೇಗದಲ್ಲಿ ಸಾಗುತ್ತಾರೆ . ಏನದು ಅಂತಹ ವೈಶಿಷ್ಟ್ಯಗಳು ಎನ್ನುವುದರ ಸುತ್ತ ಒಂದು ರೌಂಡ್ ಹಾಕೋಣ ಬನ್ನಿ .

ಇಸ್ರೇಲ್ ಸಾಧನೆಯ ಹಾದಿಯನ್ನ ಮುಖ್ಯ ಮಜಲುಗಳನ್ನ ತಿಳಿದರೆ ಇಸ್ರೇಲ್ ಎಂದರೆ ಜಗತ್ತು ಏಕೆ ವಿಶೇಷ ರೀತಿಯಲ್ಲಿ ನೋಡುತ್ತದೆ ಎನ್ನವುದ ತಿಳಿಯಬಹದು .

ಮೊದಲನೆ ಮಹಾಯುದ್ಧಕ್ಕೆ ಮುಂಚೆ :

ಯಹೂದಿಗಳು ಅತ್ಯಂತ ಸಣ್ಣ ಜನಾಂಗ . ಇವರ ಉಳಿವಿಗಾಗಿ ವಿದೇಶಗಳಿಂದ ಕಳಿಸುತ್ತಿದ್ದ ದೇಣಿಗೆ ಹಣದಿಂದ ಇಸ್ರೇಲಿ ಯಹೂದಿಗಳು ಜೀವನ ಸಾಗುತಿತ್ತು . ಇಸ್ರೇಲ್ ಇನ್ನೂ ಹುಟ್ಟಿರಲಿಲ್ಲ , ಹೇಳಿಕೊಳ್ಳುವಂತ ಯಾವುದೇ ರೀತಿಯ ಹೂಡಿಕೆ ಇವರಿಂದ ಬಂದಿರಲಿಲ್ಲ . ೧೯ ನೇ ಶತಮಾನದಲ್ಲಿ ರೋತ್ಸ್ ಚೈಲ್ಡ್ ವೈನ್ ತಯಾರಿಕೆಯಲ್ಲಿ ಮತ್ತು ರೈಲು ಉದ್ದಿಮೆಯಲ್ಲಿ ಪ್ರಥಮ ಬಾರಿಗೆ ಹಣ ಹೂಡಿಕೆ ಮಾಡುತ್ತದೆ . ಆದರೆ ಅದರಿಂದ ಹೆಚ್ಚಿನ ಯಶಸ್ಸು ಹಣವನ್ನ ಗಳಿಸುವುದಿಲ್ಲ . ಹೀಗಾಗಿ ಪ್ರಥಮ ಮಹಾಯುದ್ಧಕ್ಕೆ ಮುಂಚೆ ಇಸ್ರೇಲ್ ಮತ್ತು ಯಹೂದಿಗಳು ಎನ್ನುವ ಪದಗಳು ಇನ್ನೂ ಶೈಶವಾಸ್ಥೆಯಲ್ಲಿದ್ದವು .

ಎರಡನೆ ಮಹಾಯುದ್ಧದ ನಂತರ :

ಎರಡನೆ ಮಹಾಯುದ್ಧ ಮುಗಿದು ನಂತರ ೧೪ ಮೇ ೧೯೪೮ ರಲ್ಲಿ ಇಸ್ರೇಲ್ ಉದಯಿಸುತ್ತದೆ . ಇದೊಂದು ಸಂಕ್ರಮಣ ಕಾಲಘಟ್ಟ . ಜಗತ್ತಿನ ಉದ್ದಗಲಕ್ಕೂ ಹರಿದು ಹಂಚಿಹೋಗಿದ್ದ ಯಹೂದಿಗಳು ತಮ್ಮ ನೆಲಕ್ಕೆ ಹಿಂತಿರುಗಲು ಪ್ರಾರಂಭಿಸುತ್ತಾರೆ . ಹೀಗಿದ್ದೂ ಇವರ ಸಂಖ್ಯೆ ಲಕ್ಷ ಮೀರುವುದಿಲ್ಲ . ನಿಧಾನವಾಗಿ ಕಾರ್ಖಾನೆಗಳು , ಯೂನಿವರ್ಸಿಟಿ ಕಟ್ಟಲು ಶುರು ಮಾಡುತ್ತಾರೆ . ಮುಂದುವರಿದ ದೇಶಗಳ ಮುಂದೆ ಸಪ್ಪೆ ಎನಿಸುವಷ್ಟು ಆರ್ಥಿಕ ಸ್ಥಿತಿ ಇವರದಾಗಿತ್ತು .

