
ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯನ,
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣಪಕ್ಷ, ತಿಥಿ: ಏಕಾದಶಿ
ವಾರ: ಭಾನುವಾರ, ನಕ್ಷತ್ರ : ಜೇಷ್ಠ,
ರಾಹುಕಾಲ: 5.00 ರಿಂದ 6.27
ಗುಳಿಕಕಾಲ: 3.32 ರಿಂದ 5.00
ಯಮಗಂಡಕಾಲ: 12.37 ರಿಂದ 2.05
ಮೇಷ
ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ತಂದೆಯವರೊಡನೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ. ತೀರ್ಥ ಕ್ಷೇತ್ರಗಳ ಪ್ರವಾಸ ಹೊರಡಲು ಮಕ್ಕಳು ನಿಮಗೆ ನೆರವಾಗಲಿದ್ದಾರೆ.
ವೃಷಭ
ರಾಜಕೀಯ ವ್ಯಕ್ತಿಗಳಿಗೆ ಚಟುವಟಿಕೆಯ ದಿನ. ಪ್ರಯಾಣದಿಂದ ಲಾಭಗಳಿಸುವಿರಿ. ಮುಖ್ಯವಾದ ಕೆಲಸವೊಂದಕ್ಕೆ ಸಲಹೆ ಪಡೆಯಲು ಪ್ರಸಿದ್ಧ ವ್ಯಕ್ತಿಯೊಬ್ಬರನ್ನು ಸಂದರ್ಶಿಸಬೇಕಾದೀತು. ರಾಜಕೀಯ ಸ್ಥಿತ್ಯಂತರ.
ಮಿಥುನ
ಕೆಲಸ ಕಾರ್ಯಗಳನ್ನು ಸುಲಭವಾಗಿ ಪೂರ್ತಿಗೊಳಿಸುವಿರಿ. ಇಷ್ಟದೇವರ ಸೇವೆಯಿಂದ ಕಷ್ಟಗಳೆಲ್ಲವೂ ಪರಿಹಾರ. ಬಂಧುಗಳಿಂದ ಸಹಾಯ ಸಹಕಾರಗಳು ದೊರಕಲಿವೆ.
ಕಟಕ
ಶುಭ ಸುದ್ದಿಯೊಂದನ್ನು ಕೇಳುವ ಭಾಗ್ಯ ನಿಮ್ಮದಾಗಲಿದೆ. ಮನಸ್ಸಿಗೆ ಮುದ ನೀಡುವ ಘಟನಾವಳಿಗಳು ಸಂಭವಿಸುವವು. ಔಷಧ ವ್ಯಾಪಾರದಲ್ಲಿ ತೊಡಗಿದವರಿಗೆ ಉತ್ತಮ ಲಾಭ. ದೃಢ ನಿರ್ಧಾರ ಕೈಗೊಳ್ಳುವುದರಿಂದ ಯಶಸ್ಸು.
ಸಿಂಹ
ವೃತ್ತಿ ಜೀವನಕ್ಕೆ ಬಹಳ ಅವಶ್ಯಕವಾದ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೀರಿ. ನಿಮ್ಮ ನಿಲುವುಗಳನ್ನು ಬದಲಾಯಿಸದೇ ಸಮರ್ಥಿಸಿಕೊಳ್ಳುವುದು ಉತ್ತಮ. ಮಹಿಳೆಯರಿಗೆ ಮಾನಸಿಕ ಕಿರಿಕಿರಿ ಉಂಟಾಗುವ ಸಾಧ್ಯತೆ.
ಕನ್ಯಾ
ನಿಮ್ಮ ಕೆಲಸಗಳ ಬಗೆಗೆ ಹೆಚ್ಚಿನ ಆದ್ಯತೆಯೊಂದಿಗೆ ನಿಗಾವಹಿಸುವುದು ಒಳಿತು. ಬಿಡುವಿಲ್ಲದ ಕೆಲಸದಿಂದ ಸ್ವಲ್ಪಮಟ್ಟಿನ ಬಿಡುವನ್ನು ಹೊಂದಲಿದ್ದೀರಿ. ಕುಟುಂಬದವರೊಂದಿಗೆ ಆರಾಮದಾಯಕ ದಿನವನ್ನಾಗಿ ಕಳೆಯುವಿರಿ.
