
ಪ್ಲವ ಸಂ|ರದ ಮೇಷ ಮಾಸ ದಿನ 4 ಸಲುವ ಚೈತ್ರ ಶುದ್ಧ ಪಂಚಮಿ 35|| ಗಳಿಗೆದಿನ ವಿಶೇಷ :ಪಾವಂಜೆ, ಪುತ್ತೂರು ರಥ ನಿತ್ಯ ನಕ್ಷತ್ರ :ಮೃಗಶಿರಾ 50|| ಗಳಿಗೆ ಮಹಾ ನಕ್ಷತ್ರ :ಆಶ್ವಿನಿ ಋತು :ವಸಂತ ರಾಹುಕಾಲ :9.00-10.30 ಗಂಟೆ ಗುಳಿಕ ಕಾಲ :6.00-7.30 ಗಂಟೆ ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.18 ಗಂಟೆ
ಮೇಷ
ವೈದ್ಯಕೀಯ ಕ್ಷೇತ್ರ, ಸಂಶೋಧಕರು, ಔಷಧ ವಿತರಕರಿಗೆ ವೃತ್ತಿಯಲ್ಲಿ ಹೆಚ್ಚಿನ ಬದಲಾವಣೆ. ಲೇವಾದೇವಿ ವ್ಯವಹಾರ ನಡೆಸುವವರಿಗೆ ಹೆಚ್ಚಿನ ಲಾಭ ದೊರಕಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.
ವೃಷಭ
ಸಂಪತ್ತಿನಲ್ಲಿ ವೃದ್ಧಿಯನ್ನು ಕಂಡುಕೊಳ್ಳುವಿರಿ. ಜಲಸಂಬಂಧಿ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಾಧ್ಯತೆ. ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ ಸಾಧ್ಯತೆ. ಹೊಸ ವ್ಯಕ್ತಿಯೊಬ್ಬರ ಪರಿಚಯದಿಂದ ಸಂತಸ ಮೂಡಲಿದೆ.
ಮಿಥುನ
ಸಾಂಸಾರಿಕ ಜೀವನ ಸುಖಾನುಭವವನ್ನು ನೀಡಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಯಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಭಾಗ್ಯ ಲಭಿಸುವ ಸಾಧ್ಯತೆ. ವ್ಯಾಪಾರದಲ್ಲಿ ಪ್ರಗತಿ.
ಕಟಕ
ಮನಸ್ಸಿಗೆ ಉಲ್ಲಾಸ ತರುವ ಸುದ್ದಿಯನ್ನು ಕೇಳಲಿದ್ದೀರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಪ್ರತಿಫಲ ನಿರೀಕ್ಷೆ. ಉದ್ಯಮಿಗಳಿಗೆ ವಿಶೇಷ ಅನುಕೂಲತೆ. ಆರಕ್ಷಕ ಅಧಿಕಾರಿಗಳಿಗೆ ವಿಶೇಷ ಅಧಿಕಾರ ಪ್ರಾಪ್ತಿ.
ಸಿಂಹಸಗಟು ವ್ಯಾಪಾರದಲ್ಲಿ ತೊಡಗಿರುವವರಿಗೆ ಧನಲಾಭ. ಗಣಕಯಂತ್ರ ಮುಂತಾದ ತಾಂತ್ರಿಕ ವಸ್ತುಗಳ ಖರೀದಿ ಸಾಧ್ಯತೆ. ಬಂಧುಗಳ ಸಹಕಾರದಿಂದ ಸಹೋದರರಿಂದ ಎದುರಾಗಬಹುದಾದ ವಿರೋಧಗಳು ಶಮನಗೊಳ್ಳಲಿವೆ.
ಕನ್ಯಾ
ಮನಸ್ಸಿಗೆ ಸ್ವಲ್ಪಮಟ್ಟಿನ ವ್ಯಥೆ. ಮಕ್ಕಳ ವಿಷಯದಲ್ಲಿ ಗಮನ ಅಗತ್ಯ. ಸ್ತ್ರೀಯರಿಗೆ ದೈಹಿಕ ಶ್ರಮ. ಯುವತಿಯರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಸ್ನೇಹಿತರೊಂದಿಗೆ ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ವಿರಸ.
ತುಲಾ
ವ್ಯವಸಾಯದಲ್ಲಿನ ಅಭಿವೃದ್ಧಿಯಿಂದ ಆದಾಯದಲ್ಲಿ ಹೆಚ್ಚಳ. ಔಷಧ ವಿತರಕರಿಗೆ ಅನುಕೂಲಕರ ವ್ಯವಹಾರ ಸಾಗಲಿದೆ. ಆಭರಣ ವ್ಯವಹಾರಸ್ಥರಿಗೆ ವ್ಯವಹಾರದಲ್ಲಿ ಚೇತರಿಕೆ ಉಂಟಾಗಿ ಲಾಭದಲ್ಲಿ ಹೆಚ್ಚಳವಾಗಲಿದೆ.
ವೃಶ್ಚಿಕ
ಜಮೀನು ಆಸ್ತಿಗಳಿಗೆ ಸಂಬಂಧಿಸಿದ ನೋಂದಣಿ ಕಾರ್ಯಗಳು ಪೂರ್ಣಗೊಳ್ಳಲಿವೆ. ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸದವಕಾಶ. ಯೋಧರು, ಕ್ರೀಡಾಪಟುಗಳಿಗೆ ಸರ್ಕಾರದ ಗೌರವ.
ಧನು
ಸಂಗೀತ ಮೊದಲಾದ ಲಲಿತಕಲೆಗಳ ಪರಿಣತರಿಗೆ ಪ್ರದರ್ಶನದ ಅವಕಾಶಗಳೊಂದಿಗೆ ಸಾರ್ವಜನಿಕ ಮನ್ನಣೆಗೆ ಪ್ರಾಪ್ತವಾಗುವ ಅವಕಾಶ. ಉತ್ತಮ ಆರೋಗ್ಯ ನಿಮ್ಮದಾಗಲಿದೆ. ಮಕ್ಕಳಿಗೆ ವಿದೇಶಕ್ಕೆ ತೆರಳುವ ಅವಕಾಶ.
ಮಕರ
ಬರಬೇಕಾದ ಹಣ ಹಿಂದಿರುಗಿ ಬರಲಿದೆ. ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ ಅಥವಾ ಬೆದರಿಕೆ. ಎಣ್ಣೆ, ಜೇನುತುಪ್ಪ, ಹಾಲು ಇತ್ಯಾದಿ ದ್ರವ ಪದಾರ್ಥಗಳ ವ್ಯಾಪಾರ ವ್ಯವಹಾರದಲ್ಲಿ ಅತ್ಯಂತ ಲಾಭ ದೊರಕಲಿದೆ.
ಕುಂಭ
ಗೃಹನಿರ್ಮಾಣ ಅಥವಾ ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಗಣ್ಯ ವ್ಯಕ್ತಿಗಳ ಸಹಕಾರದಿಂದ ಕೆಲಸಕಾರ್ಯಗಳಲ್ಲಿ ಹೆಚ್ಚಿನ ಉತ್ಸಾಹ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಬಡ್ತಿ.
ಮೀನ
ರಾಜಕೀಯ ಕ್ಷೇತ್ರದಲ್ಲಿ ವ್ಯವಹರಿಸುವವರಿಗೆ ಉತ್ತಮ ಸ್ಥಾನ ಲಭ್ಯ. ಆಸ್ತಿ ಖರೀದಿಯ ಸಾಧ್ಯತೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ನಿರೀಕ್ಷಿತ ಯಶವನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು.