Design a site like this with WordPress.com
Get started

ಭಾರತ ಸರಕಾರದ ಮೌನ ಅಮೆರಿಕವನ್ನು ಅಲ್ಲಾಡಿಸಿತು, ನಿದ್ದೆಗೆಡಿಸಿತು

ಒಂದು ವಾರದ ಹಿಂದಷ್ಟೇ, ನಾವು ಭಾರತಕ್ಕೆ ಲಸಿಕೆ ತಯಾರಿಸಲು ಬೇಕಾಗುವ ಕಚ್ಚಾವಸ್ತು ಕೊಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ ಅಮೇರಿಕ ಈಗ ಇದ್ದಕ್ಕಿದ್ದಂತೆ ಇಷ್ಟು ಮೆತ್ತಗಾಗಿದ್ದು ಯಾಕೆ.? ಪ್ರಧಾನಿ ಮೋದಿಯರಿಗೆ ಗೊತ್ತು, ಅಮೆರಿಕಾಕ್ಕೆ ಅರ್ತ ಆಗುವ ಭಾಷೆ ಯಾವುದು ಅಂತ, ಹಾಗೆಯೇ ಅಮೆರಿಕದ ಡಿಪ್ಲೊಮೇಟ್ಸ್ ಗಳಿಗೂ ಗೊತ್ತು, ಇತಿಹಾಸದಲ್ಲಿ ಯಾವ ಯಾವ ಸಂದರ್ಭದಲ್ಲಿ ಭಾರತಕ್ಕೆ ಅಮೆರಿಕಾ ಸಹಾಯ ನಿರಾಕರಿಸಿತ್ತೋ ಭಾರತ ಅದನ್ನು ತನ್ನದೇ ರೀತಿಯಲ್ಲಿ ನಿಭಾಯಿಸಿಕೊಂಡಿದೆ ಎಂಬುದು.

🇺🇸ಅಮೆರಿಕಾ ಪರಮಾಣು ತಂತ್ರಜ್ಞಾನದಲ್ಲಿ ಕಾಡಿತ್ತು
🇮🇳 ಭಾರತ ಅದನ್ನು ಸ್ವಂತ ಬಲದಿಂದ 1974 ಮತ್ತು 1998 ರಲ್ಲಿ ಸಾಧಿಸಿತು

🇺🇸 ಅಮೆರಿಕಾ ಭಾರತಕ್ಕೆ 1993-94ರ ಸುಮಾರಿಗೆ ಕ್ರಯೋಜನಿಕ್ ತಂತ್ರಜ್ಞಾನ ರಷ್ಯದಿಂದ ಪಡೆಯಲು ಅಡ್ಡಿ ಮಾಡಿತು
🇮🇳 ಭಾರತ ತನ್ನ ಸ್ವಂತ ಬಲದಲ್ಲಿ 2017ರಲ್ಲಿ ಕ್ರಯೋ ಜನಿಕ್ ಏಂಜಿನ್ ಅಭಿವೃದ್ಧಿಪಡಿಸಿತು

🇺🇸ಅಮೆರಿಕಾ 1999 ರ ಕಾರ್ಗಿಲ್ ಯುದ್ದದ ಸಮಯದಲ್ಲಿ ಭಾರತಕ್ಕೆ GPS ತಂತ್ರಜ್ಞಾನವನ್ನು ನಿರಾಕರಿಸಿತು
🇮🇳 ಭಾರತ 2018ರಲ್ಲಿ ತನ್ನದೇ GPS ‘NVIC’ಅನ್ನು ಅಭಿವೃದ್ಧಿ ಮಾಡಿತು. ಇದರಲ್ಲಿ ಒಂದು ವಿಚಾರ ಗಮನಿಸಬೇಕು, ಅಮೆರಿಕಾ ಭಾರತಕ್ಕೆ ತಂತ್ರಜ್ಞಾನ ನಿರಾಕರಿಸಿದಾಗ ಮತ್ತು ಭಾರತ ಅದನ್ನು ತನ್ನ ಸ್ವಂತ ಬಲದಲ್ಲಿ ಸಾಧಿಸಿದಾಗ ದೇಶದಲ್ಲಿ ಬಹುತೇಕ ಇದ್ದದ್ದು ಬಿಜೆಪಿ ಸರಕಾರವೇ.. ಈಗ ಕೊವಿಡ್ ಲಸಿಕೆ‌ ಅಭಿವೃದ್ಧಿ ಮಾಡುವ ವಿಚಾರದಲ್ಲೂ ಅಷ್ಟೆ ಭಾರತ‌ ವಿಶ್ವದ ಯಾವುದೇ ಬಲಿಷ್ಟ ರಾಷ್ಟ್ರ ಸಾಧಿಸಲು ಆಗದ್ದನ್ನು ಸಾಧಿಸಿದೆ. ಮತ್ತು ಈಗಲೂ ದೇಶದಲ್ಲಿ ಅಧಿಕಾರದಲ್ಲಿ‌ ಇರುವುದು ಬಿಜೆಪಿ‌ ಸರಕಾರ.!!

