
ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ.
ತಿಥಿ: ಸಪ್ತಮಿ, ನಕ್ಷತ್ರ : ಪುನರ್ವಸು,
ವಾರ : ಸೋಮವಾರ
ರಾಹುಕಾಲ:7.43 ರಿಂದ 9.16
ಗುಳಿಕಕಾಲ :1.56 ರಿಂದ 3.29
ಯಮಗಂಡಕಾಲ :10.49 ರಿಂದ 12.22
ಮೇಷ
ವೈಯಕ್ತಿಕ ವಿಚಾರಗಳತ್ತ ಲಕ್ಷ್ಯ ಕೊಡಿ. ಹೊಸ ಉದ್ಯಮವೊಂದನ್ನು ಪ್ರಾರಂಭಿಸುವ ಬಗೆಗೆ ಮಾತುಕತೆ ನಡೆಸುವಿರಿ. ಹಿತಮಿತವಾದ ಮಾತುಗಳಿಂದ ಕಾರ್ಯಸಿದ್ಧಿ. ಮನೆಯಲ್ಲಿ ಆರೋಗ್ಯದೊಂದಿಗೆ ನೆಮ್ಮದಿ ನೆಲೆಸಲಿದೆ.
ವೃಷಭ
ಮಹಿಳೆಯರಿಗೆ ಆರ್ಥಿಕ ಸಬಲತೆಗೆ ಬೇಕಾದ ಅನುಕೂಲತೆಗಳು ದೊರಕಲಿವೆ. ಸರ್ಕಾರಿ ಸಂಸ್ಥೆಗಳಲ್ಲಿ ದುಡಿಯುವವರಿಗೆ ಬಡ್ತಿ ಸಾಧ್ಯತೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಸಹಾಯ ನೀಡಬೇಕಾದೀತು.
ಮಿಥುನ
ರಾಜಕೀಯ ಮುತ್ಸದ್ದಿಗಳಿಗೆ ಉನ್ನತ ಹುದ್ದೆ ಅಲಂಕರಿಸುವ ಅವಕಾಶ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆಕಸ್ಮಿಕ ಧನಲಾಭ. ವಿವಾಹ ಸಂಬಂಧದ ಮಾತುಕತೆಗಳು ಮುಂದುವರಿದು ಯಶ ಕಾಣಲಿದೆ.
ಕಟಕ
ಸೌಂದರ್ಯವರ್ಧಕ ವಸ್ತುಗಳ ವ್ಯವಹಾರವನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಲಿದ್ದೀರಿ. ನೆರೆಹೊರೆಯವರೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ. ಹಣಕಾಸಿನ ವಿಷಯದಲ್ಲಿ ಅನುಕೂಲತೆಗಳು.
ಸಿಂಹ
ಬಂಧು ಮಿತ್ರರೊಂದಿಗೆ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ಉದರ ಸಂಬಂಧಿ ಕಾಯಿಲೆಗಳು ಕಿರಿ ಕಿರಿ ಉಂಟುಮಾಡಬಹುದು. ವ್ಯವಹಾರ ನಿಮಿತ್ತ ಮಿತ್ರರೊಂದಿಗೆ ದೂರದ ಪ್ರಯಾಣ ಸಾಧ್ಯತೆ. ಬಂಧುಗಳಿಂದ ಸಹಕಾರ.
ಕನ್ಯಾ
ಮನೆಯ ನವೀಕರಣ ಅಥವಾ ನಿರ್ಮಾಣದ ಕೆಲಸಗಳು ಪ್ರಾರಂಭವಾಗುವವು. ಬಡವರಿಗೆ ಧಾನ್ಯಗಳನ್ನು ದಾನ ಮಾಡುವ ಅವಕಾಶ. ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳುವಿರಿ.
ತುಲಾ
ನ್ಯಾಯಾಲಯದಲ್ಲಿನ ತಗಾದೆಗಳು ನಿಮ್ಮ ಪರವಾಗಿ ಇತ್ಯರ್ಥವಾಗುವುದರಿಂದ ಮಾನಸಿಕ ನೆಮ್ಮದಿ. ಹಿರಿಯ ಅಧಿಕಾರಿಗಳಿಂದ ಮಾನಸಿಕ ಕಿರಿಕಿರಿ. ಆರ್ಥಿಕ ವ್ಯವಹಾರದಲ್ಲಿನ ಉನ್ನತಿಗಾಗಿ ಗಣೇಶ ಪ್ರಾರ್ಥನೆ ಮಾಡಿ.
ವೃಶ್ಚಿಕ
ಸಭೆಯೊಂದರಲ್ಲಿ ಭಾಗವಹಿಸಿ ವಿಷಯವೊಂದರ ಕುರಿತು ಅಭಿಪ್ರಾಯ ಮಂಡಿಸುವ ಸಾಧ್ಯತೆ. ಕಳೆದುಕೊಂಡ ವಸ್ತುಗಳು ಕೈ ಸೇರುವ ಸಂಭವ. ಸಂಸಾರ ಸಮೇತ ದೂರದ ಪ್ರಯಾಣ ಮಾಡಲಿದ್ದೀರಿ. ಮಾನಸಿಕ ನೆಮ್ಮದಿ.
ಧನು
ರಾಜಕೀಯ ಪ್ರೇರಿತ ಕೆಲಸಗಳಲ್ಲಿ ಯಶಸ್ಸು. ಉನ್ನತ ಹುದ್ದೆ ಅಲಂಕರಿಸಿರುವ ಅಧಿಕಾರಿಗಳಿಗೆ ಹೊಂದಿದವರಿಗೆ ವರ್ಗಾವಣೆ ಸಾಧ್ಯತೆ. ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಮನ್ನಣೆ ದೊರಕಲಿದೆ.
ಮಕರ
ವಿದ್ಯಾಭ್ಯಾಸದ ಬಗ್ಗೆ ಹಣಕಾಸಿನ ವ್ಯವಸ್ಥೆ ಮಾಡಬೇಕಾದೀತು. ನೌಕರಸ್ಥರು ಸಹೋದ್ಯೋಗಿಗಳೊಡನೆ ನೇರವಾಗಿ ವ್ಯವಹರಿಸಿ. ಎಲೆಕ್ಟ್ರಿಕಲ್ ಗುತ್ತಿಗೆದಾರರು, ಮಾರಾಟಗಾರರಿಗೆ ಬಿಡುವಿಲ್ಲದ ಕೆಲಸ.
ಕುಂಭ
ವಿಶ್ವಾಸಿಗಳಿಗೆ ಅನಿವಾರ್ಯ ಹಣ ಸಹಾಯ ಮಾಡುವ ಅವಕಾಶ. ಎಂಜಿನಿಯರ್‌ಗಳು, ತಂತ್ರಜ್ಞರು ಮತ್ತು ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಅನುಕೂಲ. ಲಕ್ಷ್ಮೀ ನೃಸಿಂಹ ಸ್ತೋತ್ರ ಪಠಿಸಿ.
ಮೀನ
ವ್ಯವಹಾರಗಳು ಸುಗಮವಾಗಿ ನೆರವೇರುವವು. ಬರಬೇಕಾಗಿರುವ ಹಣ ನಿಮ್ಮ ಕೈ ಸೇರುವುದರಲ್ಲಿ ಅನುಮಾನವಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗದ ವಿಷಯದಲ್ಲಿ ಮಾಡಿದ ಪ್ರಯತ್ನಗಳು ಫಲ ನೀಡಲಿವೆ.