ತುಲಾ
ಕಛೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಂತಸದಿಂದ ಕಾಲಕಳೆಯುವಿರಿ. ಕೂಡಿಟ್ಟ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವ್ಯಯಿಸಬೇಕಾದೀತು. ಚಿಂತಿಸಬೇಕಾದ ಅಗತ್ಯವಿಲ್ಲ.
ವೃಶ್ಚಿಕ
ಆಯಾಸ ಕಡಿಮೆಯಾಗುವ ಜೊತೆಗೆ ಆಸ್ಪತ್ರೆಯ ಅಲೆದಾಟ ಮುಕ್ತಾಯವಾಗುವ ಸಾಧ್ಯತೆ. ಮಕ್ಕಳ ಒತ್ತಾಸೆ ಮೇರೆಗೆ ವಾಹನ ಖರೀದಿಯನ್ನು ಮಾಡಲಿದ್ದೀರಿ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಅತ್ಯಂತ ಲಾಭದಾಯಕ ದಿನ.
ಧನು
ಆದಾಯ ಹೆಚ್ಚಿಸಿಕೊಳ್ಳುವ ಮೂಲವೊಂದನ್ನು ಕಂಡುಕೊಳ್ಳಲಿದ್ದೀರಿ. ಹಿರಿಯರ ಮಧ್ಯಸ್ಥಿಕೆಯಿಂದಾಗಿ ಮನೆಯ ವಿಚಾರಗಳನ್ನು ಬಗೆಹರಿಸಿಕೊಳ್ಳುವಿರಿ. ಆರೋಗ್ಯದಲ್ಲಿ ಸುಧಾರಣೆ. ವಿವಾಹ ಸಂಬಂಧದ ಮಾತುಕತೆ ನಡೆಸುವ ಸಾಧ್ಯತೆ.
ಮಕರ
ಸಗಟು ವ್ಯಾಪಾರಿಗಳಿಗೆ ಉತ್ತಮ ಲಾಭದ ದಿನವಾಗಲಿದೆ. ಮನೆಯಲ್ಲಿ ವಿವಾಹ ಸಿದ್ಧತೆಗಳನ್ನು ಭರದಿಂದ ಮಾಡಿಕೊಳ್ಳಬೇಕಾದ ಸಾಧ್ಯತೆ ಕಂಡುಬರುತ್ತಿದೆ. ಬಂಧುಗಳೊಂದಿಗೆ ತೀರ್ಥಯಾತ್ರೆ ಪ್ರಸ್ತಾಪ ಮಾಡಲಿದ್ದೀರಿ.
ಕುಂಭ
ಹಣಕಾಸು ಸಂಸ್ಥೆಗಳ ನೆರವಿನಿಂದ ಸ್ವಂತ ಉದ್ದಿಮೆ ಪ್ರಾರಂಭಿಸುವ ಯೋಜನೆ ಕೈಗೂಡುವುದು. ಹೆತ್ತವರ ಹಾರೈಕೆ ಮತ್ತು ದೇವರ ಆಶೀರ್ವಾದ ಪಡೆಯಲಿದ್ದೀರಿ. ದಿನವಿಡೀ ಸಂಗಾತಿಯೊಂದಿಗೆ ಸಂತೋಷದಿಂದ ಕಾಲಕಳೆಯಲಿದ್ದೀರಿ.
ಮೀನ
ಖರ್ಚು ವೆಚ್ಚಗಳ ಮೇಲೆ ಬಿಗಿಯಾದ ಹಿಡಿತ ಅನಿವಾರ್ಯವಾಗಿರುವುದು. ಮಹಿಳೆಯರ ಆಶೋತ್ತರಗಳು ಈಡೇರಲಿವೆ. ಸಂದರ್ಭಕ್ಕೆ ಅನುಗುಣವಾಗಿ ವರ್ತಿಸುವ ತೀರ್ಮಾನ ಕೈಗೊಳ್ಳುವಿರಿ.