
ನವದೆಹಲಿ: ದೇಶದ ಹದಗೆಟ್ಟಿರುವ ಕರೋನವೈರಸ್ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸೋಮವಾರ, ವೈದ್ಯರೊಂದಿಗಿನ ವರ್ಚುವಲ್ ಸಂವಾದದಲ್ಲಿ ಪಿಎಂ ಮೋದಿ ಅವರು ಕರೋನವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆಗಳು ದೊಡ್ಡ ಅಸ್ತ್ರವಾಗಿದೆ ಅಂತ ಹೇಳಿದ್ದರು. ಈ ನಡುವೆ ಮೇ 1 ರಿಂದ ಎಲ್ಲಾ ವಯಸ್ಕರಿಗೆ ವ್ಯಾಕ್ಸಿನೇಷನ್ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇಂದು, ಪಿಎಂ ಮೋದಿ ಲಸಿಕೆ ತಯಾರಕರೊಂದಿಗೆ ಸಂವಹನ ನಡೆಸಿ ಈ ವೇಳೆಯಲ್ಲಿ ಎಲ್ಲಾ ಭಾರತೀಯರನ್ನು ಕಡಿಮೆ ಸಮಯದಲ್ಲಿ ಚುಚ್ಚುಮದ್ದು ನೀಡುವ ಸಲುವಾಗಿ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಲು ಕೇಳಿಕೊಂಡರು.
Addressing the nation on the COVID-19 situation. https://t.co/rmIUo0gkbm
— Narendra Modi (@narendramodi) April 20, 2021
ಇನ್ನೂ ‘ರಾಷ್ಟ್ರವನ್ನುದ್ದೇಶಿಸಿ’ ಇಂದು ಪ್ರಧಾನಿ ಮೋದಿ ಹೇಳಿದ್ದೇನು? ಇಲ್ಲಿದೆ ಅವರ ಮಾತಿನ ಹೈಲೆಟ್ಸ್
ಈಗ ದೇಶ ಅತಿ ದೊಡ್ಡ ಹೋರಾಟವನ್ನು ನಡೆಸುತ್ತಿದ್ದು, ನಮ್ಮ ದೇಶ ಎರಡನೇ ಬಾರಿ ಕರೋನದ ಎರಡನೇ ಅಲೆ ವಿರುದ್ದ ಹೋರಾಡುತ್ತಿದೆ. ನಾನು ನಿಮ್ಮ ದುಖಃದಲ್ಲಿ ಭಾಗಿಯಾಗಿರುವೆ ಅಂತ ಹೇಳಿದ ಅವರು ಸಫಾಯಿ ಕರ್ಮಚಾರಿಗಳು ಪೋಲಿಸರು, ತುರ್ತು ವಾಹನಗಳ ಚಾಲಕರು, ವೈದ್ಯರು, ನರ್ಸ್‌ಗಳು ಸೇರಿದಂತೆ ಕರೋನ ವಿರುದ್ದ ಹೋರಾಡಲು ಶ್ರಮಿಸಲು ಹೋರಾಡುತ್ತಿರುವ ಎಲ್ಲರಿಗೂ ನಮಿಸಿದರು. ಇದೇ ವೇಳೆ ಅವರು ನೀವು ಅನುಭವಿಸುತ್ತಿರುವ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು COVID ಯಿಂದ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ ಅಂತ ಹೇಳಿದರು. ನಮ್ಮ ಸಂಕಲ್ಪ, ಧೈರ್ಯ ಮತ್ತು ಸಿದ್ಧತೆಯಿಂದ ನಾವು ದೊಡ್ಡ ಸವಾಲನ್ನು ಎದುರಿಸ ಬೇಕಾಗಿದೆ ಅಂತ ಹೇಳಿದರು.