ಎಪ್ಪತ್ತರ ದಶಕದಿಂದ ತೊಂಬತ್ತರ ದಶಕ ದಲ್ಲಿ ಇಸ್ರೇಲ್ :

ಆರು ಲಕ್ಷವಿದ್ದ ತನ್ನ ಜನಸಂಖ್ಯೆಯನ್ನ ೪೦ ಲಕ್ಷಕ್ಕೆ ಏರಿಸಿಕೊಂಡಿದ್ದು ಇಸ್ರೇಲ್ ನ ಮಹಾಸಾಧನೆ . ಇವರ ಆರ್ಥಿಕತೆ ಬೆಳೆದು ಈಸ್ಟ್ರೇನ್ ಯೂರೋಪಿಯನ್ ದೇಶಗಳ ಆರ್ಥಿಕತೆಯ ಮಟ್ಟಕ್ಕೆ ಬಂದು ಮುಟ್ಟುತ್ತದೆ . ಆದರೂ ಟೆಲಿಫೋನ್ , ಕಾರು ಜನ ಸಾಮಾನ್ಯನಿಗೆ ಎಟುಕುತ್ತಿರಲಿಲ್ಲ . ಜನರ ತಲಾದಾಯ ಯೂರೋಪಿನ ಅಥವಾ ಅಮೇರಿಕಾ ಜನರ ತಲಾಯಾದ ಅರ್ಧದಷ್ಟಿತ್ತು . ಅಂದಿನ ದಿನಗಲ್ಲಿ ಇಸ್ರೇಲ್ ವಜ್ರದ ವ್ಯಾಪಾರದಿಂದ ತನ್ನ ಹಣವನ್ನ ಗಳಿಸುತಿತ್ತು .

ತೊಂಬತ್ತರಿಂದ ಎರಡು ಸಾವಿರದ ಹದಿನೈದು :

ಈ ವೇಳೆಯಲ್ಲಿ ಇಸ್ರೇಲ್ ನಾಟಕೀಯ ಬೆಳವಣಿಗೆ ಕಾಣುತ್ತದೆ . ಜಗತ್ತಿನ ಅತ್ಯಂತ ಉನ್ನತ ತಂತ್ರಜ್ಞಾನ ಇವರಿಂದ ಸೃಷ್ಟಿಯಾಗುತ್ತೆ . ತನ್ನ ಸುತ್ತಲೂ ವೈರಿಗಳೇ ತುಂಬಿದ್ದಾರೆ ಆಕಸ್ಮಾತ್ ಅವರು ತಮ್ಮ ಸರಹದ್ದು ಮುಚ್ಚಿ ನೀರು ಆಹಾರ ನಿಲ್ಲಿಸಿಬಿಟ್ಟರೆ ಎನ್ನುವ ಭಯವನ್ನ ಮೆಟ್ಟಿ ನಿಂತು ಬೇರೆ ದೇಶಗಳಿಗೆ ಆಹಾರ ಎಕ್ಸ್ಪೋರ್ಟ್ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ . ನಲವತ್ತು ಲಕ್ಷವಿದ್ದ ತಮ್ಮ ಜನ ಸಂಖ್ಯೆಯನ್ನ ಎಪ್ಪತೈದು ಲಕ್ಷದ ಸನಿಹಕ್ಕೆ ತಂದು ನಿಲ್ಲಿಸಿದ್ದಾರೆ . ಇಂದಿಗೆ (೨೦೧೭)ಇಸ್ರೇಲ್ ಜನಸಂಖ್ಯೆ ೮೩ ಲಕ್ಷ . ಇವರ ತಲಾದಾಯ ಅನೇಕ ಯೂರೋಪಿಯನ್ ದೇಶಗಳನ್ನ ಹಿಂದಿಕ್ಕಿದೆ . ತಂತ್ರಜ್ಞಾನ ಪ್ರತಿಯೊಬ್ಬ ಪ್ರಜೆಯನ್ನ ತಲುಪಿದೆ . ಕಾರು , ಫೋನ್ ಅಷ್ಟೆಯೇಕೆ ಪ್ರತಿಯೊಬ್ಬ ನಾಗರಿಕನೂ ವಿದೇಶಿ ಪ್ರಯಾಣವನ್ನು ಕೂಡ ಮಾಡಬಲ್ಲಷ್ಟು ಸ್ಥಿತಿವಂತನಾಗಿದ್ದಾನೆ . ಮೂಲ ಸೌಕರ್ಯ ಜಗತ್ತಿನ ಮುಂದುವರೆದ ದೇಶಗಳಿಗೆ ಸೆಡ್ಡು ಹೊಡೆಯುವಂತೆ ನಿರ್ಮಿಸಲಾಗಿದೆ . ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾನಿಲಯ ಇಲ್ಲಿ ತಲೆ ಎತ್ತಿ ನಿಂತಿದೆ . ಟೆಲ್ ಅವಿವ್ ಜಗತ್ತಿನ ಅತ್ಯುತ್ತಮ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ . ಜಾಗತಿಕ ಮಟ್ಟದಲ್ಲಿ ತಮಗೆ ಬೇಕಾದದ್ದು ಪಡೆಯುವ ಲಾಬಿ ಮಾಡುವ ಹಂತಕ್ಕೆ ಇಸ್ರೇಲಿ ಯಹೂದಿಗಳು ಬೆಳೆದಿದ್ದಾರೆ . ಜಗತ್ತಿನ ಯಾವುದೇ ಮೂಲೆಯಲ್ಲಿ ಯಹೂದಿಯೊಬ್ಬನ ಮೇಲೆ ಆಕ್ರಮಣ ಮಾಡುವ ಮುಂಚೆ ಹತ್ತು ಬಾರಿ ಯೋಚಿಸಬೇಕು ಅಷ್ಟರಮಟ್ಟಿಗೆ ತನ್ನ ಶತ್ರುವಿನಲ್ಲಿ ಭಯ ಬಿತ್ತುವಲ್ಲಿ ಇಸ್ರೇಲಿಗಳು ಯಶಸ್ವಿಯಾಗಿದ್ದಾರೆ .

ಇಸ್ರೇಲಿಗಳ ಹೊಸ ಪರ್ವಾರಂಭ :

ಜಗತ್ತಿನಲ್ಲಿ ೧೯೬ ದೇಶಗಳಿವೆ ಅದರಲ್ಲಿ ೫೦ ಮುಸ್ಲಿಂ ದೇಶಗಳು ೭ ಮುಸ್ಲಿಂ ಬಾಹುಳ್ಯವಿರುವ ದೇಶಗಳು ಹೀಗಾಗಿ ೫೭ ದೇಶಗಳನ್ನ ಮುಸ್ಲಿಂ ದೇಶಗಳು ಎಂದು ವಿಂಗಡಿಸಬಹುದು . ಜಗತ್ತಿನ ಜನಸಂಖ್ಯೆ ೭ (೭೦೦ಕೋಟಿ )ಬಿಲಿಯನ್ ಅದರಲ್ಲಿ ೧. ೮ (೧೮೦ಕೋಟಿ ) ಬಿಲಿಯನ್ ಜನಸಂಖ್ಯೆ ಮುಸ್ಲಿಮರು . ಅಂದರೆ ಜಗತ್ತಿನ ಜನಸಂಖ್ಯೆಯ ೨೫ ಪ್ರತಿಶತ ಈ ಜನಾಂಗದ ಜನರಿದ್ದಾರೆ . ಒಟ್ಟು ಮುಸ್ಲಿಂ ದೇಶಗಳ ಜಿಡಿಪಿ ಎರಡು ಟ್ರಿಲಿಯನ್ ಡಾಲರ್ . ಜಗತ್ತಿನ ಒಟ್ಟು ಜಿಡಿಪಿ ೭೨ ಟ್ರಿಲಿಯನ್ . ಇಸ್ರೇಲ್ ಜನಸಂಖ್ಯೆ ಕೇವಲ ೮೩ ಲಕ್ಷ ಇವರ ಜಿಡಿಪಿ ೩೦೦ ಬಿಲಿಯನ್ ಡಾಲರ್. ಇಸ್ರೇಲ್ ಬೆಳವಣಿಗೆಯ ವೇಗ ಗಮನಿಸಿದರೆ ಇದು ಐನೂರು ಬಿಲಿಯನ್ ಡಾಲರ್ ಮುಟ್ಟಲು ಹೆಚ್ಚು ಸಮಯ ಬೇಕಿಲ್ಲ . ಅಂದರೆ ೫೭ ದೇಶಗಳ ಒಟ್ಟು ಮೌಲ್ಯದ ಕಾಲು ಭಾಗ ಕೇವಲ ೮೩ ಲಕ್ಷ ಜನಸಂಖ್ಯೆಯ ಇಸ್ರೇಲ್ ಒಂದು ದೇಶ ಹೊಂದಲಿದೆ ಎಂದರೆ ಇಸ್ರೇಲ್ ಅದೆಷ್ಟು ಪವರ್ ಫುಲ್ ಜಗತ್ತಿನ ಬೇರೆಲ್ಲಾ ದೇಶಗಳು ಇಸ್ರೇಲ್ ಎಂದಾಕ್ಷಣ ಅದೇಕೆ ಆ ಮಟ್ಟಿನ ಗೌರವ ಕೊಡುತ್ತವೆ ಎನ್ನುವ ಅರಿವಾದಿತು . ವಿಸ್ತೀರ್ಣದಲ್ಲಿ ನಮ್ಮ ಮಿಝೋರಾಂ ರಾಜ್ಯಕ್ಕಿಂತ ಸ್ವಲ್ಪ ಕಡಿಮೆ ಹೊಂದಿರುವ ಇಸ್ರೇಲ್ ಗೌರವದಲ್ಲಿ ಮಾತ್ರ ಜಗತ್ತನ್ನ ಆಕ್ರಮಿಸಿದೆ . ಅಮೇರಿಕಾ ದ ಸಂಸತ್ತು , ಅಮೆರಿಕಾದ ಮೀಡಿಯಾ ಹೌಸ್ , ಅಮೆರಿಕಾದ ಬಹುಪಾಲು ವ್ಯಾಪಾರ ಇಸ್ರೇಲ್ ಯಹೂದಿಗಳ ಕೈಲಿದೆ . ಅಮೇರಿಕಾದ ಮೀಡಿಯಾ ಹೌಸ್ ಗಳಲ್ಲಿ ೯೦ ಕ್ಕೂ ಅಧಿಕ ಇಸ್ರೇಲಿಗಳ ಆಡಳಿತದಲ್ಲಿದೆ . ಹೀಗಾಗಿ ಅಮೇರಿಕಾದಲ್ಲಿ ‘ you can criticize God, but you can’t criticize Israel…’ ಎನ್ನುವ ಮಾತಿದೆ .

ರೋತ್ಸ್ ಚೈಲ್ಡ್ ಎನ್ನುವ ಯಹೂದಿ ಸಂಸ್ಥೆ ಮೂಲವಾಗಿ ಜರ್ಮನಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಲ್ಲಿ ಬಹಳ ಹಿಡಿತ ಹೊಂದಿದೆ . ಆರ್ಥಿಕ ವಲಯದಲ್ಲಿ ರೋತ್ಸ್ ಚೈಲ್ಡ್ ಎನ್ನುವುದು ಎಷ್ಟು ಪ್ರಭಲ ಸಂಸ್ಥೆಎಂದರೆ ಜಗತ್ತಿನ ಹಿರಿಯಣ್ಣ ಅಮೇರಿಕಾ ದ ಪ್ರೆಸಿಡೆಂಟ್ ಯಾರಾಗ ಬೇಕು ಎನ್ನುವುದನ್ನ ಕೂಡ ನಿರ್ಧರಿಸುವಷ್ಟು , ಬಹುತೇಕ ಎಲ್ಲಾ ಮುಖ್ಯ ದೇಶಗಳ ಸೆಂಟ್ರಲ್ ಬ್ಯಾಂಕ್ ನಲ್ಲಿ ಇವರು ಪರೋಕ್ಷ ಅಥವಾ ಅಪರೋಕ್ಷವಾಗಿ ಹಿಡಿತ ಹೊಂದಿದ್ದಾರೆ ಎನ್ನುವುದು ಆರ್ಥಿಕವಲಯದಲ್ಲಿ ಆಗಾಗ್ಗೆ ಪಿಸುಗುಡುವ ವಿಷಯ . ಬೆಂಕಿಯಿಲ್ಲದೆ ಖಾಲಿ ಹೊಗೆ ಹೇಗೆ ತಾನೇ ಬಂದಿತು ? ಹೀಗಾಗಿ ಅಮೇರಿಕಾ ಒಂದೇ ಅಲ್ಲದೆ ಜಗತ್ತಿನ ಮುಖ್ಯ ದೇಶಗಳ ಹಣಕಾಸು ಆಟವನ್ನ ನಿಯಂತ್ರಿಸುವುದು ರೋತ್ಸ್ ಚೈಲ್ಡ್ ಎನ್ನುವ ಯಹೂದಿ ಸಂಸ್ಥೆ .

ಜಗತ್ತನ್ನ ಆಳಲು ಬೇಕಿರುವುದು ಆರ್ಥಿಕ ಸಬಲತೆ ಮಾತ್ರವಲ್ಲ ಅದರ ಜೊತೆಗೆ ತಂತ್ರಜ್ಞಾನದ ನಿಪುಣತೆ ತನ್ನ ಜನಾಂಗದ ಮೇಲೆ ,ತನ್ನ ಬದ್ಧತೆಯ ಮೇಲೆ ಅತೀವ ಕಾಳಜಿ ನಂಬಿಕೆ ಮತ್ತು ವಿಶ್ವಾಸ . ಕೋಟಿ ಮೀರಿದ ಈ ಜನಾಂಗ ಮುಂಬರುವ ದಿನಗಳಲ್ಲಿ ಇಡಿ ವಿಶ್ವದ ಮೇಲೆ ಹಿಡಿತ ಹೊಂದಿದರೆ ಅದು ಆಶ್ಚರ್ಯ ಪಡುವ ವಿಷಯವಂತೂ ಅಲ್ಲ . ಇಸ್ರೇಲಿಗಳ ಯಹೂದಿಗಳ ಬದ್ಧತೆ , ಕಟ್ಟು ನಿಟ್ಟಿಗೆ ಉದಾಹರಣೆ ನೀಡಲೇಬೇಕು . ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಮಿಲಿಟರಿ ಸೇವೆ ಸಲ್ಲಿಸಲೇಬೇಕು . ಇಲ್ಲಿ ಹೆಣ್ಣು ಗಂಡು ಎನ್ನವ ಬೇಧವಿಲ್ಲ . ಇಸ್ರೇಲಿಗಳ ಮಗು ಜಗತ್ತಿನ ಯಾವುದೇ ಭಾಗದಲ್ಲಿ ಜನಿಸಲಿ ಆ ಮಗುವನ್ನ ಇಸ್ರೇಲಿ ಎಂದೇ ಪರಿಗಣಿಸಲಾಗುತ್ತದೆ . ಮತ್ತು ಆ ಮಗು ಕೂಡ ಮಿಲಿಟರಿ ಸೇವೆ ಮಾಡಲೇಬೇಕು . ವಿದೇಶದಲ್ಲಿ ನೆಲೆಸಿರುವ ಇಂತಹ ಮಕ್ಕಳು ೧೭ ನೇ ವಯಸ್ಸಿಗೆ ತಲುಪಿದಾಗ ತಾವಿರುವ ದೇಶದ ಇಸ್ರೇಲ್ ಎಂಬೆಸಿಗೆ ಹೋಗಿ ನೊಂದಾಯಿಸಿಕೊಳ್ಳಬೇಕು . ಆಗ ಮಾತ್ರ ಇದರಿಂದ ವಿನಾಯತಿ ಸಿಗುತ್ತದೆ . ಯುದ್ಧ ಅಥವಾ ಸಾಮಾನ್ಯವಲ್ಲದ ಸನ್ನಿವೇಶದಲ್ಲಿ ಪ್ರತಿ ಪ್ರಜೆಯೂ ಸೈನಿಕನಾಗಿ ಬದಲಾವಣೆ ಹೊಂದುವ ವ್ಯವಸ್ಥೆ ಅದನ್ನ ಕಟ್ಟುನಿಟ್ಟಿನಿಂದ ಪಾಲಿಸುವ ಜನ ನಾಳೆ ಜಗತ್ತನ್ನ ಆಳಲು ಏಕೆ ಸಾಧ್ಯವಿಲ್ಲ . ?

ಇಸ್ರೇಲ್ ಯುವ ಜನತೆ ತನ್ನ ಹಿಂದಿನ ತಲೆಮಾರಿಗಿಂತ ಹೆಚ್ಚು ಧಾರ್ಮಿಕತೆ ಕಡೆ ಒಲವು ತೋರುತ್ತಿದೆ . ತಂತ್ರಜ್ಞಾನ ನಭದೆತ್ತರಕ್ಕೆ ಚಿಮ್ಮುತ್ತಿರುವ ಅದರ ಹರಿಕಾರರು ಆಗಿರುವ ಯಹೂದಿಗಳು ಮಾತ್ರ ತಮ್ಮ ಮೂಲ ನಂಬಿಕೆಗಳಿಗೆ ಹೆಚ್ಚು ಹೆಚ್ಚು ನಿಷ್ಠರಾಗುತ್ತಿದ್ದಾರೆ . ಯಹೂದಿಯಲ್ಲದ ಇತರರೊಡನೆ ಮದುವೆಯಂತಹ ಸಂಬಂಧಗಳನ್ನ ಅರವತ್ತೈದು ಪ್ರತಿಶತ ಇಸ್ರೇಲಿಗಳು ಒಪ್ಪುವುದಿಲ್ಲ ಎನ್ನುವುದು ಇಂತಹ ಮಾತಿಗೆ ಪುಷ್ಟಿ ನೀಡುತ್ತದೆ . ಜಗತ್ತು ಬೇರೆ ನಾವೇ ಬೇರೆ ಎನ್ನುವ ಭಾವನೆ ಬಂದರೆ ಅಲ್ಲಿಗೆ ಎಂತಹ ಸಾಧನೆಯೂ ಶೂನ್ಯ . ಇಸ್ರೇಲ್ ಕೇವಲ ಧಾರ್ಮಿಕತೆಗೆ ಕಟ್ಟು ಬೀಳದೆ ಇರಲಿ .ಮುಂಬರುವ ದಿನಗಲ್ಲಿ ಇವರಿಂದ ವಿಶ್ವ ಶಾಂತಿ ಸ್ಥಾಪನೆಯಾಗಲಿ ಎನ್ನುವುದಷ್ಟೆ ಆಶಯ . ಇದೇನೆ ಇರಲಿ ಯಹೂದಿಗಳ ಯಶೋಗಾಥೆ ಸದ್ಯಕ್ಕೆ ನಮಗಂತೂ ಸ್ಪೂರ್ತಿದಾಯಕ. ಸ್ವಾವಲಂಬನೆ , ಸ್ವಾಭಿಮಾನ , ಪರಿಶ್ರಮ ಅವರಿಂದ ಒಂಚೂರು ನಾವು ಎರವಲು ಪಡೆದರೆ ಯಶೋಗಾಥೆಯಲ್ಲಿ ಯಹೂದಿಗಳಿಗೂ ನಾವು ಸೆಡ್ಡು ಹೊಡೆಯಬಹದು . ನಾವು ಅದಕ್ಕೆ ಸಿದ್ಧರಿದ್ದೇವೆಯೇ ??

ಲೇಖನ – #ರಂಗಸ್ವಾಮಿ_ಮೂಕನಹಳ್ಳಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: