
ಪ್ಲವ ಸಂ|ರದ ಮೀನ ಮಾಸ ದಿನ 30 ಸಲುವ ಚೈತ್ರ ಶುದ್ಧ ಪಾಡ್ಯ 10 ಗಳಿಗೆ ದಿನ ವಿಶೇಷ :ಮೇಷ ಸಂಕ್ರಮಣ, ಚಾಂದ್ರ ಯುಗಾದಿ, ಚಂದ್ರ ದರ್ಶನ, ಪ್ಲವ ಸಂವತ್ಸರ ಆರಂಭ, ನಿತ್ಯ ನಕ್ಷತ್ರ :ಆಶ್ವಿನಿ 20 ಗಳಿಗೆ ,ಮಹಾ ನಕ್ಷತ್ರ :ಆಶ್ವಿನಿ, ಋತು :ವಸಂತ ರಾಹುಕಾಲ :3.00-4.30 ಗಂಟೆ, ಗುಳಿಕ ಕಾಲ :12.00-1.30 ಗಂಟೆ ,ಸೂರ್ಯಾಸ್ತ :6.41 ಗಂಟೆ ಸೂರ್ಯೋದಯ :6.20 ಗಂಟೆ
ಮೇಷ
ಮಹತ್ತರವಾದ ಕನಸೊಂದು ಈಡೇರುವ ದಿಶೆಯಲ್ಲಿ ಬಂಧುಗಳಿAದ ಸಲಹೆಗಳು ಬರುವ ಸಾಧ್ಯತೆ. ನಿಮ್ಮ ದಿಟ್ಟ ನಿಲುವಿನಿಂದ ಹಿಂದೆ ಸರಿಯುವ ಅವಶ್ಯಕತೆ ಇಲ್ಲ. ಯಾವುದೇ ಕೆಲಸಕ್ಕೂ ದುಡಕದೇ ಮತ್ತೊಮ್ಮೆ ಯೋಚಿಸಿ ಕೈ ಹಾಕುವುದು ಉತ್ತಮ
ವೃಷಭ
ಅಡೆತಡೆಗಳ ನಡುವೆಯೂ ಉದ್ದೇಶಿತ ಕಾರ್ಯಗಳಲ್ಲಿ ಯಶಸ್ಸು. ಬುದ್ಧಿವಂತಿಕೆಯಿAದ ಕಾರ್ಯ ಸಾಧನೆ ಮಾಡುವಿರಿ. ಮಹಿಳೆಯರಿಂದ ಬಂದ ಸಲಹೆಗಳಿಗೆ ಆದ್ಯತೆ ನೀಡಲಿದ್ದೀರಿ. ದೇವಿಯ ದರ್ಶನ ಯೋಗ ಕಂಡುಬರುವುದು. ಮಾನಸಿಕ ಶಾಂತಿ ಲಭಿಸಲಿದೆ.
ಮಿಥುನ
ಎದುರಾದ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ದಿಟ್ಟ ಸಾಮರ್ಥ್ಯ ನಿಮ್ಮದು. ಯಾವುದೇ ವಿಚಾರದಲ್ಲಿ ರಾಜಿಯಾಗದ ಮನಸ್ಥಿತಿ. ಪ್ರೀತಿಪಾತ್ರರಿಂದ ಸಮಯೋಚಿತ ಭರವಸೆಯ ಬಲ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ, ಕಛೇರಿ ಕೆಲಸಗಳಿಗೆ ಅಡೆತಡೆ ಸಂಭವ.
ಕಟಕ
ಅನಿವಾರ್ಯ ಒತ್ತಡಕ್ಕೆ ಒಳಗಾಗಿ ಎಲ್ಲವನ್ನು ತಾಳಿಕೊಳ್ಳಬೇಕಾದೀತು. ಒಳ್ಳೆಯ ಯೋಜನೆಯೊಂದಕ್ಕೆ ಮುನ್ನುಡಿ ಹಾಡುವ ಸಾಧ್ಯತೆ. ವಿಶ್ವಾಸ, ಪ್ರೀತಿಪಾತ್ರ ನಡೆಗಳಿಂದಾಗಿ ಎಲ್ಲರಲ್ಲೂ ಪ್ರಶಂಸೆಗೆ ಪಾತ್ರರಾಗುವಿರಿ. ಸಕಾರಾತ್ಮಕ ಭರವಸೆ.
ಸಿಂಹ
ನಿಮ್ಮ ಹವ್ಯಾಸವೇ ನಿಮಗೊಂದು ವೃತ್ತಿಯಾಗಿ ಮಾರ್ಪಾಡಾಗುವ ಸಾಧ್ಯತೆ. ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದೀರಿ. ಸಂದರ್ಭೋಚಿತವಾದ ಸಲಹೆ, ಸಹಕಾರ ದೊರೆತು ಶುಭ ಲಾಭಗಳನ್ನು ತಂದುಕೊಡಲಿವೆ.
