
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ.
ವಾರ: ಸೋಮವಾರ, ತಿಥಿ : ದಶಮಿ,
ನಕ್ಷತ್ರ: ಮೃಗಶಿರಾ,
ರಾಹುಕಾಲ: 8.12 ರಿಂದ 9.40
ಗುಳಿಕಕಾಲ: 2.06 ರಿಂದ 3.34
ಯಮಗಂಡಕಾಲ: 11.09 ರಿಂದ 12.37
ಮೇಷ
ಹಿತೈಷಿಗಳ ಭೇಟಿ ಸಾಧ್ಯತೆ. ವ್ಯಪಾರದಲ್ಲಿ ಲಾಭ. ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಉತ್ತಮ ನೆರವು. ದಿನದ ಮಟ್ಟಿಗೆ ಪ್ರಯಾಣ ಸುಖನೀಡಲಾರದು. ಸ್ತ್ರೀಯರ ಇಷ್ಟಾರ್ಥಗಳು ನೆರವೇರಲಿವೆ.
ವೃಷಭ
ಉದ್ಯೋಗದಲ್ಲಿ ಸ್ಥಾನ ಅಥವಾ ಹುದ್ದೆಯಲ್ಲಿ ಬದಲಾವಣೆ ಕುರಿತು ಹಿರಿಯರೊಂದಿಗೆ ಚರ್ಚಿಸಿಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಸುದ್ದಿ ಕೇಳಿಬರಲಿದೆ. ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಿ
ಮಿಥುನ
ದೂರದೂರಿಗೆ ಪ್ರಯಾಣ. ಸಾಮಾಜಿಕ ಗೌರವಕ್ಕೆ ಪಾತ್ರರಾಗಲಿದ್ದೀರಿ. ವ್ಯಾಪಾರದಲ್ಲಿ ಲಾಭದ ನಿರೀಕ್ಷೆ. ಮನಸ್ಸಿಗೆ ನೆಮ್ಮದಿ
ಕಟಕ
ಕುಟುಂಬದ ಜಟಿಲ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ ಪ್ರಶಂಸೆಗೆ ಪಾತ್ರರಾಗುವಿರಿ. ಅಧಿಕ ಧನಾಗಮನ. ಬಂಧುಗಳ ಸತ್ಕಾರಕ್ಕಾಗಿ ಅಪಾರ ವೆಚ್ಚ ಭರಿಸಬೇಕಾದೀತು.
ಸಿಂಹ
ಉತ್ತಮ ದುಡಿಮೆ ಮಾಡಿದ್ದೀರಿ. ನಿತ್ಯದ ಕೆಲಸಗಳಿಂದ ತುಸು ವಿಶ್ರಾಂತಿ ಅಗತ್ಯ. ಪ್ರೀತಿಪಾತ್ರರು ಹಾಗೂ ಗೆಳೆಯರ ಜೊತೆ ಸಂತಸದ ಸಮಯ ಕಳೆಯಲಿದ್ದೀರಿ. ಹಿತೈಶಿಗಳ ಆಗಮನ ಸಂತಸ.
ಕನ್ಯಾ
ದಾರ್ಶನಿಕ ಸಂತರ ಸಮಾಗಮದಿಂದ ಆಧ್ಯಾತ್ಮ ಜೀವನಕ್ಕೆ ಹೊಸ ಆಯಾಮ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ. ವೈಕಕ್ತಿಕ ಸಮಸ್ಯೆ ಬಗೆಹರಿದು ಮನೋಲ್ಲಾಸ ಮೂಡಲಿದೆ.
ತುಲಾ
ಸಾಮಾಜಿಕ ಕಾರ್ಯ ಚಟುವಟಿಕೆ, ಮನರಂಜನೆ, ಸಪತ್ನಿಕರಾಗಿ ಭೋಜನ ಕೂಟಗಳಲ್ಲಿ ಭಾಗವಹಿಸಲಿದ್ದೀರಿ. ದೈವರಕ್ಷೆ ಇರುವುದರಿಂದ ಯಶಸ್ಸು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ.
ವೃಶ್ಚಿಕ
ಸನ್ಮಾರ್ಗದಲ್ಲಿ ಸಾಗುವುದರಿಂದ ಕುಟುಂಬ ಬಾಧ್ಯತೆಗಳ ನಿರ್ವಹಣೆ ಸರಾಗ. ಅವಿವಾಹಿತರಿಗೆ ಸಂಬಂಧಗಳು ಕೂಡಿಬರಲಿದೆ. ಮನೆಯವರೊಂದಿಗೆ ಸಂಬಂಧ ಉತ್ತಮಗೊಳ್ಳಲಿದೆ.
ಧನು
ಕಲಾವಿದರಿಗೆ ಹೆಚ್ಚಿನ ಸ್ಥಾನಮಾನ ಲಭ್ಯ. ಕೃಷಿ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಆದಾಯ. ಆಸ್ತಿ ಖರೀದಿಯ ಸಾಧ್ಯತೆ. ಕೆಲಸ ಕಾರ್ಯಗಳನ್ನು ವಿಶ್ವಾಸದಿಂದ ಮಾಡಿ.
ಮಕರ
ಬಾಧ್ಯತೆಗಳ ನಿರ್ವಹಣೆಯಲ್ಲಿ ಸ್ಪಷ್ಟ ನಿಲುವು. ಸಂಶೋಧನೆಗೆ ಪ್ರೋತ್ಸಾಹ ದೊರಕುವ ಸಾಧ್ಯತೆ. ಬರವಣಿಗೆಯಲ್ಲಿ ನಿರತರಾದವರಿಗೆ ದ್ರವ್ಯಾನುಕೂಲ. ವೈವಾಹಿಕ ವ್ಯವಹಾರಗಳಿಗೆ ಚಾಲನೆ ದೊರಕಲಿದೆ.
ಕುಂಭ
ಕಾರ್ಯಕ್ಷೇತ್ರದಲ್ಲಿ ಅನೇಕ ರೀತಿಯ ಸಂಪರ್ಕ ಸ್ನೇಹ ವಿಶ್ವಾಸಗಳು ಮೂಡಿ ಮುನ್ನಡೆಗೆ ನಾಂದಿಯಾಗಲಿದೆ. ವೃತ್ತಿರಂಗದಲ್ಲಿ ಗುರಿ ಸಾಧನೆಗೆ ಹೊಸ ಹಾದಿಯನ್ನು ಕ್ರಮಿಸಬೇಕಾದೀತು. ನಿರಾಶರಾಗದೆ ಮುನ್ನುಗ್ಗಿ.
ಮೀನ
ವಾಹನ ವಹಿವಾಟುಗಳಲ್ಲಿ ನಿರೀಕ್ಷೆಯಂತೆ ಲಾಭ. ಔದ್ಯೋಗಿಕ ವಿಷಯಗಳಲ್ಲಿ ಅನುಕೂಲ. ವಿವಾಹ ಸಂಬಂಧಿ ಮಾತುಕತೆಗಳು ಅನುಕೂಲಕರವಾಗಿ ಪರಿಣಮಿಸಲಿವೆ.