
ಶಾರ್ವರಿ ಸಂ|ರದ ಮೀನ ಮಾಸ ದಿನ 29 ಸಲುವ ಫಾಲ್ಗುಣ ಬಹುಳ ಅಮಾವಾಸ್ಯೆ 4| ಗಳಿಗೆದಿನ ವಿಶೇಷ :ಸೋಮವತೀ ಅಮಾವಾಸ್ಯೆ ನಿತ್ಯ ನಕ್ಷತ್ರ :ರೇವತಿ 13 ಗಳಿಗೆಮಹಾ ನಕ್ಷತ್ರ :ರೇವತಿಋತು :ಶಿಶಿರ ರಾಹುಕಾಲ : 7.30-9.00 ಗಂಟೆಗುಳಿಕ ಕಾಲ :1.30-3.00 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.21 ಗಂಟೆ
ಮೇಷ
ಕೃಷಿ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಮನೆಯವರೊಂದಿಗೆ ಚರ್ಚೆ ನಡೆಸಲಿದ್ದೀರಿ. ಯಂತ್ರೋಪಕರಣಗಳ ಸುಸ್ಥಿತಿಯಿಂದಾಗಿ ಕೆಲಸಗಳು ಸುಗಮ. ಮಹಿಳೆಯರಿಗೆ ಉತ್ತಮ ಪ್ರೋತ್ಸಾಹ ದೊರೆಯಲಿದೆ.
ವೃಷಭ
ಸಮಾಜಮುಖಿಯಾದ ಉತ್ತಮ ಕೆಲಸಗಳನ್ನು ಮಾಡಲಿದ್ದೀರಿ. ಸಂಗಾತಿಯಿಂದ ಸಹಕಾರ ದೊರೆಯುವುದರ ಜೊತೆಗೆ ಸಾಮಾಜಿಕ ಗೌರವಾದರಗಳು ಪ್ರಾಪ್ತವಾಗಲಿವೆ.
ಮಿಥುನ
ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿಯಾಗುವವು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಬೇಕಾದುದು ಅನಿವಾರ್ಯ.
ಕಟಕ
ಕೆಲಸ ಕಾರ್ಯಗಳಲ್ಲಿ ಸಹೋದರರಿಂದ ಸಹಕಾರ. ಸಂಸಾರದಲ್ಲಿ ಕಿರಿಕಿರಿಯ ಸಾಧ್ಯತೆ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ. ವಸ್ತ್ರಾಭರಣ ಖರೀದಿ.
ಸಿಂಹ
ಹೆಚ್ಚಿನ ಕೆಲಸದ ಒತ್ತಡದಿಂದಾಗಿ ಮಾನಸಿಕ ಹಿಡಿತ ತಪ್ಪದಂತೆ ತಾಳ್ಮೆ ವಹಿಸುವುದು ಅಗತ್ಯ. ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ.
ಕನ್ಯಾ
ವೃತ್ತಿಯಲ್ಲಿ ಅಮಿತವಾದ ಒತ್ತಡ ಉಂಟಾಗಲಿದ್ದು ತಾಳ್ಮೆಯಿಂದ ವ್ಯವಹರಿಸುವುದು ಅವಶ್ಯಕ. ಆಸ್ತಿ ಖರೀದಿ ವ್ಯವಹಾರವನ್ನು ಮುಂದೂಡುವುದು ಸೂಕ್ತ.
ತುಲಾ
ಸಹೋದ್ಯೋಗಿಗಳೊಂದಿಗೆ ವಿನಾಕಾರಣ ಮನಸ್ತಾಪ. ಮಹಿಳೆಯರಿಂದ ಸಂಪೂರ್ಣ ಸಹಕಾರ. ವಿಶೇಷ ವಸ್ತುಗಳ ಖರೀದಿಯ ಸಾಧ್ಯತೆ.
ವೃಶ್ಚಿಕ
ಸ್ವಂತ ಉದ್ಯಮದಲ್ಲಿರುವವರಿಗೆ ಸ್ಪರ್ಧೆಗಳು ಎದುರಾದರೂ ಅನುಕೂಲ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ದುಡುಕಿನಿಂದಾಗಿ ವಿನಾ ಕಾರಣ ಸಹವರ್ತಿಗಳೊಂದಿಗೆ ಮನಸ್ತಾಪ.
ಧನು
ನಿರುದ್ಯೋಗಿಗಳಿಗೆ ಉದ್ಯೋಗದ ಬಾಗಿಲು ತೆರೆಯಲಿದೆ. ಸರ್ಕಾರದ ಉನ್ನತ ಹುದ್ದೆಯಲ್ಲಿರುವವರಿಗೆ ಬಿಡುವಿಲ್ಲದ ಕಾರ್ಯಕ್ರಮಗಳು. ಬರವಣಿಗೆಯಿಂದ ಕೀರ್ತಿಲಾಭ.
ಮಕರ
ಸಾಮಾಜಿಕ ಸೇವೆಯಿಂದಾಗಿ ಜನಪ್ರಿಯತೆ. ವ್ಯವಹಾರದಲ್ಲಿ ಸೋದರರಿಂದ ಸಹಕಾರ. ದಾಂಪತ್ಯ ಜೀವನವು ಸುಖಮಯ. ಆಕಸ್ಮಿಕ ಪ್ರಯಾಣ. ಮನೆಯಲ್ಲಿ ಸಂತಸ.
ಕುಂಭ
ಶ್ರದ್ಧೆಯಿಂದಾಗಿ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಬಂಧುಗಳೊಂದಿಗಿನ ಸಂಬಂಧ ಗಟ್ಟಿಗೊಳ್ಳಲಿದೆ. ಬಹುಕಾಲದ ಬಯಕೆಗಳು ಈಡೇರುವ ಸಾಧ್ಯತೆ. ದೂರದ ಪ್ರಯಾಣವೊಂದಕ್ಕೆ ಸಂಕಲ್ಪ.
ಮೀನ
ಮಹಿಳೆಯರ ಇಷ್ಟಾರ್ಥಗಳು ನೆರವೇರಲಿವೆ. ಹಮ್ಮಿಕೊಂಡಿರುವ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಅನಿರೀಕ್ಷಿತ ಧನಾಗಮನ ಸಾಧ್ಯತೆ. ಕುಟುಂಬದವರೊಂದಿಗೆ ಧಾರ್ಮಿಕ ಕ್ಷೇತ್ರ ದರ್ಶನ.