
ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಪಾಲ್ಗುಣ ಮಾಸ,
ಕೃಷ್ಣ ಪಕ್ಷ. ವಾರ : ಸೋಮವಾರ,
ತಿಥಿ : ಪಾಡ್ಯ, ನಕ್ಷತ್ರ : ಹಸ್ತ,
ರಾಹುಕಾಲ : 7.53 ರಿಂದ 9.25
ಗುಳಿಕಕಾಲ : 2.00 ರಿಂದ 3.32
ಯಮಗಂಡಕಾಲ : 10.57 ರಿಂದ 12.29
ಮೇಷ
ಮಕ್ಕಳ ಪ್ರತಿಭೆ ಬೆಳಕಿಗೆ ಬಂದು ಅಪಾರ ಸಂತೋಷ ತರಲಿದೆ. ಸತ್ಕಾರ ನಿರ್ವಹಣೆಯಲ್ಲಿ ಧಾರ್ಮಿಕ ಮುಖಂಡರು ಮುಖ್ಯ ಪಾತ್ರ ವಹಿಸಲಿದ್ದಾರೆ. ವೈವಾಹಿಕ ವ್ಯವಹಾರಗಳನ್ನು ಮುಂದೂಡಲಿದ್ದೀರಿ.
ವೃಷಭ
ಶೈಕ್ಷಣಿಕ ವಲಯದಲ್ಲಿ ವಿದ್ಯಾರ್ಥಿಗಳ ಅಪಾರ ಸಾಧನೆ ಗಣನೀಯವಾಗಿ ಹೆಚ್ಚಲಿದೆ. ಸಮಾಜಸೇವೆಯಲ್ಲಿ ಭಾಗಿ. ಹಿರಿಯರಿಂದ ಪ್ರಶಂಸೆ. ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಿರಿ. ಆರೋಗ್ಯದಲ್ಲಿ ಸುಧಾರಣೆ.
ಮಿಥುನ
ಅನಿವಾರ್ಯ ಕಾರಣದಿಂದ ತಿರುಗಾಟ. ಷೇರುಪೇಟೆ, ಹೂಡಿಕೆಗಳಲ್ಲಿ ಉತ್ತಮ ಲಾಭ. ರೇಷ್ಮೆ ನೇಕಾರರಿಗೆ ಉತ್ತಮ ಆದಾಯ. ಹೊಸ ವಸ್ತ್ರ ವಿನ್ಯಾಸಕಾರರು, ಕಲಾವಿದರುಗಳಿಗೆ ಅವಕಾಶಗಳು ಹೆಚ್ಚಲಿದೆ.
ಕಟಕ
ಸತ್ಕಾರ್ಯಗಳನ್ನು ಸರಾಗವಾಗಿ ನೆರವೇರಿಸಲಿದ್ದೀರಿ. ವ್ಯವಹಾರದಲ್ಲಿ ಸಾಧಾರಣ ಲಾಭ. ಉದ್ದೇಶಿತ ಕಾರ್ಯಗಳಿಗೆ ಸಕಾಲದಲ್ಲಿ ಬರಬೇಕಾದ ಹಣ ಬರುವುದರಿಂದ ಅನುಕೂಲ. ಮಹಿಳೆಯರಿಗೆ ಬಿಡುವಿಲ್ಲದ ಕೆಲಸದಿಂದಾಗಿ ದೇಹಾಲಾಸ್ಯ ಉಂಟಾದೀತು.
ಸಿಂಹ
ಬರವಣಿಗೆಯಿಂದ ಉತ್ತಮ ಆದಾಯ. ಕಠಿಣವೆನಿಸಿದ ಕಾರ್ಯಗಳು ಸಹ ಸುಗಮವಾಗಿ ನೆರವೇರುವುದರಿಂದಾಗಿ ನೆಮ್ಮದಿ ಮೂಡಲಿದೆ. ಮನೆಯಲ್ಲಿ ಹಬ್ಬದ ವಾತಾವರಣ. ಧಾರ್ಮಿಕ ಕಾರ್ಯದಲ್ಲಿ ಮಗ್ನರಾಗುವಿರಿ.
