
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣಪಕ್ಷ.
ವಾರ : ಮಂಗಳವಾರ, ತಿಥಿ : ದ್ವಿತೀಯ,
ನಕ್ಷತ್ರ : ಚಿತ್ತ,
ರಾಹುಕಾಲ:3.32 ರಿಂದ 5.04
ಗುಳಿಕಕಾಲ :12.28 ರಿಂದ 2.00
ಯಮಗಂಡಕಾಲ:9.24 ರಿಂದ 10.56.
ಮೇಷ
ವ್ಯವಹಾರಗಳಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಮುಂದಿನ ಕಾರ್ಯಯೋಜನೆಗಳ ವಿಚಾರವಾಗಿ ಚಿಂತನೆ. ಶುಭ ಕಾರ್ಯ ನಡೆಸಲು ತಯಾರಿ. ಮನೆಯಲ್ಲಿ ಹಬ್ಬದ ವಾತಾವರಣ.
ವೃಷಭ
ಅನಾವಶ್ಯಕ ಮಾತುಗಳಿಂದಾಗಿ ಉದ್ವೇಗಕ್ಕೊಳಗಾಗುವ ಸಾಧ್ಯತೆ. ವಿಪರೀತ ಖರ್ಚು ಭರಿಸಬೇಕಾದ ಅನಿವಾರ್ಯತೆ ಇದ್ದರೂ, ಆರ್ಥಿಕ ಅನುಕೂಲತೆ. ಧನವನ್ನು ಕೂಡಿಡಲಿದ್ದೀರಿ.
ಮಿಥುನ
ಕಾರ್ಯ ನಿಮಿತ್ತ ಕೈಗೊಂಡ ದೂರದ ಪ್ರಯಾಣದಿಂದಾಗಿ ಅಧಿಕ ಆದಾಯ. ವೆಚ್ಚದ ಮೇಲೆ ಹಿಡಿತದಿಂದಾಗಿ ಉಳಿತಾಯ ಸಾಧಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಬಿಡುವಿನ ದಿನ.
ಕಟಕ
ಕಚೇರಿಯಲ್ಲಿ ಕೆಲಸ ನಿರ್ವಹಿಸುವವರಿಗೆ ಸ್ಥಾನ ಭದ್ರತೆ. ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ನಿರಾಳರಾಗುವಿರಿ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ ಸಾಧ್ಯತೆ.
ಸಿಂಹ
ಅಪೂರ್ವ ವಸ್ತುಗಳನ್ನು ಸಂಗ್ರಹಿಸುವ ಸಾಧ್ಯತೆ. ಮನೆಯ ಅಲಂಕಾರಕ್ಕಾಗಿ ವೆಚ್ಚ. ವಾಹನಗಳ ವ್ಯವಹಾರದಲ್ಲಿ ಉತ್ತಮ ಲಾಭ. ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಯಶಸ್ಸು.
ಕನ್ಯಾ
ಕ್ರೀಡಾಪಟುಗಳು, ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವವರಿಗೆ ಸಾಮರ್ಥ್ಯ ಪ್ರದರ್ಶಿಸುವ ಪೈಪೋಟಿಯ ದಿನವಾಗಲಿದೆ. ಮನೆಯ ವ್ಯವಹಾರಗಳಲ್ಲಿ ತೊಂದರೆಗಳು ದೂರವಾಗಿ ನೆಮ್ಮದಿ ಮೂಡಲಿದೆ.
ತುಲಾ
ಸಮಯವನ್ನು ವ್ಯರ್ಥಮಾಡದೇ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಉತ್ತಮ ಫಲ ಪಡೆಯಲಿದ್ದೀರಿ. ರೇಷ್ಮೆ ಬೆಳೆಗಾರರು ಹಾಗೂ ಉದ್ಯಮದಲ್ಲಿ ತೊಡಗಿರುವವರಿಗೆ ಬಿಡುವಿಲ್ಲದ ದಿನವಾಗುವುದು.
ವೃಶ್ಚಿಕ
ನೂತನ ವ್ಯವಹಾರವನ್ನು ಪ್ರಾರಂಭಿಸುವ ಸಲುವಾಗಿ ಚಿಂತನೆ ನಡೆಸುವಿರಿ. ಮಕ್ಕಳಿಗೆ ಓದಿನಲ್ಲಿ ಆಸಕ್ತಿಯನ್ನು ಪೋಷಿಸುವ ಸಲುವಾಗಿ ಹೆಚ್ಚಿನ ವ್ಯಯ. ಆರೋಗ್ಯ ಉತ್ತಮಗೊಳ್ಳಲಿದೆ.
ಧನು
ಕೃಷಿ ಚಟುವಟಿಕೆಗಳು ಭರದಿಂದ ಸಾಗಲಿವೆ. ಮಕ್ಕಳ ನೆಮ್ಮದಿಗಾಗಿ ಬೊಂಬೆಗಳ ಖರೀದಿ ಸಾಧ್ಯತೆ. ಯುವಕರಿಗೆ ಸಂಶೋಧನಾ ಕ್ಷೇತ್ರದಲ್ಲಿ ನೌಕರಿ ಮಾಡುವ ಅವಕಾಶ ಲಭ್ಯ.
ಮಕರ
ಹೊಸ ವಾಹನ ಖರೀದಿ ಮಾಡಲಿದ್ದೀರಿ. ಮಕ್ಕಳೊಂದಿಗೆ ಆನಂದದಿಂದ ಕಾಲ ಕಳೆಯುವಿರಿ. ಪ್ರಯಾಣದಲ್ಲಿ ಗಣ್ಯ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದೀರಿ. ಹಿಂದಿನ ಸಂತಸದ ಸಮಯವನ್ನು ಮೆಲುಕು ಹಾಕಲಿದ್ದೀರಿ.
ಕುಂಭ
ಹಿರಿಯರ ಮಾತಿನಂತೆ ನಡೆದಲ್ಲಿ ಹೆಚ್ಚಿನ ಸಂಪಾದನೆ. ಪ್ರೀತಿಪಾತ್ರರೊಂದಿಗೆ ವಿಹಾರಾರ್ಥ ಕಾಲ ಕಳೆಯುವ ಸಾಧ್ಯತೆ. ಮನೆಯಲ್ಲಿ ಹಬ್ಬದ ವಾತಾವರಣ. ಸ್ತ್ರೀಯರಿಗೆ ಗೌರವ ಪ್ರಾಪ್ತಿ.
ಮೀನ
ಕಾರ್ಯಕ್ಷೇತ್ರದಲ್ಲಿನ ಸನ್ನಿವೇಶಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವಿರಿ. ಉದಾರ ಮನೋಭಾವದಿಂದ ಸಹಾಯ ಮಾಡಲಿದ್ದೀರಿ. ಸ್ತ್ರೀಯರಿಗೆ ಮನೋಭಿಲಾಷೆ ಈಡೇರಿಲಿದೆ.