
ಪ್ಲವ ಸಂ|ರದ ಮೇಷ ಮಾಸ ದಿನ 7 ಸಲುವ ಚೈತ್ರ ಶುದ್ಧ ಅಷ್ಟಮಿ 46 ಗಳಿಗೆ ,ದಿನ ವಿಶೇಷ :ಅಶೋಕಾಷ್ಟಮಿ ,ನಿತ್ಯ ನಕ್ಷತ್ರ :ಪುನರ್ವಸು 1|| ಗಳಿಗೆ ,ಮಹಾ ನಕ್ಷತ್ರ :ಅಶ್ವಿನಿ ,ಋತು :ವಸಂತ ರಾಹುಕಾಲ :3.00-4.30 ಗಂಟೆ ,ಗುಳಿಕ ಕಾಲ :12.00-1.30 ಗಂಟೆ ,ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.16 ಗಂಟೆ
ಮೇಷ
ಸಾಲಕೊಟ್ಟವರಿಂದ ಮರುಪಾವತಿಗಾಗಿ ತಗಾದೆ. ದ್ವೇಷಕ್ಕೆ ಮುಂದಾಗದೇ ಉಪಾಯದಿಂದ ಪಾರಾಗುವ ಬಗ್ಗೆ ಯೋಚಿಸಿ. ಸಂಗಾತಿಯೊಂದಿಗೆ ಸಮಾಲೋಚಿಸಿ ಉತ್ತಮ ನಿರ್ಣಯ ಕೈಗೊಳ್ಳಿ.
ವೃಷಭ
ಕೆಲವರೊಂದಿಗೆ ಅತಿಯಾದ ಸ್ನೇಹ ಸಂಬಂಧ ವೃದ್ಧಿಸುವ ಸಾಧ್ಯತೆ. ವ್ಯವಹಾರಗಳಲ್ಲಿ ಸಂಬಂಧ ಹಳಸದಂತೆ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಯಶಸ್ಸು.
ಮಿಥುನ
ಗೆಳೆಯರೊಂದಿಗೆ ಸಮಾಲೋಚನೆ. ಕೆಲಸಕಾರ್ಯಗಳಲ್ಲಿ ನಿಮ್ಮ ಸ್ವಭಾವದಿಂದಾಗಿ ಹಿನ್ನಡೆ. ದೃಢ ನಿರ್ಧಾರದಿಂದ ವ್ಯವಹರಿಸಿ. ಹಿರಿಯರ ಬೆಂಬಲದಿಂದಾಗಿ ಯಶಸ್ಸು.
ಕಟಕ
ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಲಾಭ ಪಡೆಯುವವರ ವಿಷಯದಲ್ಲಿ ಎಚ್ಚರದಿಂದಿರುವುದು ಒಳಿತು. ಬಾಲ ಬಡುಕರನ್ನು ದಿನದಮಟ್ಟಿಗೆ ದೂರವಿಡಿ.
ಸಿಂಹ
ಸತ್ಯವನ್ನು ಬಯಲುಗೊಳಿಸಲು ಹೋಗಿ ಅವಘಡಕ್ಕೆ ತುತ್ತಾಗುವ ಸಾಧ್ಯತೆ. ವಾಹನ ಖರೀದಿಯ ಯೋಗ. ಯಂತ್ರೋಪಕರಣಗಳ ವ್ಯವಹಾರದಲ್ಲಿ ಅಧಿಕ ಲಾಭ.
ಕನ್ಯಾ
ನಿಮ್ಮ ಇಂದಿನ ಅನಿವಾರ್ಯವಲ್ಲದ ಕೆಲಸ ಕಾರ್ಯಗಳನ್ನು ಮುಂದೂಡುವುದು ಉತ್ತಮ. ದೂರದ ಪ್ರಯಾಣ ಖಂಡಿತ ಬೇಡ. ಮಕ್ಕಳಿಂದ ಮನಸ್ಸಿಗೆ ಸಂತಸ ದೊರೆಯುವುದು.
ತುಲಾ
ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಗೊಂದಲಕ್ಕೆ ಸಿಕ್ಕಿಸುವ ಸಾಧ್ಯತೆ. ಮನೆಯವರೊಂದಿಗೆ ದೂರದ ಪ್ರಯಾಣ. ಆರೋಗ್ಯದಲ್ಲಿ ವೃದ್ಧಿಯಾಗಿ ಸಂತಸ ಮೂಡುವುದು.
ವೃಶ್ಚಿಕ
ನಿಮ್ಮ ವಿರುದ್ಧ ಸಹೋದ್ಯೋಗಿಗಳಿಂದ ಸಣ್ಣ ಪಿತೂರಿಯೊಂದು ರೂಪುಗೊಳ್ಳುವ ಸಾಧ್ಯತೆ. ಸಮಾಧಾನ ನಿಮ್ಮ ನೆರವಿಗೆ ಬರುವುದು. ಸಹೋದರಿಯರಿಂದ ಸಕಾಲಿಕ ಸಾಂತ್ವನ.
ಧನು
ಗುಂಪುಗಾರಿಕೆಯಿಂದಾಗಿ ಧನ ಮಾನಗಳ ಹಾನಿ. ಅನ್ಯರ ಮೇಲೆ ವಿನಾ ಸಂಶಯ ಒಳ್ಳೆಯದಲ್ಲ. ದೂರದಲ್ಲಿರುವ ಮಕ್ಕಳ ಆಗಮನ ಸಾಧ್ಯತೆ.
ಮಕರ
ಮನಸ್ಸಿನಲ್ಲಿ ಹರಿಯುತ್ತಿರುವ ಪ್ರೀತಿ ಪ್ರೇಮಗಳ ಹುಚ್ಚು ಹೋಳೆಗೆ ಲಗಾಮು ಹಾಕಿಕೊಳ್ಳಿ. ಸ್ನೇಹದ ವಿಷಯದಲ್ಲಿ ಎಡವಿ ಬೀಳುವ ಸಾಧ್ಯತೆ. ಅಪರಿಚಿತ ವ್ಯಕ್ತಿಗಳೊಡನೆ ವ್ಯವಹರಿಸುವಾಗ ಎಚ್ಚರವಿರಲಿ.
ಕುಂಭ
ಬೇರೆಯವರ ಥಳುಕು ಬಳುಕಿನ ಮಾತಿಗೆ ಮರುಳಾಗಿ ಮೋಸಹೋಗುವ ಸಾಧ್ಯತೆ. ದಿನದ ಮಟ್ಟಿಗೆ ದೂರದ ಪ್ರಯಾಣ ಬೇಡ. ಹಿತಕರ ವಾತಾವರಣ ಮೂಡಲಿದೆ.
ಮೀನ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿ ಸಾಧ್ಯತೆ. ಮನಸ್ಸಿಗೆ ನೆಮ್ಮದಿ ನೀಡುವ ಹೊಸ ಮಾರ್ಗವೊಂದು ಗೋಚರ. ವ್ಯಾಪಾರಸ್ಥರಿಗೆ ಗಣನೀಯ ಲಾಭ ದೊರಕುವುದು.