ಕನ್ಯಾ
ಅಧಿಕ ಓಡಾಟದ ಸಾಧ್ಯತೆ. ಸುದ್ದಿ ಮಾಧ್ಯಮದಲ್ಲಿ ದುಡಿಯುವವರಿಗೆ ಬಿಡುವಿಲ್ಲದ ಕಾರ್ಯದೊಂದಿಗೆ ಯಶಸ್ಸು ದೊರಕಲಿದೆ. ಎಂಜಿನೀಯರುಗಳಿಗೆ ಧನಲಾಭದೊಂದಿಗೆ ಉನ್ನತ ಸ್ಥಾನದಲ್ಲಿರುವವರಿಂದ ಪ್ರಶಂಸೆ.
ತುಲಾ
ಹಣಕಾಸು ವ್ಯವಹಾರ ನಡೆಸುವವರು ಯೋಜನೆ ವಿಸ್ತರಣೆ ಮಾಡಲು ಉತ್ತಮ ದಿನ. ಸ್ಥಾನದಲ್ಲಿ ಬದಲಾವಣೆ. ಸಂಪರ್ಕ, ಸಂವಹನ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರಿಗೆ ಗೌರವಾದರ ದೊರಕಲಿವೆ. ಹಣ ವ್ಯಯ.
ವೃಶ್ಚಿಕ
ಕೋರ್ಟ್ ಕಚೇರಿಗಳಲ್ಲಿನ ಕೆಲಸಗಳಲ್ಲಿ ಯಶಸ್ಸು. ಅಪೇಕ್ಷಿತರಿಗೆ ಸಂತಾನ ಪ್ರಾಪ್ತಿ. ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಲಾಭ. ಮಂಗಳ ಕಾರ್ಯಗಳು ಜರುಗುವವು. ಆರೋಗ್ಯದಲ್ಲಿ ಸುಧಾರಣೆ.
ಧನು
ಕಬ್ಬಿಣ, ಸಿಮೆಂಟ್ ಮುಂತಾದ ಕಟ್ಟೋಣ ಸಾಮಗ್ರಿಗಳ ವ್ಯಾಪಾರಸ್ಥರಿಗೆ ಒಳ್ಳೆಯ ಆದಾಯ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗುವವು. ಕೆಲಸಕಾರ್ಯಗಳು ನಿರ್ವಿಘ್ನದಾಯಕವಾಗಿ ಸಾಗುವವು.
ಮಕರ
ನಿಮ್ಮ ಬಯಕೆಗಳು ಈಡೇರುವ ದಿನವಾಗಲಿದೆ. ಹಣಕಾಸಿನ ಅನುಕೂಲತೆಗಳು ಕೂಡಿಬರಲಿವೆ. ವಿದೇಶ ಪ್ರಯಾಣ ಮಾಡುವ ಸಾಧ್ಯತೆ. ವಿವಾಹಾಪೇಕ್ಷಿತರಿಗೆ ಅನುರೂಪ ಸಂಗಾತಿಯು ದೊರಕಿ ನಿಶ್ಚಯವಾಗಲಿದೆ.
ಕುಂಭ
ವ್ಯಾಪಾರಿಗಳಿಗೆ ಉತ್ತಮ ಲಾಭ. ಕೃಷಿಕರಿಗೆ ಉತ್ತಮ ಆದಾಯ. ಸರಕಾರಿ ನೌಕರರಿಗೆ ಇತರೆ ಮೂಲಗಳಿಂದ ಅಧಿಕ ಆದಾಯ. ಆದಾಯಕ್ಕಿಂತ ವೆಚ್ಚ ಅಧಿಕವಾಗುವ ಸಾಧ್ಯತೆ. ಕಳ್ಳ ಕಾಕರ ಹಾಗೂ ಅಗ್ನಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
ಮೀನ
ಐಶ್ವರ್ಯ ವೃದ್ಧಿಸುವುದು. ಅವಿವಾಹಿತರಿಗೆ ವಿವಾಹ ಯೋಗ. ಅಪೇಕ್ಷಿತರಿಗೆ ಸಂತಾನ ಪ್ರಾಪ್ತಿ. ವೈದ್ಯಕೀಯ ವೆಚ್ಚ ಭರಿಸಬೇಕಾದೀತು. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದ್ದೀರಿ.