ತಾನು ಭಾರತದ ಪರಮಾಪ್ತ ಸ್ನೇಹಿತ ಅನ್ನುತ್ತಲೆ ಇದ್ದ ಅಮೆರಿಕ, ಚೀನಾದ ವಿರುದ್ಧ ಹೋರಾಡಲು ನಾವು ಒಂದಾಗಬೇಕು ಎಂದು ‘ಕ್ವಾಡ್’ ಮಾಡಿ ಅದನ್ನು ದಕ್ಷಿಣ ಏಷ್ಯಾದ ‘ನೇಟೋ’ ಎಂದು ಕರೆದು, ಭಾರತ ಅದರ ಒಬ್ಬ ಬಹು ಮುಖ್ಯ ಪಾರ್ಟ್ನರ್ ಅಂದ ಅಮೆರಿಕಾ, ಲಸಿಕೆಯ ವಿಚಾರದಲ್ಲಿ ಯಾಕೆ ಭಾರತದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿತು? ಎರಡು ದಿನದ ಹಿಂದೆ ಭಾರತ್ ಬಯೋ ಟೆಕ್ ನ ಚೆರ್ಮೆನ್ ಡಾ.ಎಲ್ಲಾ ಅವರ ಸಂದರ್ಶನವನ್ನು ರಿಪಬ್ಲಿಕ್ ಟಿವಿಯಲ್ಲಿ ನೋಡಿದವರಿಗೆ ಅರ್ತ ಆಗುತ್ತದೆ. ಅಮೆರಿಕ ಸುಮಾರು 80 ಸಾವಿರ ಕೋಟಿಯಷ್ಟು ($11ಬಿಲಿಯನ್) ಹಣ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಲು ತನ್ನ ಖಾಸಗಿ ಕಂಪೆನಿಗಳಿಗೆ ಕೊಟ್ಟಿತು. ಅದೇ ಸಮಯಕ್ಕೆ ಭಾರತ ಸರಕಾರವು ಸುಮಾರು 1 ಸಾವಿರ ಕೋಟಿಯಷ್ಟು ಹಣ ತನ್ನ ಸುಮಾರು 15 ಖಾಸಗೀ ಕಂಪೆನಿಗಳಿಗೆ ಕೊಟ್ಟು ಲಸಿಕೆ ಅಭಿವೃದ್ಧಿ ಮಾಡುವಂತೆ ಹೇಳಿತು.
ಭಾರತದ ಇಸ್ರೋ ವಿಜ್ಞಾನಿಗಳೇ ಇರಲಿ, ಅಥವಾ ಔಷಧಿ ಕಂಪೆನಿಗಳ ವಿಜ್ಞಾನಿಗಳೇ ಇರಲಿ ಅತ್ಯಂತ ಕಮ್ಮಿ ದರದಲ್ಲಿ ಅತ್ಯಂತ ಪರಿಣಾಮಕಾರಿಯಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ನೈಪುಣ್ಯತೆ ಸಾಧಿಸಿದ್ದಾರೆ. ಇಸ್ರೋದ ಕಮ್ಮಿ ಖರ್ಚಿನ ಮಂಗಳ ಯಾನದ ಕಥೆ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸುವಂತೆ ಮಾಡಿದ್ದು ನಿಮಗೆ ಗೊತ್ತೇ ಇದೆ. ಔಷಧೀಯ ಕ್ಷೇತ್ರದಲ್ಲಿಯೂ ಭಾರತ ಅಂತಹುದೇ ಸಾಧನೆ ಮಾಡಿದೆ. ಹಿಂದೆ ಇದೇ ಭಾರತ್ ಬಯೋಟೆಕ್ ಕಂಪೆನಿಯು ಅಮೆರಿಕಾಕ್ಕೆ ಅಸಾಧ್ಯವಾಗಿದ್ದ ಕಮ್ಮಿ ದರದ ಔಷದಿ ಒಂದನ್ನು HVI ಕಾಯಿಲೆಗೆ ಕಂಡು ಹಿಡಿದು ಅಮೆರಿಕಕ್ಕೆ ಕೊಟ್ಟಿತ್ತು. ಅದರ ಬೆಲೆ ಸುಮಾರು ಒಂದುವರೆ ಡಾಲರ್ ಗೂ ಕಮ್ಮಿ ಇತ್ತು. ಈಗ ಇದೇ ಭಾರತ್ ಬಯೋಟೆಕ್ ಕಂಪೆನಿಯ ‘ಕೋವ್ಯಾಕ್ಸ್ಇನ್’ ಅಮೆರಿಕ ‌ ಕಂಡುಹಿಡಿದ ಲಸಿಕೆಗಿಂತ ನೂರು ಪಾಲು‌ ಅಗ್ಗ ಮತ್ತು ಅದಕ್ಕಿಂತಲೂ ಹೆಚ್ಚು ವಿಶ್ವಾಸನೀಯ. ಇದು ಈಗಾಗಲೇ‌ ವಿಶ್ವ ಆರೋಗ್ಯ ಸಂಸ್ಥೆಯು ಸೇರಿದಂತೆ ವಿಶ್ವದ ಎಲ್ಲಾ ಪ್ರಮುಖ ಆರೋಗ್ಯ ಸಂಸ್ಥೆಗಳು ದ್ರಡಪಡಿಸಿವೆ.ಇದು ಇಷ್ಟೆ ಆಗಿದ್ದರೆ ಅಮೆರಿಕಾಕ್ಕೆ ಅಷ್ಟು ತಲೆಬಿಸಿ ಆಗುತ್ತಿರಲಿಲ್ಲ. ಈ‌ ಲಸಿಕೆ‌ಯ ದರವನ್ನು ಲಸಿಕೆ‌ ಉತ್ಪಾದನೆ ಮಾಡಿದ ಕಂಪೆನಿಗೆ ಬದಲು ಸರಕಾರವೇ ನಿಗದಿ ಮಾಡಿತ್ತು. ನಿಮಗೆ ಗೊತ್ತಿರಲಿ, ಯಾವಾಗ ವಿಶ್ವದ ಎಲ್ಲಾ‌ ಬಹುರಾಷ್ಟ್ರೀಯ ಫಾರ್ಮಾ ಕಂಪೆನಿಗಳು ಕರೋನಾಕ್ಕೆ‌ ಲಸಿಕೆ ಕಂಡುಹಿಡಿಯುವ ಪೂರ್ವದಲ್ಲಿ ಈ‌ ಲಸಿಕೆ ಸುಮಾರು ₹3,500 ರಿಂದ ₹4000 ಪ್ರತಿ ಡೋಸಿಗೆ ಮಾರಬಹುದು ಎಂಬ ಲೆಕ್ಕಾಚಾರ ಹಾಕಿದ್ದರು. ಭಾರತ ಸರಕಾರ‌ ಯಾವಾಗ ಇದರ ದರ ₹250 ಕ್ಕೆ ನಿಗದಿ ಮಾಡಿತೋ ಆಗಲೇ ಇವರ ಎಲ್ಲಾ ಲೆಕ್ಕಾಚಾರ ಬುಡಮೇಲು ಆಗಿದ್ದು. ಭಾರತ ಬಯೋಟೆಕ್ ಕಂಪೆನಿ ತನ್ನ್ Covaxin ಲಸಿಕೆಯನ್ನು ಅಮೆರಿಕಾದಿಂದ ತಂದ ಕಚ್ಚಾವಸ್ತು ಬಳಸಿ ಅದಕ್ಕಿಂತ 200 ಪಟ್ಟು ಕಮ್ಮಿ ದರದಲ್ಲಿ ಮಾರುಕಟ್ಟೆಗೆ ಬಿಟ್ಟರೆ, ಅಮೆರಿಕ ತಾನೇ ಉತ್ಪದನೆ ಮಾಡಿದ ಲಸಿಕೆ ಪರಿಣಾಮಕಾರಿಯೂ ಅಲ್ಲ ಅಗ್ಗವೂ ಅಲ್ಲ, ಜೊತೆಗೆ ಭಾರತದಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯು ಆಗುತ್ತಿಲ್ಲ. ಇವಿಷ್ಟೂ ಸಂಗತಿಗಳು ಅಮೇರಿಕದ ಆರ್ಥಿಕ ಹಿತಾಸಕ್ತಿಗೆ ಹಾನಿ ಮಾಡುತ್ತದೆ.

ಇದೂ ಅಮೇರಿಕಾದ ಸ್ವಯಂ ಕೃತ ಅಪರಾಧವೇ. ಭಾರತದ ಸಂಸ್ಕೃತಿಯಲ್ಲಿ ಆರೋಗ್ಯ, ಅನ್ನ ಮತ್ತು ಶಿಕ್ಷಣ ಯಾವತ್ತೂ ಒಂದು ಸೇವೆ ಎಂಬ ಭಾವನೆ ಇತ್ತು, ಈಗಲೂ ಆಂತರ್ಯದಲ್ಲಿ ಅದು ಇದ್ದೇ ಇದೆ. ಆದರೆ ಈ ಮೂರೂ ಸಂಗತಿಯಲ್ಲಿ ಜನರ‌‌ ಭಾವನೆಗಳೊಂದಿಗೆ ಚಲ್ಲಾಟ ಆಡಿ ಯಥೇಚ್ಛವಾಗಿ ಹಣ ಸಂಪಾದನೆ ‌ಮಾಡಬಹುದು ಎಂಬುದನ್ನ‌ ಇದೇ ಅಮೇರಿಕ‌ ಜಗತ್ತಿಗೆ‌ ಕಲಿಸಿ‌ಕೊಟ್ಟದ್ದು. ಆಗ ಭಾರತ ಇನ್ನೂ ತನ್ನ ದಾಸ್ಯದಿಂದ‌ ಹೊರಗೆ ಬರುವ ಪ್ರಯತ್ನದಲ್ಲಿತ್ತು. ಜಗತ್ತು ಅಮೇರಿಕಾ ಹೇಳಿದ್ದೇ ವೇದವಾಕ್ಯ ಆಡಿದ್ದೆ ಆಟ ಅನ್ನುತಿತ್ತು. ಈಗ
ಪರಿಸ್ಥಿತಿ ಬದಲಾಗಿದೆ, ಭಲಿಷ್ಟವಾಗಿದೆ. ಭಾರತ ಲಸಿಕೆಯನ್ನು‌ ಇಷ್ಟು‌ ಕಮ್ಮಿ ದರದಲ್ಲಿ‌ ಮಾರುವುದು ಅಲ್ಲದೇ ಜಗತ್ತಿನ ಎಲ್ಲಾ‌ ರಾಷ್ಟ್ರಗಳು ಇದರ ಮೇಲಿನ ಪೇಟೆಂಟ್ ರದ್ದುಗೊಳಿಸಿ‌ ಉಚಿತವಾಗಿ ‌ಅತ್ಯಂತ ಕಮ್ಮಿದರದಲ್ಲಿ ‌‌ಕೊಡಬೇಕು ಎಂದು‌ ವಿಶ್ವ ನಾಯಕರನ್ನು ಆಗ್ರಹಿಸಿತು. ಭಾರತದ ಈ ನಡೆ ಅದು‌ ಅಮೇರಿಕಾದ ಫಾರ್ಮಾ‌ಕಂಪೆನಿಗಳ ಬೆವರಿಳಿಸಿತು.

ಈ ಎಲ್ಲಾ ಲಾಭ‌ನಷ್ಟದ ಲೆಕ್ಕಾಚಾರ ‘ಅಮೇರಿಕಾ ಫಷ್ಟ್’ ಎನ್ನುವ ಮುಖವಾಡದಡಿ ಭಾರತಕ್ಕೆ ಕಚ್ಚಾವಸ್ತುಗಳು ಪೂರೈಕೆ ನಿಲ್ಲಿಸಿ ಲಸಿಕೆಯ ಉತ್ಪಾದನೆಗೆ ಏಟು ಕೊಡಲು‌ ನಿರ್ಧರಿಸಿತು. ಅದಕ್ಕೆ ಭಾರತದ ಜೊತೆಗೆ ಉಳಿದ ವಿಚಾರದಲ್ಲಿ ಇರುವ ಅವಲಂಬನೆ ನನಪು ಹೋಗಿತ್ತು ಭಾರತ ಇನ್ನೂ 60 ರ ದಶಕದ ಭಾರತ ಅಂದುಕೊಂಡಿತ್ತು.
ಈ ಎಲ್ಲಾ ಬೆಳವಣಿಗೆಯ ನಡುವೆ ಪ್ರಧಾನಿ ಮೋದಿ ಮೌನವಾಗಿಯೇ ಇದ್ದರು,ಎಲ್ಲೂ ಯಾವುದೇ ಬಹಿರಂಗ ಹೇಳಿಕೆ ಕೊಡುವ ಗೋಜಿಗೆ ಹೋಗಲಿಲ್ಲ. ಯಥಾ ಪ್ರಕಾರ ಭಾರತದ ಫಾರ್ಮಾ ಕಂಪೆನಿಗಳು ಸಹಾ ಈ ಸಮಸ್ಯೆಯನ್ನು ಸಮಚಿತ್ತದಿಂದ ನಿಭಾಯಿಸಿದವು. ತಮಗೆ ಅಮೆರಿಕ ಹಾಕುವ ನಿರ್ಭಂಧ ಯಾವುದೇ ಪರಿಣಾಮ ಬೀರದು ಎಂಬುದನ್ನು‌ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹೇಳತೊಡಗುದವು. ಭಾರತ ತನ್ನದೇ ಸ್ವ ಸಾಮರ್ಥ್ಯದಲ್ಲಿ ಲಸಿಕೆಗೆ ಬೇಕಾಗುವ ಕಚ್ಚಾವಸ್ತು ಸಿದ್ದಪಡಿಸಿಕೊಳ್ಳುವ ಕೆಲಸಕ್ಕೆ ಇಳಿಯಿತು. ಭಾರತ್ ಬಯೋಟೆಕ್ ಮತ್ತು Council of Scientific and Industrial Research (CSIR) ಭಾರತದಲ್ಲೇ ಲಸಿಕೆಗೆ ಬೇಕಾಗುವ ಕಚ್ಚಾವಸ್ತುಗಳನ್ನು ಉತ್ಪಾದನೆ ಮಾಡಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಂಡವು. ಇದು ಅಮೆರಿಕಕ್ಕೆ ಮತ್ತೆ ಇತಿಹಾಸವನ್ನು ನೆನಪಿಸಿತು. ಭಾರತ ಯಾವತ್ತೂ ಯಾವುದೇ ವಿದೇಶಿ ಒತ್ತಡಕ್ಕೆ ಮಣಿಯದು, ನೀವು ಸಹಾಯ ಮಾಡಿದರೆ ಸಂತೋಷ, ಇಲ್ಲದೆ ಹೋದರೆ ಬೇಸರ ಇಲ್ಲ, ನಮಗೆ ಕೊಂಚ ಕಷ್ಟ ಆಗಬಹುದು, ಆದರೆ ನಾವು ತಲುಪುವ ಗುರಿ ತಲುಪದೇ ಬಿಡೆವು ಎನ್ನುವ ಸ್ಪಷ್ಟ ಸಂದೇಶ ಭಾರತ್ ಬಯೋಟೆಕ್ ಅಮೆರಿಕಕ್ಕೆ ಕೊಟ್ಟಿತು. ರಾಜತಾಂತ್ರಿಕವಾಗಿ ಏನು ಮಾಡಬೇಕು , ಎಲ್ಲೆಲ್ಲಿ ಯಾವ ನರವನ್ನು ಹಿಡಿಯಬೇಕು, ಒತ್ತಬೇಕು ಅನ್ನುವ ಕಲೆ ಮೋದಿಯವರಿಗೆ ಗೊತ್ತೇ ಇದೆ. ಅಮೆರಿಕದ ಕೆಲವು ಅಧಿಕಾರಿಗಳೇ ಅಲ್ಲಿಯ ಸರಕಾರಕ್ಕೆ ಭಾರತವನ್ನು ಅಮೇರಿಕಾ ಎದುರು ಹಾಕಿಕೊಂಡಾಗ ಆದ ಮತ್ತು ಆಗುವ ನಷ್ಟಗಳು ಏನು ಎಂಬುದು ಮನವರಿಕೆ ಮಾಡಿದರು. ಅಮೆರಿಕ ಮೆತ್ತಗಾಯಿತು, ಈಗ ಜೊತೆಗಿರುತ್ತೇನೆ ಅಂದಿತು.

ನೆನಪಿಡಿ ಮೋದಿಯ ಮಾತಿಗಿಂತ ಮೋದಿಯ ಮೌನ ವಿರೋಧಿಗಳ, ವಿರೋಧಗಳ ಮುಖವಾಡ ಕಳಿಚಿದ್ದೇ ಹೆಚ್ಚು..!!!

IndiaFightsCorona

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: