
ಪ್ಲವ ಸಂ|ರದ ಮೇಷ ಮಾಸ ದಿನ 3 ಸಲುವ ಚೈತ್ರ ಶುದ್ಧ ಚೌತಿ 29|| ಗಳಿಗೆ ದಿನ ವಿಶೇಷ :ಮಧೂರು ಉಂಡಾರು ರಥ ನಿತ್ಯ ನಕ್ಷತ್ರ :ರೋಹಿಣಿ 43|| ಗಳಿಗೆ ಮಹಾ ನಕ್ಷತ್ರ :ಆಶ್ವಿನಿ ಋತು :ವಸಂತ ರಾಹುಕಾಲ :10.30-12.00 ಗಂಟೆ ಗುಳಿಕ ಕಾಲ :7.30-9.00 ಗಂಟೆ ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.19 ಗಂಟೆ
ಮೇಷ
ಗಂಡಾಂತರಕ್ಕೆ ಬಲಿಯಾಗದಂತೆ ಹಿರಿಯರಿಂದ ಸಕಾಲಿಕ ಸಲಹೆಗಳು. ವೈಮನಸ್ಸು ನಿವಾರಣೆಯಾಗಿ ದೃಢ ಸಂಕಲ್ಪ. ಆರೋಗ್ಯದಲ್ಲಿ ಪ್ರಗತಿ. ಬಂಧುಗಳ ಆಗಮನ ಸಾಧ್ಯತೆ.
ವೃಷಭ
ಕೆಲಸ–ಕಾರ್ಯಗಳಲ್ಲಿ ಉತ್ತಮ ಪ್ರಗತಿ. ನಿಕಟವರ್ತಿಗಳಿಂದ ಅನುಕೂಲಕರ ಸಹಾಯ. ಆತ್ಮಸ್ಥೈರ್ಯ ಮೂಡುವುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ. ಗಣ್ಯರ ಭೇಟಿ ಸಂಭವ.
ಮಿಥುನ
ಭಿನ್ನಾಭಿಪ್ರಾಯದಿಂದಾಗಿ ನಿಂತು ಹೋದ ಕಾರ್ಯಗಳು ಒಮ್ಮತದಿಂದ ಸಾಧಿಸಲ್ಪಡುವವು. ಮದುವೆ ಮುಂತಾದ ಮಂಗಳಕಾರ್ಯಗಳ ನಿಶ್ಚಯ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ಹುಮ್ಮಸ್ಸು.
ಕಟಕ
ಕುಟುಂಬದಲ್ಲಿ ಹೊಂದಾಣಿಕೆಯಿಂದ ಬೆಂಬಲ ಗಳಿಸುವಿರಿ. ವ್ಯಕ್ತಿಗಳ ಸಂಪರ್ಕದಿಂದಾಗಿ ಉತ್ತಮ ಲಾಭದ ನಿರೀಕ್ಷೆ. ಸಂಘರ್ಷದಿಂದ ದೂರ. ಗೆಳೆಯರಿಂದ ನೆಮ್ಮದಿ.
ಸಿಂಹ
ಬೇರೆಯವರ ವಿವಾದಗಳನ್ನು ಪರಿಹರಿಸುವಲ್ಲಿ ಮಧ್ಯಸ್ಥಿಕೆ ವಹಿಸಬೇಕಾದೀತು. ಅಡ್ಡಿ ಆತಂಕಗಳಿಲ್ಲದ ಜೀವನದಿಂದಾಗಿ ಉಲ್ಲಾಸ ಮೂಡುವುದು. ಸ್ನೇಹಿತರಿಂದಾಗಿ ಸಂತೋಷದ ವಾತಾವರಣ.
ಕನ್ಯಾ
ಮುಕ್ತ ಭಾವನೆಯಿಂದಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಪ್ರಯಾಣದ ಸಾಧ್ಯತೆ ಕಂಡುಬರುವುದು. ಆಶ್ಚರ್ಯಕರ ರೀತಿಯಲ್ಲಿ ಕೆಲಸ ಕಾರ್ಯಗಳು ಕೂಡಿಬರುವವು.
ತುಲಾ
ಆತ್ಮಶೋಧನೆಯಿಂದ ತಲೆದೋರಿರುವ ಆಂತರಿಕ ಗೊಂದಲಗಳು ನಿವಾರಣೆಯಾಗುವವು. ನಿಷ್ಕಲ್ಮಷ ಭಾವನೆಯಿಂದ ಸಮಾಧಾನ. ಸ್ನೇಹಿತರಿಂದ ಪ್ರಶಂಸೆ, ಸಂಗಾತಿಯಿಂದ ಉತ್ತಮ ಸಹಕಾರ.
ವೃಶ್ಚಿಕ
ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿರಿ. ಅಚ್ಚರಿಯ ಸುದ್ದಿಯನ್ನು ಕೇಳುವ ಸಾಧ್ಯತೆ. ಸ್ವಪ್ರಯತ್ನದಿಂದ ಕಾರ್ಯಕ್ಷೇತ್ರಗಳಲ್ಲಿ ಉನ್ನತಿ. ಸಾಮಾಜಿಕ ಮನ್ನಣೆ ನಿಮ್ಮದಾಗಲಿದೆ.
ಧನು
ಬಿಚ್ಚು ಮನಸ್ಸಿನ ಸ್ಪಷ್ಟ ಹೇಳಿಕೆಯಿಂದಾಗಿ ಸಹೋದ್ಯೋಗಿಗಳಿಗೆ ಇರುಸು ಮುರುಸು. ಸತ್ಯದರ್ಶನದಿಂದ ಎಲ್ಲವೂ ನಿರಾಳ. ಸಂತೋಷದ ವಾತಾವರಣ ಮೂಡುವುದು.
ಮಕರ
ಸ್ನೇಹಿತರೊಂದಿಗೆ ವಿಷಯಗಳ ವಿನಿಮಯದಿಂದಾಗಿ ವಾತಾವರಣ ತಿಳಿಗೊಂಡು ಮನಸ್ಸಿಗೆ ನೆಮ್ಮದಿ. ವಿಶೇಷ ಭೋಜನ ಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ. ಸಂಗಾತಿಯಿಂದ ಸಹಕಾರ.
ಕುಂಭ
ನಿಮ್ಮ ನಿಲುವಿನಲ್ಲಿ ಆಕಸ್ಮಿಕ ತಿರುವು ಕಂಡುಬರುವುದು. ದೈಹಿಕ ಮತ್ತು ಮಾನಸಿಕ ಶ್ರಮ ಕಡಿಮೆಯಾಗಿ ನಿರಾಳ ಭಾವ. ಕಾರ್ಯನಿರ್ವಹಣೆಯಲ್ಲಿ ಯಶಸ್ಸನ್ನು ಕಾಣುವಿರಿ.
ಮೀನ
ಆತ್ಮೀಯತೆಯಿಂದಾಗಿ ಶುಭ ಸಂದರ್ಭ ನಿರ್ಮಾಣ. ಹೊಣೆಗಾರಿಕೆಯ ವಿಷಯದಲ್ಲಿ ಸಮರ್ಥ ನಿರ್ವಹಣೆ. ವಿಷಯಗಳ ಸ್ಪಷ್ಟ ಅರಿವು ಉಂಟಾಗಿ ವಿಶ್ವಾಸ ಮೂಡುವುದು