ಕನ್ಯಾ
ಆಕರ್ಷಣೀಯ ವ್ಯಕ್ತಿತ್ವದ ಜೊತೆಗೆ ನಡವಳಿಕೆಯಿಂದಾಗಿ ಅಭಿಮಾನಿಗಳು ಹೆಚ್ಚುವ ಸಾಧ್ಯತೆ. ಸಮರ್ಥ ಕಾರ್ಯ ಯೋಜನೆ ಗಳನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಭಾವನೆಗಳಿಗೆ ಮನ್ನಣೆ ನೀಡಿ ಗೌರವ ಸಂಪಾದನೆ.
ತುಲಾ
ನಿಮ್ಮ ಗುರಿಸಾಧನೆಯಲ್ಲಿ ಯಶಸ್ಸನ್ನು ಕಾಣುವಿರಿ. ಅಂದುಕೊAಡ ಕಾರ್ಯ ಸಾಧನೆಗಾಗಿ ಸಮರ್ಥ ಮಾರ್ಗ ಗೋಚರವಾಗಲಿದೆ. ಸರ್ಕಾರಿ ಉದ್ಯೋಗಿಗಳು ಸ್ವಲ್ಪಮಟ್ಟಿನ ವಿರೋಧಗಳನ್ನು ಎದುರಿಸಬೇಕಾದೀತು. ಸಮಚಿತ್ತ ದಿಂದಾಗಿ ಕಾರ್ಯ ಸುಗಮ.
ವೃಶ್ಚಿಕ
ಕಾರ್ಯಯೋಜನೆಯ ಯಶಸ್ಸಿಗಾಗಿ ಅನೇಕ ಸಲಹೆಗಳು ಬಂದರೂ ಸ್ವಯಂ ತುಲನೆ ಮಾಡಿ ನಿರ್ಧಾರಕ್ಕೆ ಬರುವುದು ಒಳ್ಳೆಯದು. ಉದ್ಯೋಗದಲ್ಲಿ ಅಡೆತಡೆಗಳು ಕಂಡುಬAದರೂ ನಿವಾರಣೆ ಕಂಡುಕೊಳ್ಳುವಿರಿ.
ಧನು
ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ಮಾಡಿ ಮುಗಿಸುವ ತವಕ ದಿಂದಾಗಿ ಗೊಂದಲ ಉಂಟಾಗಬಹುದು. ದುಂದುವೆಚ್ಚವನ್ನು ಭರಿಸಬೇಕಾಗಬಹುದು. ಕಾರ್ಯಯೋಜನೆಯಿಂದ ವೆಚ್ಚವನ್ನು ಕಡಿತ ಗೊಳಿಸುವ ಸಾಧ್ಯತೆ.
ಮಕರ
ಪ್ರಮುಖ ಯೋಜನೆಗಳ ಆಗುಹೋಗುಗಳ ಬಗ್ಗೆ ಪರಿಣಿತ ವ್ಯಕ್ತಿಗಳೊಂದಿಗೆ ಸಮಾಲೋಚನೆಯ ಸಾಧ್ಯತೆ. ಸರಿಯಾದ ನಿರ್ಧಾರದಿಂದಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ನಿಶೆ ಏರಿಸುವ ವಸ್ತುಗಳಿಂದ ದಿನದಮಟ್ಟಿಗೆ ದೂರವಿರುವುದು ಒಳ್ಳೆಯದು.
ಕುಂಭ
ಸ್ವತಂತ್ರ ನಿರ್ಧಾರ ಕೈಗೊಳ್ಳುವಲ್ಲಿ ಹಿಂಜರಿಕೆ ಇಲ್ಲ. ಸಮತೋಲನ ಕಾಯ್ದುಕೊಳ್ಳುವ ಚಾಣಾಕ್ಷತೆಯಿಂದಾಗಿ ಮಾನಸಿಕ ನೆಮ್ಮದಿ. ಸ್ನೇಹಿತರೊಂದಿಗೆ ಹಿತವಾಚ ಚರ್ಚೆಗಳು ನಡೆದು ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ.
ಮೀನ
ಕುಟುಂಬದ ಸದಸ್ಯರೊಂದಿಗೆ ಸಂತಸದ ದಿನವನ್ನು ಕಳೆಯುವಿರಿ. ಉದ್ಯೋಗದಲ್ಲಿ ಬಡ್ತಿ ವಾ ಪ್ರಗತಿಯ ಸಾಧ್ಯತೆ. ಶಿಸ್ತಿನ ನಡವಳಿಕೆ. ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಯಲಿದೆ. ಸಂಬAಧಿಗಳ ದರ್ಶನ ಸಾಧ್ಯತೆ.