
15 -2-2021 ಸೋಮವಾರ ಶಾರ್ವರಿ ಸಂ|ರದ ಕುಂಭ ಮಾಸ ದಿನ 3 ಸಲುವ ಮಾಘ ಶುದ್ಧ ಚೌತಿ 51|||ಗಳಿಗೆದಿನ ವಿಶೇಷ :ಕೆಮ್ಮಣ್ಣು ರಥನಿತ್ಯ ನಕ್ಷತ್ರ :ಉತ್ತರಾಭಾದ್ರಾ 29 ಗಳಿಗೆಮಹಾ ನಕ್ಷತ್ರ :ಧನಿಷ್ಠಾಋತು :ಶಿಶಿರರಾಹುಕಾಲ :7.30-9.00 ಗಂಟೆಗುಳಿಕ ಕಾಲ :1.30-3.00 ಗಂಟೆಸೂರ್ಯಾಸ್ತ :6.34 ಗಂಟೆಸೂರ್ಯೋದಯ :6.57 ಗಂಟೆ
ಮೇಷ
ಉನ್ನತ ಅಧಿಕಾರಿಗಳ ಬೆಂಬಲದಿಂದ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಿದ್ದೀರಿ. ಮೇಲ್ದರ್ಜೆ ಗುತ್ತಿಗೆದಾರರಿಗೆ ಉತ್ತಮ ಕಾಮಗಾರಿ ದೊರಯಲಿದೆ.
ವೃಷಭ
ಹಿರಿಯರ ಆಸೆ ಪೂರೈಸುವ ಸಲುವಾಗಿ ತೀರ್ಥಯಾತ್ರೆಗೆ ಕಳುಹಿಸುವ ಸಂಕಲ್ಪ. ರಾಜಕೀಯ ಧುರೀಣರೊಬ್ಬರ ಸಹಕಾರದಿಂದ ಮಹತ್ತರ ಕೆಲಸವೊಂದನ್ನು ಮಾಡಿಸಿಕೊಳ್ಳಲಿದ್ದೀರಿ. ವ್ಯಾಪಾರದಿಂದಾಗಿ ಅಧಿಕ ಲಾಭ.
ಮಿಥುನ
ಕೆಲಸ ಕಾರ್ಯಗಳು ನಿಧಾನವಾಗಿ ಆದರೂ ಒಂದೇರೀತಿಯ ಪ್ರಗತಿಯಲ್ಲಿರುವವು. ಮಕ್ಕಳ ಓದಿನ ಬಗ್ಗೆ ಅತೀವ ಕಾಳಜಿ ವಹಿಸಲಿದ್ದೀರಿ. ಮನೆಯ ಮಂದಿಯ ಬಗ್ಗೆ ವೈದ್ಯಕೀಯ ವೆಚ್ಚವನ್ನು ಭರಿಸಬೇಕಾದೀತು.
ಕಟಕ
ಸಂಶೋಧನಾ ಕ್ಷೇತ್ರದಲ್ಲಿ ಇರುವವರಿಗೆ ಪ್ರಸಿದ್ಧಿಯ ಗರಿ ಮುಡಿಗೇರಲಿದೆ. ಪಾರಮಾರ್ಥಿಕ ವಿಚಾರಗಳು ಮನಸ್ಸಿನಲ್ಲಿ ಮೂಡಲಿವೆ. ಸುಬ್ರಹ್ಮಣ್ಯ ದೇವರ ದರ್ಶನ ಸಾಧ್ಯತೆ.
ಸಿಂಹ
ನಿಮ್ಮ ಮಾತಿಗೆ ಈಗ ಹೆಚ್ಚಿನ ಮಹತ್ವ ಬರುವುದರಲ್ಲಿ ಸಂಶಯವಿಲ್ಲ. ಆತ್ಮೀಯರೊಬ್ಬರಿಗೆ ಶಿಫಾರಸು ನಡೆಸಿ ಬದುಕಿನ ದಾರಿ ಕಲ್ಪಿಸಿಕೊಡುವಿರಿ. ಸಂಬಂಧಗಳು ಗಟ್ಟಿಗೊಳ್ಳಲಿವೆ.
ಕನ್ಯಾ
ಪುಸ್ತಕ ಪ್ರಕಾಶಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೀರಿ. ಸ್ಟೇಷನರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ನೆರೆಯವರೊಂದಿಗಿನ ಸಂಬಂಧ ವೃದ್ಧಿ. ಕುಟುಂಬಕ್ಕೆ ಹೊಸಬರೊಬ್ಬರ ಆಗಮನ ಸಾಧ್ಯತೆ.
ತುಲಾ
ಸಾಮರ್ಥ್ಯಕ್ಕೆ ತಕ್ಕುದಾದ ಉದ್ಯೋಗ ದೊರಕಲಿದೆ. ಮಹಿಳೆಯರ ವಿಚಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯವೆನಿಸಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಬೇಕಾದೀತು. ದೇವತಾ ದರ್ಶನದಿಂದ ನೆಮ್ಮದಿ.
ವೃಶ್ಚಿಕ
ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುವ ಅವಕಾಶ. ಹಿರಿಯ ಅಧಿಕಾರಿಗಳೊಂದಿಗಿನ ಸಂಬಂಧ ಉತ್ತಮಗೊಳ್ಳಲಿದೆ. ಪದೋನ್ನತಿಯ ವಿಚಾರ ಪ್ರಸ್ತಾಪವಾಗಿ ಸಂತಸ ಮೂಡಲಿದೆ.
ಧನು
ಸಹೋದರನಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಮನೆಯಲ್ಲಿ ಸಂಭ್ರಮ ಮನೆಮಾಡಲಿದೆ. ನೆರೆಯವರೊಂದಿಗೆ ಕಾಲಹರಣ ಮಾಡಬೇಕಾದೀತು. ಮನಸ್ಸಿಗೆ ನೆಮ್ಮದಿ ಮೂಡಿಬರಲಿದೆ.
ಮಕರ
ಚಿನ್ನಾಭರಣಗಳನ್ನು ಖರೀದಿಸುವ ಸಾಧ್ಯತೆ. ತಾಂತ್ರಿಕ ಪರಿಣತರಿಗೆ ಮಾಧ್ಯಮಗಳ ಕೆಲಸ ಕಾರ್ಯಗಳು ದೊರೆತು ಉತ್ತಮ ಆದಾಯ ದೊರಕಲಿದೆ. ಪ್ರಚಾರ ಸಾಮಗ್ರಿ ತಯಾರಕರಿಗೆ ಅಮಿತ ಆದಾಯ.
ಕುಂಭ
ನೇತ್ರ ಸಂಬಂಧಿ ವ್ಯಾಧಿಗಳಿಂದ ಮುಕ್ತರಾಗಲಿದ್ದೀರಿ. ಮಕ್ಕಳ ವ್ಯವಹಾರಗಳಲ್ಲಿ ಭಾಗಿಯಾಗುವ ಸಾಧ್ಯತೆ. ಮನೆಯವರೊಂದಿಗೆ ನೆಮ್ಮದಿಯ ದಿನವನ್ನಾಗಿಸಿಕೊಳ್ಳುವಿರಿ. ಉತ್ತಮ ಆರೋಗ್ಯ ಭಾಗ್ಯ.
ಮೀನ
ಕಛೇರಿಯ ಸಹೋದ್ಯೋಗಿಗಳಿಂದ ಪ್ರಶಂಸೆಯ ಮಾತುಗಳೊಂದಿಗೆ ಭೋಜನ ಕೂಟದಲ್ಲಿ ಭಾಗಿಯಾಗುವಿರಿ. ಸರ್ಕಾರದಿಂದ ಬರಬೇಕಾದ ಹಣ ಕೈ ಸೇರುವ ನಿರೀಕ್ಷೆ. ವೃದ್ಧಾಪ್ಯದ ಸಂಕಟಗಳು ಎದುರಾಗುವ ಸಾಧ್ಯತೆ.