
ದಿನಾಂಕ :Tuesday, 23 Feb 2021. ಶಾರ್ವರಿ ಸಂ|ರದ ಕುಂಭ ಮಾಸ ದಿನ 11 ಸಲುವ ಮಾಘ ಶುದ್ಧ ಏಕಾದಶಿ 28 ಗಳಿಗೆದಿನ ವಿಶೇಷ :ಸರ್ವೈಕಾದಶಿನಿತ್ಯ ನಕ್ಷತ್ರ :ಆರ್ದ್ರಾ 14 ಗಳಿಗೆಮಹಾ ನಕ್ಷತ್ರ :ಶತಭಿಷಾಋತು :ಶಿಶಿರರಾಹುಕಾಲ :3.00-4.30 ಗಂಟೆಗುಳಿಕ ಕಾಲ :12.00-1.30 ಗಂಟೆಸೂರ್ಯಾಸ್ತ :6.36 ಗಂಟೆಸೂರ್ಯೋದಯ :6.53 ಗಂಟೆ
ಮೇಷ
ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ನಿರೀಕ್ಷಿತವಾದ ಕಾರ್ಯ ಸಿದ್ಧಿಯಾಗಿ ಲಾಭ ದೊರಕಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಲಿದೆ. ಆರೋಗ್ಯದಲ್ಲಿ ಸುಧಾರಣೆ.
ವೃಷಭ
ರಾಜಕೀಯ ಕ್ಷೇತ್ರದಲ್ಲಿರುವವರಿಗೆ ನಿರೀಕ್ಷಿತ ಕೆಲಸಗಳು ಉತ್ತಮ ಫಲ ನೀಡುವುದರೊಂದಿಗೆ ಹಣಕಾಸಿನ ಅನುಕೂಲತೆಗಳು ದೊರಕಲಿದೆ. ಶುಭದ ಆಶಾಕಿರಣ ಮೂಡಿಬರಲಿದೆ. ಬಂಧುಗಳಿಂದ ಉತ್ತಮ ಸಹಕಾರ ದೊರಕಲಿದೆ.
ಮಿಥುನ
ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರಗತಿ ನಿರೀಕ್ಷಿಸಬಹುದು. ಭವಿಷ್ಯಕ್ಕೆ ಸಂಬಂಧಿಸಿದ ಹಲವಾರು ಉತ್ತಮ ಮಾರ್ಗಗಳು ಗೋಚರವಾಗಲಿವೆ. ದೀರ್ಘಕಾಲದಿಂದ ಚಿಂತಿಸುತ್ತಿರುವ ಕಾರ್ಯವೊಂದು ಕಾರ್ಯರೂಪಕ್ಕೆ ಬರಲಿದೆ. ಸಮಾಧನ ಚಿತ್ತದಿಂದ ವ್ಯವಹರಿಸುವುದು ಉತ್ತಮ.
ಕಟಕ
ಬ್ಯಾಂಕ್, ಸಹಕಾರ ಕ್ಷೇತ್ರಗಳಲ್ಲಿ ದುಡಿಯುವವರಿಗೆ ಉತ್ತಮ ಸಹಕಾರ ದೊರಕಲಿದೆ. ಕಾರ್ಯಕ್ಷೇತ್ರದಲ್ಲಿ ಅನಿರೀಕ್ಷಿತ ಪ್ರಶಂಸೆಗಳು ನಿಮ್ಮ ಪಾಲಿಗೆ ಬರಲಿವೆ. ಮಹಿಳೆಯರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯದ ಸಾಧ್ಯತೆ.
ಸಿಂಹ
ಹೊಸದಾಗಿ ಆರಂಭಿಸುವ ಕೆಲಸ ಕಾರ್ಯಗಳು ನಿರ್ವಿಘ್ನದಾಯಕವಾಗಿ ನಡೆಯಲಿದ್ದು ಉತ್ತಮ ಫಲಿತಾಂಶ ನೀಡಲಿದೆ. ವಿದ್ಯಾರ್ಥಿಗಳಿಗೆ ಅದೃಷ್ಟ ಒಲಿದು ಬರಲಿದೆ. ಮನೋರಂಜನೆಗಾಗಿ ಹೆಚ್ಚಿನವೆಚ್ಚ ಭರಿಸಬೇಕಾದೀತು.
ಕನ್ಯಾ
ವ್ಯಾಪಾರದಲ್ಲಿ ಲಾಭ ಹೊಂದಲಿದ್ದೀರಿ. ಮನಸ್ಸಿಗೆ ನೆಮ್ಮದಿ. ಕೆಲಸ ಕಾರ್ಯಗಳಲ್ಲಿ ಮುನ್ನಡೆ ಹಾಗೂ ಯಶಸ್ಸು ನಿಮ್ಮದಾಗಲಿದೆ. ಆರ್ಥಿಕ ಸಂಪನ್ಮೂಲಗಳನ್ನು ಹುಡುಕುವ ಭರದಲ್ಲಿ ಎಚ್ಚರಿಕೆಯ ನಡೆ ಅಗತ್ಯ.
ತುಲಾ
ನಿಮ್ಮ ಪಾಲಿನ ಕೆಲಸ ಕಾರ್ಯಗಳು ಸರಾಗವಾಗಿ ನಿರ್ವಹಣೆಯಾಗಲಿದೆ. ದೂರದೂರುಗಳಿಗೆ ಪ್ರಯಾಣ ಸಾಧ್ಯತೆ. ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ. ಮಕ್ಕಳ ನಡವಳಿಕೆಗಳ ಬಗ್ಗೆ ಗಮನ ಅಗತ್ಯ ಎನಿಸುತ್ತಿದೆ.
ವೃಶ್ಚಿಕ
ಆರ್ಥಿಕ ಸ್ಥಿರತೆಯಿಂದಾಗಿ ನೆಮ್ಮದಿ. ನೆರೆಹೊರೆಯವರೊಂದಿಗೆ ಮಧುರ ಬಾಂಧವ್ಯ. ವಿದೇಶದಲ್ಲಿರುವ ಕುಟುಂಬದಿಂದ ಸುವಾರ್ತೆ. ಮಾತೃವರ್ಗದವರ ಸಮಾಗಮ.
ಧನು
ವೈವಾಹಿಕ ವ್ಯವಹಾರಗಳಲ್ಲಿ ಬಂಧು ಮನ್ನಣೆ ದೊರಕಲಿದೆ. ವೈಯಕ್ತಿಕ ಬದುಕಿನಲ್ಲಿ ಹಿತಕರ ಬದಲಾವಣೆ ಕಂಡುಬರಲಿದೆ. ಸಾಮಾಜಿಕ ಬದುಕು ಸರಾಗ. ವಿದ್ಯಾರ್ಥಿಗಳಿಗೆ ಹುಮ್ಮಸ್ಸು ತರುವಂತಹ ವಾತಾವರಣ ಮೂಡಲಿದೆ.
ಮಕರ
ಉದ್ಯೋಗದಲ್ಲಿ ಒಳ್ಳೆಯ ಹೆಸರು. ದೂರದ ಊರಿಗೆ ವರ್ಗಾವಣೆ ಸಾಧ್ಯತೆ. ಮನೆ ನಿರ್ಮಾಣಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡುಕೊಳ್ಳುವಿರಿ.
ಕುಂಭ
ರಚನಾತ್ಮಕ ಕಾರ್ಯಕ್ರಮಗಳಿಗೆ ವೆಚ್ಚ ಭರಿಸಬೇಕಾದೀತು. ಅಣ್ಣನ ಸಹಕಾರದಿಂದ ನೆಮ್ಮದಿ ಹೊಂದಲಿದ್ದೀರಿ. ಸ್ವತ್ತು ವ್ಯವಹಾರಗಳ ಬಗ್ಗೆ ಸೋದರರೊಡನೆ ಚರ್ಚೆ ಮಾಡಲಿದ್ದೀರಿ. ಕುಟುಂಬದಲ್ಲಿ ಆರೋಗ್ಯಕರ ಬದಲಾವಣೆ.
ಮೀನ
ಪುತ್ರ ಸಮಸ್ಯೆ ಪರಿಹಾರ ಮಾನಸಿಕ ಶಾಂತಿ ದೊರಕಲಿದೆ. ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮ. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಮಹಿಳೆಯರ ಮಾನಸಿಕ ನೆಮ್ಮದಿ ಕದಡುವ ಪ್ರಸಂಗ ಎದುರಾದೀತು.