ಇನ್ನೂ ಈ ಸಮಯದಲ್ಲಿ ಕರೋನ ಸೊಂಕು ಹೆಚ್ಚಳವಾಗಿದ್ದು, ದೇಶದಲ್ಲಿ ಮೆಡಿಸನ್ ಉತ್ಪಾದನೆ ಕೂಡ ಹೆಚ್ಚಳವಾಗಿದೆ. ಜನವರಿಗೆ ಹೋಲಿಕೆ ಮಾಡಿದ್ರೆ ಈಗ ದೇಶದಲ್ಲಿ ಮೆಡಿಸನ್ ಉತ್ಪಾದನೆ ಹೆಚ್ಚಾಗಿದೆ ಅಂತ ಹೇಳಿದರು. ನಮ್ಮ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಮೆಡಿಸನ್ ಉತ್ಪಾದನೆ ಮಾಡಲಾಗುತ್ತಿದೆ. ದೇಶದ ಅನೇಕ ಭಾಗಗಳಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚಾಗಿದೆ. ಕೇಂದ್ರ, ರಾಜ್ಯ ಸರ್ಕಾರ, ಖಾಸಗಿ ವಲಯವು ಅಗತ್ಯವಿರುವ ಎಲ್ಲರಿಗೂ ಆಮ್ಲಜನಕವನ್ನು ಲಭ್ಯವಾಗಿಸಲು ಪ್ರಯತ್ನಿಸುತ್ತಿದೆ. ಕರೋನ ಲಸಿಕೆಯನ್ನು ಕಡಿಮೆ ಸಮಯದಲ್ಲಿ ಕಂಡು ಹಿಡಿಯಲಾಗಿದೆ ಇದು ನಮ್ಮ ಹೆಮ್ಮೆಯಾಗಿದೆ ಅಂತ ಹೇಳಿದ ಅವರು ಈ ದಿಕ್ಕಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕರೋನ ಲಸಿಕೆಯನ್ನು ದಾಖಲು ಮಾಡಿಕೊಳ್ಳುವ ಕೋಲ್ಡ್ ಸ್ಟೋರ್ ಮಾಡುವ ವ್ಯವಸ್ಥೆ ನಮ್ಮಲ್ಲಿದೆ ಅಂತ ಹೆಮ್ಮೆ ವ್ಯಕ್ತಪಡಿಸಿದರು.
ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಕೆಲವು ನಗರಗಳಲ್ಲಿ, ದೊಡ್ಡ ಕರೋನ ಚಿಕಿತ್ಸೆಗಾಗಿ ಮೀಸಲಾದ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ ಅಂತ ಹೇಳಿದರು. ಎರಡು ‘ಮೇಡ್ ಇನ್ ಇಂಡಿಯಾ’ ಲಸಿಕೆಗಳನ್ನು ಹೊಂದಿರುವ ಭಾರತವು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಶುರು ಮಾಡಿದ್ದು, ಇಲ್ಲಿಯವರೆಗೆ, 12 ಕೋಟಿಗೂ ಹೆಚ್ಚು ಲಸಿಕೆ ಪ್ರಮಾಣವನ್ನು ದೇಶದ ನಿವಾಸಿಗಳಿಗೆ ನೀಡಲಾಗಿದೆ. ನೀಡಲಾಗಿದೆ. ಮೇ 1 ರಿಂದ, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಬಹುದು ಅಂಥ ಹೇಳಿದರು. ನಮ್ಮ ಬಳಿ ಅತಿ ದೊಡ್ಡ ಪ್ರಮಾಣದಲ್ಲಿ ಪಿಪಿಇ ಕಿಟ್, ಕರೋನ ಸೊಂಕು ಪತ್ತೆ ಹಚ್ಚು ಕಿಟ್ ಇದೇ ಅಂತ ಹೇಳಿದರು. ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಾರದಂತೆ ನೀವು ಮನೆಯಲ್ಲಿ ಇರಿ ಅಂತ ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡರು. ಇನ್ನೂ ಇದೇ ವೇಳೆ ಅವರು ಲಾಕ್‌ಡೌನ್ ಮಾಡುವುದು ಆಯಾ ರಾಜ್ಯಗಳ ಕೊನೆ ಆಯ್ಕೆಯಾಗಿರಲಿ ಅಂಥ ಹೇಳಿದರು. ಕಾರ್ಮಿಕರು ವಲಸೆ ಹೋಗದಂತೆ ಒತ್ತಾಯಿಸುವಂತೆ ನಾನು ರಾಜ್ಯ ಸರ್ಕಾರಗಳನ್ನು ಕೋರುತ್ತೇನೆ. ಕಾರ್ಮಿಕರು ರಾಜ್ಯಗಳು ಸಹಾಯ ಮಾಡುತ್ತದೆ ಮತ್ತು ಅವರು ಇರುವ ನಗರದಲ್ಲಿ ಲಸಿಕೆ ಹಾಕಲಾಗುವುದು ಅಂತ ಹೇಳಿದರು.
ಅಂದ ಹಾಗೇ ಕಳೆದ 24 ಗಂಟೆಗಳಲ್ಲಿ ಭಾರತ ಭಾರತವು 2,73,810 ಹೊಸ ಕರೋನ ಸೊಂಕು ಪ್ರಕರಣಗಳನ್ನು ದಾಖಲಾಗಿಸಿಕೊಂಡಿದೆ. ಇದೇ ವೇಳೆ 1,619 ಸಾವುಗಳು ಮತ್ತು 1,44,178 ಮಂದಿ ಕರೋನ ಸೊಂಕಿನಿಂದ ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.