Design a site like this with WordPress.com
Get started

ಅಪರೇಷನ್ ಗಾರ್ಡಿಯನ್ ಆಫ್ ದಿ ವಾಲ್”

ಲೇಖನ : ಶ್ರೀಕಾಂತ್ ಶೆಟ್ಟಿ

ಆ ಚಿಲ್ಲರೆ 35 ಎಕರೆ ಜಾಗಕ್ಕಾಗಿ ಪ್ರಪಂಚದ ಮೂರು ಪ್ರಬಲ ಮತಗಳು ಕಳೆದ ಮೂರು ಸಾವಿರ ವರ್ಷಗಳಿಂದ ಬಡಿದಾಡುತ್ತಿವೆ. ಅಯೋಧ್ಯ ಕಾಶಿ ಮಥುರಾ ಮೊದಲಾದ 500 ವರ್ಷದ ಕೆಳಗೆ ಮುಸಲ್ಮಾನರ ದಾಳಿಗೆ ತುತ್ತಾಗಿ ಹಿಂದುಗಳ ಕೈ ತಪ್ಪಿಹೋದ ತೀರ್ಥಕ್ಷೇತ್ರಗಳನ್ನು ಹಿಂದುಗಳಿಗೆ ಮರಳಿ ಕೊಡಿ ಎಂದುಕೇಳಿಕೊಂಡಾಗ , ಅದಕ್ಕೆ ಯಾಕ್ರೀ ಗಲಾಟೆ ಮಾಡುತ್ತಿದ್ದೀರಾ ಅಲ್ಲೊಂದು ಆಸ್ಪತ್ರೆನೋ . ಶಾಲೆನೋ ಕಟ್ಟಿ. ಸುಮ್ಮನೆ ಯಾಕೆ ಘರ್ಷಣೆ? ಎಂದು ಮಹಾ ಮಾನವತಾವಾದಿಗಳಂತೆ ಸೋಗು ಹಾಕುವ ಬುದ್ದಿಜೀವಿಗಳು ಜೆರುಸಲೆಮ್ಮಿನ ಮಾತೆತ್ತಿದರೆ ಸಾಕು ನಾಲಿಗೆ ಸತ್ತವರಂತೆ ಸುಮ್ಮನಾಗಿಬಿಡುತ್ತಾರೆ . ಜೆರುಸಲೇಮ್ ಎಂಬ ನಗರದೊಳಗಿರುವ ಆ ಪುಟ್ಟ ಪ್ರದೇಶಕ್ಕಾಗಿ ಯಹೂದಿಗಳು ಕ್ರೈಸ್ತರು ಮತ್ತು ಮುಸಲ್ಮಾನರು ಕಳೆದ ಎರಡು ಸಾವಿರ ವರ್ಷಗಳಿಂದ ಬಡಿದಾಡುತ್ತಾ ಬಂದಿದ್ದಾರೆ. ಇದಕ್ಕಾಗಿ 41 ಭಾರಿ ಪ್ರಮಾಣದ ಯುದ್ಧಗಳಾಗಿವೆ. ಲೆಕ್ಕವಿಲ್ಲದಷ್ಟು ಘರ್ಷಣೆ ನಡೆದು ಲಕ್ಷಾಂತರ ಜನ ಸತ್ತಿದ್ದಾರೆ. ಜೆರೂಸಲೇಮಿನ ಮಣ್ಣು ಹೀರಿಕೊಂಡ ರಕ್ತದಲ್ಲಿ ಯಹೂದಿ ಬುಡಕಟ್ಟುಗಳುಬ್ಯಾಬಿಲೋನಿಯನ್ನರು ಬೆಜಂಟೈನರು, ರೋಮನ್ ಕ್ರೈಸ್ತರು ಆಟೋಮನ್ನರು ಹೀಗೆ ಹತ್ತಾರು ಪಂಗಡಗಳ ಪಾಲಿದೆ.
ಆದರೆ ಜೆರುಸಲಂ ಎಂಬ ಪವಿತ್ರ ಭೂಮಿಯ ರಕ್ತದಾಹ ಇನ್ನೂ ತಣಿದಿಲ್ಲ
ಅಷ್ಟಕ್ಕೂ ಈ ಜಗತ್ತಿನ ಅತ್ಯಂತ ವಿವಾದಗ್ರಸ್ತ ಭೂಮಿಯ ಇತಿಹಾಸವೇನು ತಿಳಿದುಕೊಳ್ಳುವ ಸಣ್ಣ ಪ್ರಯತ್ನ ಮಾಡೋಣ.
ಸರಿ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಸೆಮಿಟಿಕ್ ಮತಗಳ ( ಯಹೂದಿ ಕ್ರೈಸ್ತ ಮತ್ತು ಇಸ್ಲಾಂ) ಆದ್ಯ ಪ್ರವಾದಿ ಅಬ್ರಹಮ್ ನಿಂದ ಯಹೂದಿ ಮತ ಸ್ಥಾಪನೆಯಾಯಿತು. ಅಬ್ರಾಮನಿಗೆ ದೇವರ ಸಾಕ್ಷಾತ್ಕಾರವಾಗಿದ್ದು ಇದೇ ಜೆರುಸಲೆಮ್ಮಿನ ಗುಡ್ಡದಮೇಲೆ.. ಇದೇ ಗುಡ್ಡದ ಮಣ್ಣಿನಿಂದ ದೇವರು ಪ್ರಪಂಚದ ಮೊತ್ತಮೊದಲ ಮಾನವನಾದ ಆದಮನನ್ನು ಸೃಷ್ಟಿ ಮಾಡಿದ ಎನ್ನುವ ನಂಬಿಕೆ ಯಹೂದಿಗಳಲ್ಲಿ ಇದೆ. ಯಹೂದಿ ಮತಸ್ಥಾಪಕ ಅಬ್ರಹಮನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನ ಹೆಸರು ಇಸ್ಮಾಯಿಲ್ ಮತ್ತೊಬ್ಬ ಇಸಾಕ್. ಇಸಾಕ್ ಅಬ್ರಹಮನ ಅತ್ಯಂತ ಪ್ರೀತಿಯ ಮಗ. ಒಂದು ದಿನ ಅಬ್ರಹಾಮನಿಗೆ ದೇವರು ಕಾಣಿಸಿಕೊಂಡು ಇಸಾಕನನ್ನು ತನಗೆ ಬಲಿ ಕೊಡಬೇಕು ಎಂದು ಕೇಳಿದ. ದೇವರ ಬಗ್ಗೆ ಅಪಾರ ಭಕ್ತಿ ಪ್ರೀತಿಯಿಂದ ಅಬ್ರಾಹಂ ತನ್ನ ಮಗನನ್ನು ಬಲಿ ಕೊಡಲು ಜೆರೂಸಲೇಮಿನ ಗುಡ್ಡಕ್ಕೆ ಕರೆದುಕೊಂಡು ಹೋಗುತ್ತಾನೆ. ಆದರೆ ಅಬ್ರಹಮನ ತ್ಯಾಗವನ್ನು ಕಂಡ ದೇವರು ಇಸಾಕನ ಬದಲಿಗೆ ಒಂದು ಮೇಕೆಯನ್ನು ಬಲಿ ಪಡೆದು ಇಸಾಕನಿಗೆ ಜೀವದಾನ ನೀಡಿದ. ಈ ಘಟನೆ ನಡೆದಿದ್ದು ಕೂಡ ಜೆರೂಸಲೇಮಿನ ಪವಿತ್ರ ಭೂಮಿಯಲ್ಲಿ. ಯಹೂದಿಗಳು ಈ ನೆಲಕ್ಕೆ ಹರ್ ಹವಾಯಿಯತ್ ಎಂದು ಕರೆಯುತ್ತಾರೆ.

ಅಬ್ರಹಮ್ ಮೊದಲು ವಾಸವಾಗಿದ್ದು ಮೆಸಪಟೊಮಿಯದಲ್ಲಿ. ಆದರೆ ಆತನಿಗೆ ಭಗವದ್ ಸಾಕ್ಷಾತ್ಕಾರ ವಾಗಿದ್ದು ಮಾತ್ರ ಜೆರುಸಲೆಂ ಎಂಬ ಬರಡು ಬೆಂಗಾಡಿನ ಗುಡ್ಡದಮೇಲೆ. ಹಿಬ್ರೂ ಬೈಬಲ್ಲಿನ ಬುಕ್ ಅಫ್ ಜೆನೆಸಿಸ್ ನಲ್ಲಿ ದೇವರು ಮತ್ತು ಅಬ್ರಹಾಂ ನಡುವಿನ ಸಂಭಾಷಣೆಯ ವಿವರ ಸಿಗುತ್ತದೆ. ದೇವರ ಆದೇಶದಂತೆ ಅಬ್ರಹಮ್ ಜೆರುಸಲೇಮಿಗೆ ಬಂದು ಅದರ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಪಡಿಸುತ್ತಾರೆ. ಅವರ ಮೊಮ್ಮಗ ಅಂದರೆ ಇಸಾಕನ ಮಗ ಜಾಕೋಬ್ ಮಹಾನ್ ಪರಾಕ್ರಮಿ. ಆತ ದೇವದೂತರೊಡನೆ ಹೋರಾಟ ಮಾಡಿದ ಎಂಬ ದಂತಕಥೆಗಳು ಇವೆ. ಈತನ ಧೈರ್ಯ ಮತ್ತು ಪರಾಕ್ರಮವನ್ನು ಕಂಡು ಆತನಿಗೆ ಇಸ್ರೇಲ್ ಎಂಬ ಬಿರುದನ್ನು ದೇವದೂತರು ನೀಡುತ್ತಾರೆ. ಇವನು ತನ್ನ ಬಾಹುಬಲದಿಂದ ಒಂದು ದೇಶವನ್ನು ಕಟ್ಟಿದ. ಆ ದೇಶದ ಹೆಸರು ಇಸ್ರೇಲ್. ಮುಂದೆ ಜಕೋಬನ 12 ಮಕ್ಕಳು ಮುಂದೆ 12 ಯಹೂದಿ ಬುಡಕಟ್ಟುಗಳಾಗಿ ಬೆಳೆದು. ಇಸ್ರೇಲಿನ ತುಂಬಾ ಹರಡಿಕೊಂಡರು. ಯಹೂದಿಗಳ ಸಮೃದ್ಧವಾದ ಇಸ್ರೇಲ್ ಹುಟ್ಟಿದ್ದು ಹೀಗೆ.

ಯಹೂದಿಗಳ ಪ್ರಸಿದ್ಧ ಅರಸನಾದ ಕಿಂಗ್ ಸೋಲೋಮನ್ ಜೆರೂಸಲೇಮಿನ ಗುಡ್ಡದ ಪವಿತ್ರ ಭೂಮಿಯಲ್ಲಿ ಒಂದು ಭವ್ಯ ದೇವಾಲಯವನ್ನು ನಿರ್ಮಿಸಿದ. ಅಲ್ಲಿಂದ ಮುಂದೆ ಈ ಗುಡ್ಡಕ್ಕೆ ಟೆಂಪಲ್ ಮೌಂಟ್ ಎಂಬ ಇನ್ನೊಂದು ಹೆಸರು ಸೇರ್ಪಡೆಯಾಯಿತು.

ಈ ದೇಗುಲ ಕಟ್ಟಲ್ಪಟ್ಟಿದ್ದು 3000 ವರ್ಷಗಳ ಹಿಂದೆ. ಇದನ್ನು ಜೆರುಸಲೆಮ್ಮಿನ ಇತಿಹಾಸದಲ್ಲಿ ಮೊದಲ ದೇವಾಲಯ ಅಥವಾ ಫಸ್ಟ್ ಟೆಂಪಲ್ ಎಂದು ಕರೆಯುತ್ತಾರೆ. ನಾಗರಿಕತೆಗಳ ನಡುವೆ ಸಂಘರ್ಷ ಉತ್ತುಂಗದಲ್ಲಿದ್ದ ಕಾಲಘಟ್ಟವದು. ಬ್ಯಾಬಿಲೋನಿಯನ್ನರು ಯಹೂದಿಗಳ ಮೇಲೆ ದಾಳಿ ಮಾಡಿ ಜೆರುಸಲೇಮನ್ನು ವಶಪಡಿಸಿಕೊಂಡು ಅಲ್ಲಿದ್ದ ದೇವಾಲಯದ ಅಪಾರ ಸಂಪತ್ತನ್ನು ಲೂಟಿ ಮಾಡಿ ದೇವಾಲಯವನ್ನು ನೆಲಸಮ ಮಾಡಿದರು. ಇದು ಯಹೂದಿಗಳ ಮೇಲೆ ನಡೆದ ಮೊದಲ ಆಕ್ರಮಣ.

ಆದರೆ ಯಹೂದಿಗಳು ವಿರಮಿಸಲಿಲ್ಲ ಸತತವಾದ ಹೋರಾಟದ ಬಳಿಕ ತಮ್ಮ ಪವಿತ್ರ ಭೂಮಿಯನ್ನು ಮತ್ತೆ ವಶಪಡಿಸಿಕೊಂಡು 500 ವರ್ಷಗಳ ತರುವಾಯ ಅಂದರೆ ಇಂದಿನಿಂದ ಸುಮಾರು ಎರಡುವರೆ ಸಾವಿರ ವರ್ಷದ ಹಿಂದೆ ಮತ್ತೆ ತಮ್ಮ ದೇವಾಲಯವನ್ನು ಜೆರೂಸಲೇಮಿನ ಅದೇ ಸ್ಥಳದಲ್ಲಿ ಕಟ್ಟಿದರು. ಇದನ್ನು ಸೆಕೆಂಡ್ ಟೆಂಪಲ್ ಎನ್ನುತ್ತಾರೆ.

ಇದಾದ ಆರುನೂರು ವರ್ಷಗಳ ಬಳಿಕ ಜೆರುಸಲೆಮ್ ನಲ್ಲಿ ಮತ್ತೊಂದು ಮಹತ್ವದ ವಿದ್ಯಮಾನ ನಡೆಯಿತು. ಯಹೂದಿ ಚಿಂತನೆಗಳನ್ನು ದಿಕ್ಕರಿಸಿ ನಾನೇ ದೇವರ ಮಗ ಎಂದು ಯೇಸುಕ್ರಿಸ್ತರು ಮತಪ್ರಚಾರ ಆರಂಭಿಸಿದರು. ಇದು ಯಹೂದಿಗಳ ಕಣ್ಣು ಕೆಂಪಾಗಿಸಿತು. ಸಾಮಾನ್ಯವಾಗಿ ಹೊಸಮತ ಒಂದರ ಉಗಮದ ಸಮಯದಲ್ಲಿ ಎದುರಾಗುವ ಪ್ರತಿರೋಧಗಳನ್ನು ಯೇಸುಕ್ರಿಸ್ತರು ಕೂಡ ಎದುರಿಸಬೇಕಾಯಿತು. ಯೇಸು ಕ್ರಿಸ್ತರನ್ನು ಇದೇ ಜರೂಸಲಮ್ ನ ಗುಡ್ಡದಮೇಲೆ ಯಹೂದಿಗಳು ಶಿಲುಬೆಗೇರಿಸಿದರು. ಆ ಮೂಲಕ ಯಹೂದಿಗಳಿಗೆ ಒಬ್ಬ ಪ್ರಬಲ ಶತ್ರು ಪಂಗಡ ಹುಟ್ಟಿಕೊಂಡಿತು. ಅದೇ ಕ್ರಿಶ್ಚಿಯನಿಟಿ

ರಾಜ್ಯಾಧಿಕಾರ ಸಿಗುವವರೆಗೆ ಕಾದುಕುಳಿತಿದ್ದ ಕ್ರೈಸ್ತಮತ ಅವಲಂಬಿಗಳು ರೋಮನ್ ಸಾಮ್ರಾಜ್ಯ ತಮ್ಮ ಕೈವಶ ಆಗುತ್ತಿದ್ದಂತೆ ಯಹೂದಿಗಳ ಮೇಲೆ ಮುರಕೊಂಡು ಬಿದ್ದರು. ಕ್ರಿಸ್ತಶಕ 70ರಲ್ಲಿ ರೋಮನ್ನರು ಯಹೂದಿಗಳ ವಿರುದ್ಧ ಪ್ರತೀಕಾರ ತೀರಿಸಿ ಅವರ ಪವಿತ್ರ ಬೆಟ್ಟದ ಮೇಲಿದ್ದ ಎರಡನೇ ದೇವಾಲಯವನ್ನು ಕೂಡ ಮುರಿದು ಹಾಕಿದರು. ಆದರೆ ಆ ಎರಡನೇ ದೇಗುಲ ಪಶ್ಚಿಮ ಭಾಗದ ಒಂದು ಗೋಡೆ ಮಾತ್ರ ಉಳಿದುಕೊಂಡಿತು. ಅದು ಇವತ್ತಿನವರೆಗೂ ಅಸ್ತಿತ್ವದಲ್ಲಿದೆ. ವೆಸ್ಟರ್ನ್ ವಾಲ್ ಎಂದು ಕರೆಯಲ್ಪಡುವ ಆ ಗೋಡೆ ಇಂದಿಗೂ ಜಗತ್ತಿನ ಮೂಲೆ ಮೂಲೆಯಲ್ಲಿರುವ ಯಹೂದಿಗಳಿಗೆ ಅತ್ಯಂತ ಪರಮಪವಿತ್ರ ಸ್ಥಳ.
ಜೆರೂಸಲೇಮಿನ ಲ್ಲಿದ್ದಾಗ ಎರಡನೇ ದೇವಾಲಯದ ಒಳಗೆ ಕೇವಲ ರಬ್ಬಿ ಗಳು ಮಾತ್ರ ತೆರಳುತ್ತಿದ್ದರಂತೆ. ಸಾಮಾನ್ಯ ಯಹೂದಿಗಳಿಗೂ ಈ ದೇವಾಲಯದ ಒಳಗೆ ಪ್ರವೇಶ ಇರಲಿಲ್ಲ. ಹೀಗಾಗಿ ಸಂಪ್ರದಾಯಸ್ಥ ಯಹೂದಿಗಳು ಇವತ್ತಿಗೂ ಕೂಡ ಗೋಡೆಗೆ ದೂರದಿಂದಲೇ ನಮಸ್ಕರಿಸುತ್ತಾರೆ. ತಪ್ಪಿಯೂ ಗೋಡೆ ಆಚೆಗಿರುವ ಭೂಮಿಯ ಮೇಲೆ ಕಾಲಿಡುವುದಿಲ್ಲ. ಅಷ್ಟೊಂದು ಗಾಢವಾದ ಧಾರ್ಮಿಕ ನಂಬಿಕೆ ಯಹೂದ್ಯರಲ್ಲಿ ಇದೆ.
ಚಕ್ರವರ್ತಿ ಹ್ಯಾಡ್ರಿಯನ್ ಕಾಲದಲ್ಲಿ ಯಹೂದಿಗಳು ಜೆರುಸಲೇಮಿಗೆ ಬೇಕಾಗಿ ಮತ್ತೊಂದು ನಿರ್ಣಾಯಕ ಯುದ್ಧ ಮಾಡಿದರು. ಇದರಿಂದ ಕುಪಿತಗೊಂಡ ಹ್ಯಾಡ್ರಿಯನ್ ಆ ದೇಶಕ್ಕೆ ಇದ್ದ ಇಸ್ರೇಲ್ ಎಂಬ ಹೆಸರನ್ನೇ ಅಳಿಸಿಹಾಕಿ ಯಹೂದಿಗಳ ಪರಮ ವೈರಿಗಳಾದ ಸಿರಿಯನ್ನರು ಮತ್ತು ಪೆಲಿಸ್ತಿಯನ್ನರಿಗೆ ಅಲ್ಲಿ ಪರಮಾಧಿಕಾರವನ್ನು ಕೊಟ್ಟು ಆ ದೇಶದ ಹೆಸರನ್ನೇ ಸಿರಿಯ ಮತ್ತು ಪ್ಯಾಲೇಸ್ತೀನ್ ಎಂದು ಮರುನಾಮಕರಣ ಮಾಡಿದ. ಮತ್ತು ಜೆರುಸಲೇಮನ್ನು ಅದರ ರಾಜಧಾನಿಯನ್ನಾಗಿ ಘೋಷಣೆ ಮಾಡಿದ.
ಇಷ್ಟಕ್ಕೆ ಅವನ ಯಹೂದಿಗಳ ಮೇಲಿನ ದ್ವೇಷ ತಣ್ಣಗಾಗಲಿಲ್ಲ. ಅಲ್ಲಿದ್ದ ಒಂದೊಂದು ಯಹೂದಿ ಮಗುವನ್ನು ಕೂಡ ಎತ್ತಿ ಆಚೆಗೆ ಎಸೆಯುವವರೆಗೂ ಅವನ ಸೈನ್ಯ ವಿರಮಿಸಲಿಲ್ಲ. ಯಹೂದಿಗಳು ತಮ್ಮ ಮಾತೃಭೂಮಿಯನ್ನು ಬಿಟ್ಟು ಜಗತ್ತಿನ ಮೂಲೆ ಮೂಲೆಗೆ ಹಂಚಿ ಹರಡಿ ಹೋಗುವಂತಾಯಿತು. ಈ ಸಮಯದಲ್ಲಿ ಇಲ್ಲಿಗೆ ಬಂದವರು ಪ್ರವಾದಿ ಮಹಮ್ಮದ್ ಪೈಗಂಬರ್.

ಕುರಾನಿನ ಪ್ರಕಾರ ಕ್ರಿಸ್ತ ಶಕ 621 ರಲ್ಲಿ ಮೋಹಮ್ಮದ್ ಬುರಾಕ್ ಎಂಬ ಹಾರುವ ಕುದುರೆಯ ಮೇಲೆ ಕುಳಿತು ಮೆಕ್ಕಾದಿಂದ ಜೆರುಸಲೇಮಿಗೆ ಬಂದರಂತೆ. ಅಲ್ಲಿಂದ ಅವರು ಮತ್ತೆ ಅದೇ ಕುದುರೆಯ ಮೇಲೆ ಕುಳಿತು ಒಂದೇ ನೆಗೆತಕ್ಕೆ ನೇರವಾಗಿ ಸ್ವರ್ಗಕ್ಕೆ ಜಿಗಿದು ಅಲ್ಲಿ ದೇವರ ಜೊತೆ ಒಂದಷ್ಟು ಮಾತುಕತೆ ಮಾಡಿ ಮತ್ತೆ ಬಂದು ಜೆರೂಸಲೇಮಿನಲ್ಲಿ ಇಳಿದರು ಎನ್ನುವುದು ಮುಸಲ್ಮಾನರ ನಂಬಿಕೆ. ಗಮನಿಸಿ ಇದೆಲ್ಲಾ ಆಗಿರೋದು ಆರನೇ ಶತಮಾನದಲ್ಲಿ!

ಮೊದಲೇ ಅನೇಕ ಜನರ ರಕ್ತಪಾತ ದಿಂದ ಸಾಮಾಜಿಕ ಶಾಂತಿಯನ್ನು ಕದಡಿ ಹಾಕಿದ್ದ ಜೆರೂಸಲೇಮಿನ ವಿವಾದಗ್ರಸ್ತ ಭೂಮಿಯಲ್ಲಿ ಬಂದು ಮಹಮ್ಮದ್ ಪೈಗಂಬರ್ ಅವರು ಕುದುರೆ ಇಳಿಸಿದ್ದು, ಇನ್ನಷ್ಟು ವಿವಾದಕ್ಕೆ ಕಾರಣವಾಯಿತು. ಅವರ ಹಾರುವ ಕುದುರೆ ಒಂದೆರಡು ಕಿಲೋಮೀಟರ್ ಆಚೆಗೆ ಎಲ್ಲಾದರೂ ಇಳಿದಿದ್ದರೆ ಧರ್ಮ-ಧರ್ಮಗಳ ನಡುವಿನ ಬಡಿದಾಟ ರಕ್ತಪಾತ ಅಮಾಯಕ ಮಕ್ಕಳ ಕಗ್ಗೊಲೆಗಳು ತಪ್ಪುತ್ತಿದ್ದವು .

ಮುಸಲ್ಮಾನರು ಈ ಪ್ರದೇಶವನ್ನು ಹರ್ ಅಲ್ ಆಮ್ ಶರೀಫ್ ಎಂದು ಕರೆಯುತ್ತಾರೆ. ಕ್ರಿಸ್ತಶಕ 632 ರಲ್ಲಿ ಪೈಗಂಬರ್ ತೀರಿಕೊಂಡರು. ಇದಾದ ನಾಲ್ಕೇ ವರ್ಷದಲ್ಲಿ ಉಮೈಯತ್ ಖಲೀಫಾ ನೇತೃತ್ವದಲ್ಲಿ ಜೆರೂಸಲೇಮಿನ ಮೇಲೆ ದಾಳಿ ನಡೆಯಿತು. ಆಗ ಜೆರುಸಲೇಂ ಬೆಜೆಂಟಾಯಿನ್ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತ್ತು. ರೋಮನ್ ಕ್ರೈಸ್ತರ ಕೈಯಲ್ಲಿದ್ದ ಜೆರೂಸಲೇಮಿನ ಪವಿತ್ರ ಭೂಮಿ ಮುಸಲ್ಮಾನರ ವಶವಾಯಿತು. ಅಲ್ಲಿ ಅದಾಗಲೇ ಕ್ರೈಸ್ತರು ಒಂದು ಭವ್ಯವಾದ ಚರ್ಚ್ ಕಟ್ಟಿದ್ದರು. ಪುನರುತ್ಥಾನದ ದಿನ ಏಸು ಇಲ್ಲಿಂದಲೇ ಮತ್ತೆ ಎದ್ದು ಬರುತ್ತಾನೆ ಎಂಬ ಗಾಢ ನಂಬಿಕೆ ಕ್ರೈಸ್ತರದಾಗಿತ್ತು. ಜೆರುಸಲೇಮನ್ನು ಕೈವಶ ಮಾಡಿಕೊಂಡ ಖಲಿಫಾ ಅಲ್ಲೊಂದು ಮಸೀದಿ ಕಟ್ಟಿ ಅದಕ್ಕೆ ಅಲ್ ಅಕ್ಸ ಮಸೀದಿ ಎಂದು ಹೆಸರಿಟ್ಟ. ಯಾವ ಕಲ್ಲಿನ ಮೇಲಿಂದ ಪೈಗಂಬರ್ ಅವರ ಕುದುರೆ ಆಕಾಶಕ್ಕೆ ಉಡಾವಣೆ ಮಾಡಿತ್ತೋ ಆ ಕಲ್ಲು ಇದ್ದ ಜಾಗದಲ್ಲಿ ಡೊಮ್ ಆಫ್ ದಿ ರಾಕ್ ಎಂಬ ಮತ್ತೊಂದು ಮಸೀದಿ ಕಟ್ಟಿ ಅದರ ಗೋಪುರಕ್ಕೆ ಚಿನ್ನದ ತಗಡು ಮುಚ್ಚಿಸಿದರು.

ಒಂದು ವಾದದ ಪ್ರಕಾರ ಇಸ್ರೇಲಿಗರ ಮೊದಲ ದೇವಾಲಯ ಇದ್ದ ಜಾಗದಲ್ಲೇ ಉದ್ದೇಶಪೂರ್ವಕವಾಗಿ ಮುಸಲ್ಮಾನರು ಈ ಮಸೀದಿಯನ್ನು ಕಟ್ಟಿದ್ದಾರೆ ಎಂದು ಮಧ್ಯಪ್ರಾಚ್ಯದ ಇತಿಹಾಸಕಾರರು ಹೇಳುತ್ತಾರೆ

ಇತ್ತ ಕ್ರೈಸ್ತರು ಜೆರುಸಲೇಮನ್ನು ಕಳೆದುಕೊಂಡರು. ಕೈಯಲ್ಲಿ ಕತ್ತಿಯನ್ನು ಝಳಪಿಸುತ್ತಾ ಮೆದುಳಿನೊಳಗೆ ಮತಾಂಧತೆಯನ್ನು ತುಂಬಿಕೊಂಡು ದೀನ್ ದೀನ್ ಎಂದು ವಿಕಾರ ಸದ್ದು ಮಾಡುತ್ತಾ ನಾಲ್ಕು ದಿಕ್ಕಿಗೆ ಇಸ್ಲಾಮಿನ ಕತ್ತಿ ಕುದುರೆಗಳನ್ನು ಕೊಂಡು ಹೋದ ಖಲಿಫಾಗಳ ಮುಂದೆ ಕ್ರೈಸ್ತರು ಪತರುಗುಟ್ಟಿದ್ದರು. ಇನ್ನೂ ಶತ್ರುಗಳನ್ನು ಪ್ರೀತಿಸಿ ಎನ್ನುತ್ತಾ ಬ್ರೆಡ್ಡನ್ನು ಹಂಚಿದರೆ ನಮ್ಮ ಮತಕ್ಕೆ ಉಳಿಗಾಲ ಇಲ್ಲ ಎಂದರಿತು, ಹತ್ತಾರು ರಾಜ್ಯಗಳಲ್ಲಿ ಹಂಚಿಹೋಗಿದ್ದ ಕ್ರೈಸ್ತರನ್ನು ಒಂದು ಮಾಡಿ ಇಸ್ಲಾಮಿನ ದಾಳಿಯ ವಿರುದ್ಧ ಸಂಘಟಿತ ಹೋರಾಟಕ್ಕೆ ಕ್ರೈಸ್ತರ ಪರಮೋಚ್ಚ ಗುರುಗಳು ಕರೆ ನೀಡಿದರು. ಆ ಪವಿತ್ರ ಯುದ್ಧಕ್ಕೆ ಅವರು ಇಟ್ಟ ಹೆಸರು ಕ್ರುಸೇಡ್.
ಜುಲೈ 1099ರಲ್ಲಿ ಕ್ರೈಸ್ತರು ಭಾರಿ ಯುದ್ಧಮಾಡಿ ಮುಸಲ್ಮಾನರಿಂದ ಜೆರುಸಲೇಮನ್ನು ಮರು ವಶಪಡಿಸಿಕೊಂಡು ಗೆಲುವಿನ ನಗೆ ಬೀರಿದರು.

ಆದರೆ ಕರ್ಮಟ ಅರಬ್ಬರು ತಮ್ಮ ಮೂರನೇ ಅತಿ ಪವಿತ್ರ ಕ್ಷೇತ್ರವನ್ನು ಅಷ್ಟು ಸುಲಭದಲ್ಲಿ ಬಿಟ್ಟುಕೊಟ್ಟಾರೆ? ಜೆರುಸಲೆಮ್ ನಲ್ಲಿ ಕ್ರೈಸ್ತರ ಆಡಳಿತ ದುರ್ಬಲವಾಗುವವರೆಗೆ ಕಾದು 88 ವರ್ಷದ ಬಳಿಕ 1187ರಲ್ಲಿ ಮುಸಲ್ಮಾನರು ಜೆರುಸಲೇಮನ್ನು ಭಾರಿ ರಕ್ತಪಾತ ನಡೆಸಿ ಮರಳಿ ಗೆದ್ದರು. ಆವತ್ತೇ ಇಲ್ಲಿನ ಮಸೀದಿಗಳ ಮೇಲ್ವಿಚಾರಣಾ ನೋಡಲು ವಕ್ಫ್ ಸಮಿತಿ ನೇಮಕವಾಯಿತು. ಜೆರೂಸಲೇಮಿನ ಪವಿತ್ರ ಭೂಮಿಗೆ ಮುಸಲ್ಮಾನೇತರರಿಗೆ ಪ್ರವೇಶ ನಿರ್ಬಂಧಿಸಿದ್ದರು.
ಆದರೆ ಏಳು ಕಡಲಿನ ಆಚೆ ಹರಿದು ಹಂಚಿಹೋಗಿದ್ದ ಯಹೂದಿಗಳು ಮಾತ್ರ ನನ್ನ ಮುಂದಿನ ವರ್ಷದ ಸಬ್ಬತ್ ಆಚರಣೆಯನ್ನು ಜೆರೂಸಲೇಮಿನ ಪವಿತ್ರ ಗೋಡೆಯ ಮುಂದೆ ಮಾಡುತ್ತೇನೆ ಎಂಬ ಸಂಕಲ್ಪವನ್ನು ತಮ್ಮ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತಲೇ ಬಂದಿದ್ದರು.

ಒಮ್ಮೆ ಗುರೂಜಿ ಅವರಲ್ಲಿ ಯಾರೊ ಒಬ್ಬರು ಪಾಕಿಸ್ತಾನ ಮರಳಿ ಭಾರತಕ್ಕೆ ಸೇರಬಹುದೇ ಎಂದು ಕೇಳಿದಾಗ ಯಾವತ್ತಿನ ವರೆಗೆ ನಮ್ಮ ಸಪ್ತ ಮೋಕ್ಷದಾಯಕ ತೀರ್ಥಗಳ ಸಂಕಲ್ಪದಲ್ಲಿ ಸಿಂಧುವಿನ ಸ್ಮರಣೆ ಇರುತ್ತದೆಯೊ ಆವತ್ತಿನವರೆಗೆ ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದರು.

ನಮ್ಮ ಪೂರ್ವಜರ ನೆಲವಾಗಿರುವ ಇಸ್ರೇಲನ್ನು ಮರಳಿ ಪಡೆಯಬೇಕು ಜರೂಸಲಮ್ ಮೇಲೆ ನಮ್ಮ ಪವಿತ್ರ ಕ್ಷೇತ್ರ ಮತ್ತೆ ನಿರ್ಮಾಣವಾಗಬೇಕು ಎಂಬ ಯಹೂದಿಗಳ ಕನಸು ನಿತ್ಯತೆಯ ಗರ್ಭದಲ್ಲಿ ಬ್ರೂಣವಾಗಿ ಬಲಿಯ ತೊಡಗಿತು. ಭಾರತ ಒಂದನ್ನು ಹೊರತುಪಡಿಸಿ ಬೇರೆ ಎಲ್ಲಾ ದೇಶಗಳಲ್ಲಿ ಚಿತ್ರಹಿಂಸೆ,ಅವಮಾನ ಕಗ್ಗೊಲೆ ಅತ್ಯಾಚಾರ ಲೂಟಿ ಜನಾಂಗಿಯ ಅಸ್ಪೃಶ್ಯತೆಯನ್ನು ಅನುಭವಿಸಿ ಕೊನೆಗೊಮ್ಮೆ ಹಿಟ್ಲರನ ವಿಷಾನಿಲದ ಚೇಂಬರಿನೊಳಗೆ ಹೊಕ್ಕು 60ಲಕ್ಷ ತನ್ನವರ ಹೆಣವನ್ನು ದಾಟಿ ಯಹೂದಿ ಜೀವಂತವಾಗಿ ಹೊರಬಂದ. ಹಾಗೆ ಬಂದವನೇ ಗಟ್ಟಿಯಾಗಿ ಬೇರು ಬಿಟ್ಟಿದ್ದು ತನ್ನ ತನ್ನ ಪೂರ್ವಜರ ತ್ಯಾಗ ಬಲಿದಾನಗಳಿಗೆ ಸಾಕ್ಷಿಯಾದ ಇಸ್ರೇಲಿನ ನೆಲದಲ್ಲಿ.

19ನೇ ಶತಮಾನದ ಆರಂಭದಲ್ಲಿ ಜಗತ್ತಿನ ವಿವಿಧ ಮೂಲೆಗಳಲ್ಲಿದ್ದ ಯಹೂದಿಗಳು ತಮ್ಮದೇ ಆದ ದೇಶ ನಿರ್ಮಿಸುವ ಉದ್ದೇಶದಿಂದ ತಮ್ಮ ಮಾತೃಭೂಮಿಗೆ ಮರಳ ತೊಡಗಿದರು. ಪ್ಯಾಲಿಸ್ತಿನ್ ಎಂದು ಕರೆಯಲ್ಪಡುತ್ತಾ ಅರಬ್ಬರ ಕಪಿಮುಷ್ಟಿಯಲ್ಲಿದ್ದ ತಮ್ಮ ಪೂರ್ವಜರ ನೆಲಕ್ಕೆ ಬಂದು ಅಲ್ಲಿ ಸ್ಥಳವನ್ನು ಖರೀದಿ ಮಾಡಿ ಕಾನೂನುಬದ್ಧವಾಗಿ ವಾಸ ಮಾಡತೊಡಗಿದರು. ಎರಡನೇ ವಿಶ್ವ ಯುದ್ಧದಲ್ಲಿ ಟರ್ಕಿಯನ್ನು ಬಗ್ಗುಬಡಿದ ಬ್ರಿಟಿಷರು ಅದರ ವಶದಲ್ಲಿದ್ದ ಪ್ಯಾಲೇಸ್ತೀನಿ ಭೂಮಿಯನ್ನು ಎರಡು ವಿಭಾಗಗಳಾಗಿ ಹಂಚಿದರು. ಅರಬರಿಗೆ ಫೆಲೆಸ್ತೀನ್ ಮತ್ತು ಜಗತ್ತಿನ ಬೇರೆಬೇರೆ ದೇಶಗಳಲ್ಲಿ ನಿರಾಶ್ರಿತರಾಗಿ ಹುಟ್ಟೂರಿಗೆ ಮರಳಿದ ಯಹೂದಿಗಳಿಗೆ ಇಸ್ರೇಲ್. ಇದು ಆಗಿದ್ದು 1948ರಲ್ಲಿ.

ಮುಸಲ್ಮಾನರ ಪ್ರಬಲ ವಿರೋಧದ ನಡುವೆಯೂ ಇಸ್ರೇಲ್ ಅವರ ಎದೆಯ ಮೇಲೆ ತಲೆಯೆತ್ತಿ ನಿಂತಿತು. 4 ಸುತ್ತಲಿನಿಂದ ಮುಸಲ್ಮಾನ ದೇಶಗಳು ಮಧ್ಯದಲ್ಲಿ ಒಂದು ಇಸ್ರೇಲ್ ಎಂಬ ಯಹೂದಿ ದೇಶ. ಈ ಅನಿರೀಕ್ಷಿತ ಬೆಳವಣಿಗೆಯಿಂದ ದಿಕ್ಕೆಟ್ಟ ಶೇಕುಗಳು ಮೇಕೆ ಗಡ್ಡ ನೇವರಿಸುತ್ತಾ ಕೈಕೈ ಹಿಸುಕಿಕೊಂಡರು

ಸಂಯುಕ್ತ ರಾಷ್ಟ್ರ ಮಂಡಳಿಯ ಮುಂದೆ ಇಸ್ರೇಲಿಗರು ತಮಗೆ ರಾಜಧಾನಿಯಾಗಿ ಜೆರುಸಲೇಮನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಯಹೂದಿಗಳಿಗೆ ನೆಲೆ ಒದಗಿಸಿಕೊಟ್ಟ ಬಗ್ಗೆ ಅಪಾರ ಸಿಟ್ಟು ಹೊಂದಿದ್ದ ಅರಬ್ಬರು ಜೆರುಸಲೇಮನ್ನು ಕೂಡ ಕಳೆದುಕೊಂಡರೆ ಇನ್ನಷ್ಟು ಕುಪಿತರಾಗುತ್ತಾರೆ ಎಂದರಿತ ಬ್ರಿಟಿಷರು ಅದನ್ನು ಇಸ್ರೇಲಿಗೂ ನೀಡಲಿಲ್ಲ ಅರಬ್ಬರ ಪ್ಯಾಲೆಸ್ತೇನಿಗೂ ನೀಡಲಿಲ್ಲ. ಅದನ್ನು ಸಂಯುಕ್ತ ರಾಷ್ಟ್ರ ಮಂಡಳಿಯ ವಶಕ್ಕೆ ಒಪ್ಪಿಸಿದರು.

ಇದಾದ ಸ್ವಲ್ಪ ಸಮಯಗಳ ಕಾಲ ಜೆರೂಸಲೇಮಿನಲ್ಲಿ ಶಾಂತಿ ಇತ್ತು. ಆದರೆ ಪ್ಯಾಲೇಸ್ತೀನಿ ತುರ್ಕರ ತುರಿಕೆ ಅವರನ್ನು ಸುಮ್ಮನೆ ಕೂರಲು ಬಿಡಲಿಲ್ಲ
67ರಲ್ಲಿ ಜೆರುಸಲೇಮನ್ನು ವಶಪಡಿಸಲು ಪ್ಯಾಲೆಸ್ಟೈನ್ ಅರಬ್ ದೇಶಗಳ ಬೆಂಬಲದೊಂದಿಗೆ ಮುನ್ನುಗ್ಗಿತು. ಇದರ ಬಗ್ಗೆ ಮೊದಲೇ ಗುಪ್ತಚರ ಮಾಹಿತಿ ಹೊಂದಿದ್ದ ಇಸ್ರೇಲ್. ಜಾಗತಿಕ ಯುದ್ಧ ಇತಿಹಾಸದಲ್ಲೇ ಅತ್ಯಂತ ವ್ಯೂಹಾತ್ಮಕ ಯುದ್ಧ ಎಂದು ಕರೆಯಲ್ಪಡುವ ಆರು ದಿನದ ಸಮರಕ್ಕೆ ಮುನ್ನುಡಿ ಬರೆಯಿತು. ಒಂಟಿ ದೇಶ ಎಂದು ಬಗೆದು ಹಿಂಡುಹಿಂಡಾಗಿ ಮುತ್ತಿದ ಅರಬ್ಬರು ಇಸ್ರೇಲಿಗಳ ಮಾರಣಾಂತಿಕ ಹೊಡೆತಕ್ಕೆ ಅಂಡು ಸುಟ್ಟ ನಾಯಿಯಂತೆ ಮೂಲೆ ಸೇರಿದರು . ಅಲ್ಲಿಯವರೆಗೂ ಮಾನವೀಯತೆ ಕಾನೂನು ಎಂದು ಜೆರುಸಲೇಮನ್ನು ವಶಪಡಿಸದೇ ಬಿಟ್ಟಿದ್ದ ಯಹೂದಿಗಳು ಜೆರುಸಲೇಮನ್ನು ತಮ್ಮ ವಶಕ್ಕೆ ಪಡೆದುಕೊಂಡು ಬಿಟ್ಟರು. ಕಾಲು ಕೆರೆದು ಜಗಳಕ್ಕೆ ಹೋಗಿ ಮುಖಮೂತಿ ನೋಡದೆ ಏಟು ತಿಂದ ಅರಬ್ಬರು ಇಸ್ರೇಲಿಗೆ ಶರಣಾಗಿ ಮಾತುಕತೆಯ ಮೇಜಿನ ಮೇಲೆ ಕೂತರು. ಅಲ್ಲಿಯವರೆಗೂ ಟೆಂಪಲ್ ಆಫ್ ಮೌಂಟ್ ಮೇಲೆ ವಕ್ಫ್ ಹಿಡಿತವಿತ್ತು. ಇಸ್ರೇಲ್ ಉದಾರತೆಯನ್ನು ತೋರಿ ಇದರಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಇಸ್ರೇಲ್ ಮುಸಲ್ಮಾನರ ಜೊತೆ ಒಂದು ಸೌಹಾರ್ದಯುತವಾದ ಒಪ್ಪಂದವನ್ನು ಮಾಡಿಕೊಂಡಿತು. ಟೆಂಪಲ್ ಮೌಂಟ್ ಜವಾಬ್ದಾರಿಯನ್ನು ಜಾರ್ಡನ್ ದೇಶಕ್ಕೆ ನೀಡುವುದು. ಮತ್ತು ಯಹೂದಿಗಳಿಗೆ ಅಲ್ಲಿ ಪ್ರಾರ್ಥನೆಗೆ ಅವಕಾಶ ಒದಗಿಸುವುದು ಈ ಒಪ್ಪಂದದ ಮುಖ್ಯ ಅಂಶವಾಗಿತ್ತು.

ಆದರೆ ಈ ಒಪ್ಪಂದದ ಬಗ್ಗೆ ಕಟ್ಟರ್ ಮುಸಲ್ಮಾನರು ಮತ್ತು ಕಟ್ಟರ್ ಯಹೂದಿಗಳಿಗೆ ಸಮಾಧಾನವಿರಲಿಲ್ಲ ಕಟ್ಟರ್ ಮುಸಲ್ಮಾನರು ಅಲ್ ಅಕ್ಸಾ ಮಸೀದಿ ಆವರಣಕ್ಕೆ ಮುಸಲ್ಮಾನೇತರರು ಕಾಲು ಇಡುವುದನ್ನು ಯಾವ ಕಾರಣಕ್ಕೂ ಸಹಿಸುತ್ತಿರಲಿಲ್ಲ. ಇತ್ತ ಒಪ್ಪಂದದಲ್ಲಿ ಯಹೂದಿಗಳಿಗೆ ಕೇವಲ ಪ್ರವಾಸಿಗರಾಗಿ ಬಂದು ಹೋಗಲು ಮಾತ್ರ ಅನುಮತಿ ಇತ್ತು ಪೂಜೆ ಮಾಡುವ ಹಕ್ಕು ಇರಲಿಲ್ಲ. ಇದು ಯಹೂದಿ ಕಟ್ಟರ್ ವಾದಿಗಳನ್ನು ಕೆರಳಿಸಿತು. ಜೆರುಸಲೇಮನ್ನು ತಮ್ಮ ಬಾಹುಬಲದಿಂದ ಗೆದ್ದ ಮೇಲೆ ಅದನ್ನು ಪೂರ್ಣವಾಗಿಇಸ್ರೇಲ್ ವಶಕ್ಕೆ ಪಡೆದುಕೊಳ್ಳದೆ ಮುಸಲ್ಮಾನರ ಜೊತೆ ಒಪ್ಪಂದ ಮಾಡಿದ್ದಾದರೂ ಯಾಕೆ ಎನ್ನುವುದು ಅವರ ಪ್ರಶ್ನೆಯಾಗಿತ್ತು.

ಅಂದಿನಿಂದ ಇಂದಿನವರೆಗೂ ಜೆರುಸಲೆಂ ಯಾವುದೇ ಕ್ಷಣದಲ್ಲಿ ಸಿಡಿಯಬಲ್ಲ ಜ್ವಾಲಾಮುಖಿಯ ಪರ್ವತವಾಗಿ ಉಳಿದಿದೆ. ಆಗೊಮ್ಮೆ-ಈಗೊಮ್ಮೆ ಮತಾಂಧತೆಯ ಲಾವಾ ರಸವನ್ನು ಕಾರಿ ಇದು ಒಂದಷ್ಟು ಜನರ ಬಲಿ ಪಡೆದುಕೊಳ್ಳುತ್ತಲೇ ಇದೆ

1982ರಲ್ಲಿ ಅಲೆನ್ ಗುಡ್ಮನ್ ಎಂಬ ಯಹೂದಿ ಸೈನಿಕ ಡೋಮ್ ಆಫ್ ರಾಕ್ ಮಸೀದಿಯ ಒಳಗೆ ನುಗ್ಗಿ ಗುಂಡು ಹಾರಿಸಿ ಕೆಲವರನ್ನು ಕೊಂದುಹಾಕಿದ. ಇದಕ್ಕೆ ಮಸೀದಿ ಒಳಗಿಂದ ಯಹೂದಿಗಳು ಪ್ರಾರ್ಥನೆ ಮಾಡುವ ಸ್ಥಳಕ್ಕೆ ಕಲ್ಲು ಹೊಡೆದಿದ್ದು ಕಾರಣವಾಗಿತ್ತು. ಇಸ್ಲಾಮಿಕ್ ಮತಾಂಧರಿಗೆ ಕಲ್ಲು ಹೊಡೆಯುವ ಚಟ ಕಾಶ್ಮೀರದಲ್ಲಿ ಮಾತ್ರ ಇರುವುದು ಎಂದು ಭಾವಿಸಬೇಡಿ. ಜೆರೂಸಲೇಮಿನ ಆವರಣದಲ್ಲಿಯೂ ಇವರ ಕಲ್ಲುಗಳು ಆಗೊಮ್ಮೆ-ಈಗೊಮ್ಮೆ ತಟಪಟನೆ ಬಂದು ಬೀಳುತ್ತವೆ.

ಆದರೆ ಯಹೂದಿಗಳು ಮಾತ್ರ ಕಲ್ಲು ಹೊಡೆಸಿಕೊಂಡು ಸುಮ್ಮನೆ ಕೂರುವುದಿಲ್ಲ. ಕಲ್ಲಿಗೆ ಗುಂಡಿನ ಮೂಲಕ ಉತ್ತರ ನೀಡುವುದು ಇಸ್ರೇಲಿಗರ ಜಾಯಮಾನ.

2000ನೇ ಇಸವಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅರಬ್ಬರು ಜೆರುಸಲೆಮ್ ಗಾಗಿ ಲಾಬಿ ಮಾಡಲು ಮುಂದಾದಾಗ ಇಸ್ರೇಲ್ ತನ್ನ ಮಾಜಿ ಪ್ರಧಾನಿ ಯನ್ನು ಅಲ್ಲಿಗೆ ಕಳುಹಿಸಿ ತನ್ನ ಹಕ್ಕನ್ನು ಪ್ರತಿಪಾದಿಸಿತ್ತು.

2014 ರಲ್ಲಿ ಜೆರುಸೆಲೆಂ ಯಹೂದಿಗಳ ಪುಣ್ಯಭೂಮಿ ಎಂದು ಹೇಳಿಕೆ ಕೊಟ್ಟ ಯಹೂದಿ ಮುಖಂಡನೊಬ್ಬ ನನ್ನು ಪ್ಯಾಲೇಸ್ತೀನಿ ಉಗ್ರರು ಕೊಲ್ಲಲು ವಿಫಲ ಯತ್ನ ನಡೆಸಿದರು. ಇದು ಸಾಕಷ್ಟು ದೊಂಬಿ ಗಲಾಟೆಗೆ ಕಾರಣವಾಯಿತು . ಈ ಘಟನೆಯ ಬಳಿಕ ಮುಸಲ್ಮಾನರನ್ನು ಟೆಂಪಲ್ ಮೌಂಟಿ ನಿಂದ ದೂರ ಇಡಲಾಯಿತು.

ಇದಿಷ್ಟು ಹಳೆಯ ಕಥೆ ಸದ್ಯ ಜೆರುಸಲೆಮ್ ನಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ಸ್ವಲ್ಪ ತಿಳಿಯೋಣ

ಜೆರೂಸಲೇಮಿನ ಪೂರ್ವಭಾಗದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಇಲ್ಲಿ ಶೇಕ್ ಜರ್ರಾ ಎಂಬ ಪ್ರದೇಶವಿದೆ. ಇಲ್ಲಿ ಯಹೂದಿಗಳ ಟ್ರಸ್ಟ್ ಒಂದರ ಮಾಲೀಕತ್ವದಲ್ಲಿರುವ ಆರು ಮನೆಗಳಲ್ಲಿ ಪ್ಯಾಲೇಸ್ತೀನಿ ಮುಸಲ್ಮಾನ ಕುಟುಂಬಗಳು ವಾಸವಿದ್ದವು. ಇವರನ್ನು ಮನೆ ಬಿಟ್ಟು ಕೊಡುವಂತೆ ಯಹೂದಿ ಟ್ರಸ್ಟ್ ಕೇಳಿಕೊಂಡಾಗ ಇವರು ಬಿಟ್ಟುಕೊಡಲಿಲ್ಲ. ಬದಲಾಗಿ ಮುಸಲ್ಮಾನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಮ್ಮನ್ನು ಇಲ್ಲಿಂದ ಜನಾಂಗೀಯವಾಗಿ ನಿರ್ಣಾಮ ಮಾಡಲು ಸಂಚು ರೂಪಿಸಿದ್ದಾರೆ ಎಂದು ಮಾನವ ಹಕ್ಕು ದಮನದ ಕಥೆಕಟ್ಟಿ ಅಂತರಾಷ್ಟ್ರೀಯ ಇಸ್ಲಾಮಿಕ್ ವಲಯವನ್ನು ಸೆಳೆಯುವ ಕೆಲಸ ಮಾಡಿದರು.ಈ ಆರು ಕುಟುಂಬಗಳಿಗೆ ಪ್ಯಾಲೇಸ್ತೀನ್ ಬೆಂಬಲವನ್ನು ಕೊಟ್ಟು ಮನೆ ಖಾಲಿ ಮಾಡಬೇಡಿ ಏನಾಗುತ್ತದೆ ನೋಡೋಣ ಎಂದಿತು. ಯಹೂದಿಗಳ ಟ್ರಸ್ಟ್ ನ್ಯಾಯಾಲಯದ ಮೊರೆ ಹೋಯಿತು. ಅಲ್ಲಿ ಯಹೂದಿಗಳಿಗೆ ಜಯ ಸಿಕ್ಕಿತ್ತು. ಆದರೆ ಈ ಮೊಂಡು ಮತಾಂಧ ಪ್ಯಾಲೇಸ್ತೀನಿಯರು ಮನೆ ಖಾಲಿ ಮಾಡುವ ಬದಲು ದೊಂಬಿ ಗಲಾಟೆಗಳನ್ನು ಎಬ್ಬಿಸಿದರು. ಶೇಕ್ ಜರಾ ಬೀದಿಯಲ್ಲಿ ಅಕ್ರಮ ಕೂಟ ಸೇರಿಕೊಂಡು ನಮಾಜ್ ಮಾಡುವುದು, ರಸ್ತೆಯಲ್ಲಿ ಇಫ್ತಾರ್ ಆಚರಿಸಿ ಇಸ್ರೇಲ್ ವಿರುದ್ಧ ಘೋಷಣೆ ಕೂಗುವುದು ಇಸ್ರೇಲಿ ಫೋರ್ಸ್ ಗಳ ಮೇಲೆ ಕಲ್ಲು ತೂರಾಟ ಮಾಡುವುದು ಮೊದಲಾದ ಹುಚ್ಚಾಟಕ್ಕೆ ಇಳಿದರು. ಈ ರೀತಿಯ ಹುಚ್ಚಾಟಗಳಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ಕೊಟ್ಟು ಅನುಭವ ಇದ್ದ ಇಸ್ರೇಲ್ ಫೋರ್ಸ್ ಇವರ ವರ್ತನೆಗಳು ಇನ್ನೂ ಸ್ವಲ್ಪ ಅತಿರೇಕಕ್ಕೆ ಹೋಗಲಿ ಎಂದು ಕಾಯುತ್ತಿದ್ದರು.

ಮೊನ್ನೆ ಮೇ 10ರಂದು ಇಸ್ರೇಲಿಗರು ಜೆರುಸಲೆಮ್ ಡೇ ಆಚರಿಸಲು ಜೆರುಸಲೇಮಿಗೆ ಬಂದಿದ್ದ ಸಮಯದಲ್ಲಿ ಅನಿರೀಕ್ಷಿತವಾಗಿ ಮಸೀದಿಯ ಒಳಭಾಗದಿಂದ ಬಾರಿ ಕಲ್ಲುತೂರಾಟ ನಡೆಯಿತು. ಕೂಡಲೇ ಕಾರ್ಯಾಚರಣೆಗೆ ಇಳಿದ ಇಸ್ರೇಲಿ ಫೋರ್ಸ್ ಮಸೀದಿಯ ಒಳನುಗ್ಗಿ ಕಿಡಿಗೇಡಿಗಳ ನಡು ಮುರಿಯುವಂತೆ ಬಾರಿಸಿ, ದರದರನೆ ಹೊರಗೆಳೆದು ಮತ್ತೆ ಯಾವತ್ತೂ ಕಲ್ಲು ಮುಟ್ಟದಂತೆ ಗಂಟು ಗಂಟನ್ನು ಗುದ್ದಿದ್ದಾರೆ.
ಮುಸ್ಲಿಂ ಗೂಂಡಾಗಳ ಕಲ್ಲೇಟಿಗೆ 9 ಜನ ಯಹೂದಿಗಳಿಗೆ ಪೆಟ್ಟಾಗಿದ್ದರೆ, ಸುಮಾರು 300 ರಷ್ಟು ಪ್ಯಾಲಿಸ್ತೀನಿ ಗೂಂಡಾಗಳನ್ನು ಇಸ್ರೇಲಿ ಪೊಲೀಸ್ ಫೋರ್ಸ್ ಆಸ್ಪತ್ರೆಯ ಬೆಡ್ಡಲ್ಲಿ ಮಲಗಿಸಿ ಬಂದಿದೆ.

ಈ ಹಿಂಸಾಚಾರದ ಬೆನ್ನಿಗೆ ಪ್ಯಾಲೆಸ್ತೀನ್ ಇಸ್ರೇಲ್ ವಿರುದ್ಧ ಹೋರಾಟಕ್ಕೆ ಕರೆ ನೀಡಿತು. ಮೇ ಹತ್ತರ ರಾತ್ರಿ ಇಸ್ರೇಲಿಗೆ ಮಗ್ಗುಲ ಮುಳ್ಳಾಗಿರುವ ಗಾಜಾಪಟ್ಟಿಯ ಹಮಾಸ್ ಉಗ್ರರು ಸುಮಾರು 150 ರಾಕೆಟುಗಳನ್ನು ಇಸ್ರೇಲ್ ಮೇಲೆ ಸಿಡಿಸಿದರು. ಅಲ್ಲಿಗೆ ಅಧಿಕೃತ ಯುದ್ಧ ಘೋಷಣೆಯಾಯಿತು.
ಹಮಾಸ್ ಉಗ್ರರ ಎದೆ ಸೀಳಲು ಹೊರಟುನಿಂತ ಇಸ್ರೇಲಿ ಪಡೆ ತನ್ನ ಈ ಕಾರ್ಯಾಚರಣೆಗೆ ಕೊಟ್ಟ ಹೆಸರು “ಆಪರೇಷನ್ ಗಾರ್ಡಿಯನ್ ಆಫ್ ದಿ ವಾಲ್”
ಮೇ 11ರ ಬೆಳಿಗ್ಗೆ ಇಸ್ರೇಲಿನ ಯುದ್ಧ ವಿಮಾನಗಳು ಗಾಜಾಪಟ್ಟಿಯ ಮೇಲೆ ದಾಳಿ ಸಾರಿದವು. ಒಟ್ಟು 130 ಏರ್ ಸ್ಟ್ರೈಕ್ ನಡೆದಿದೆ. ಇನ್ನೂ ಒಂದೆರಡು ದಿನ ಯುದ್ಧ ಮುಂದುವರೆದರೆ ಇಡಿಯ ಗಾಜಾ ಪಟ್ಟಿ ಹರಿದುಹೋದ ಹಜಾಮನ ಪೈಜಾಮದ ಹಾಗೆ ಜರಡಿಯೆದ್ದು ಹೋಗಲಿದೆ. ನಮ್ಮ ದೇಶವೂ ಸೇರಿದಂತೆ ಅನೇಕ ಕಡೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಗುರಾಣಿಯಂತೆ ಬಳಸಿ ಎದುರಾಳಿಯ ಮೇಲೆ ದಾಳಿಮಾಡುವ ಉಗ್ರರ ನಪಂಸಕ ಪ್ರವೃತ್ತಿ, ಹಮಾಸ್ ಜಿಹಾದಿಗಳಿಗೂ ಇದೆ. ಆದರೆ ಇಸ್ರೇಲ್ ಇದನ್ನೆಲ್ಲ ಕೇರ್ ಮಾಡಲ್ಲ. ಉಗ್ರ ಯಾರ ಹಿಂದೆ ಅವಿತಿದ್ದಾನೆ ಎನ್ನುವುದು ನಂತರದ ವಿಚಾರ. ಉಗ್ರಗಾಮಿಯ ಬುಡ ಬೀಜವೂ ಉಳಿಯದಂತೆ ಹೊಸಕಿ ಹಾಕಬೇಕೆನ್ನುವುದೇ ಅವರ ಮೊದಲ ಆದ್ಯತೆ. ಅದರಲ್ಲಿ ಅಮಾಯಕರು ಸತ್ತರೆ, ಉಗ್ರರ ಜೊತೆ ನಿಲ್ಲುವ ಮೊದಲು ಅಮಾಯಕರು ಯೋಚಿಸಬೇಕಿತ್ತು ಎನ್ನುತ್ತದೆ ಇಸ್ರೇಲ್.
ಹಮಾಸ್ ಉಗ್ರರಿಗೆ ಈ ಬಾರಿ ಹಬ್ಬ ಆಚರಿಸಲು ಸುಡುಮದ್ದಿನ ಕೊಡುಗೆಯನ್ನು ಇಸ್ರೇಲ್ ದಯಪಾಲಿಸಿದೆ. ಈ ಸಿಡಿಯುವ ಕ್ಷಿಪಣಿಯ ಕಣ್ಣು ಕೋರೈಸುವ ಬೆಳಕಿನಲ್ಲಾದರೂ ಉಗ್ರವಾದಿಗಳಿಗೆ ಜ್ಞಾನೋದಯವಾಗುತ್ತದೆಯೋ ಕಾದುನೋಡಬೇಕು.

ಮಹಿಳೆಯರನ್ನು ಮಕ್ಕಳನ್ನು ಸೇನೆಯ ಮುಂದೆ ಬಿಟ್ಟು ಅವರ ಮುಕುಳಿ ಹಿಂದೆ ಅವಿತುಕೊಳ್ಳುವ ಪ್ಯಾಲೇಸ್ತೀನಿ ಉಗ್ರರಿಗೆ ನೈತಿಕ ಬೆಂಬಲ ನೀಡುವ ಅನೇಕ ಅಂತರಾಷ್ಟ್ರೀಯ ಸಂಘಟನೆಗಳಿವೆ. ಪ್ಯಾಲೇಸ್ತೀನಿ ಮಕ್ಕಳ ಕೈಗೆ ಬಾವುಟ ಕೊಟ್ಟು ಇಸ್ರೇಲಿ ಸೈನಿಕರ ಮುಂದೆ ಬೀಸಲು ಹೇಳಿ ಅದರ ಫೋಟೋ ತೆಗೆಯುವುದು, ಬುರ್ಖಾಧಾರಿ ಮಹಿಳೆಯೊಬ್ಬಳು ಮುಖ ಕಿವುಚಿಕೊಂಡು ಘೋಷಣೆ ಕೂಗುವ ಚಿತ್ರವನ್ನು ವೈರಲ್ ಮಾಡುವುದು, ಶೆಲ್ಲುಗಳು ಸಿಡಿಯುವ ಯುದ್ಧಭೂಮಿಯಲ್ಲಿ ಮಗುವನ್ನು ನಿಲ್ಲಿಸಿ ಅದು ಅಳುವ ಚಿತ್ರವನ್ನು ಪತ್ರಿಕೆಗಳಲ್ಲಿ ಮುದ್ರಿಸುವುದು, ಮುರುಕಲು ಮನೆಯೊಳಗಡೆ ಮುಸ್ಲಿಮ ವೃದ್ಧರನ್ನು ಕೂರಿಸಿ ಫೋಟೋ ಹೊಡೆಯುವುದು,ಹೀಗೆ ನಾನಾ ರೀತಿಯಲ್ಲಿ ಇಸ್ರೇಲ್ ವಿರುದ್ಧ narrative ಹುಟ್ಟಿಸಿ ಬಿಡುವ ಕೆಲಸ ನಡೆಯುತ್ತಿದೆ.ಪ್ಯಾಲೆಸ್ತೇನಿನಲ್ಲಿರುವ ಕೆಲ ಕ್ರೈಸ್ತ ಸಂಘಟನೆಗಳು ಕೂಡ ಇಸ್ರೇಲ್ ವಿರುದ್ಧ ಕಾರ್ಯಾಚರಿಸುತ್ತಿವೆ. ಇಸ್ರೇಲಿಗರ ಅಸ್ತಿತ್ವದ ಹೋರಾಟವನ್ನು ಮರೆಮಾಚಿ ಅವರನ್ನು ರಾಕ್ಷಸರಂತೆ ಬಿಂಬಿಸಿ ಪ್ಯಾಲೇಸ್ತೀನಿ ಭಯೋತ್ಪಾದಕರನ್ನು ತಲೆಯ ಮೇಲೆ ಹೊತ್ತು ಮೆರೆಯುವವರ ಸಂಖ್ಯೆ ಭಾರತದಲ್ಲಿಯೂ ಕಡಿಮೆ ಇಲ್ಲ. ಇವತ್ತು ಇಸ್ರೇಲಿಗೆ ಆದ ಸ್ಥಿತಿಯೇ ಮುಂದೊಂದು ದಿನ ಭಾರತಕ್ಕೂ ಕಾದಿದೆ.

ಕೊನೆಯ ಮಾತು ಭಾರತಕ್ಕೆ ಮುಂದೆ ಎದುರಾಗಲಿರುವ ಈ ಸಾಮ್ರಾಜ್ಯಶಾಹಿ ಮತಾಂಧರ ಸಮಸ್ಯೆಗೆ ಹೋರಾಟ ಹೇಗೆ ರೂಪಿಸಬೇಕು ಮತ್ತು ಹಿಂದೂ ತನ್ನ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಗಂಭೀರ ಪ್ರಶ್ನೆಗೆ ಇಸ್ರೇಲ್ ಟೂಲ್ ಕಿಟ್ ನಲ್ಲಿ ಉತ್ತರ ಅಡಗಿದೆ.

ಜೈ ಮಹಾಕಾಲ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: