
ಶಾರ್ವರಿ ಸಂ|ರದ ಮಕರ ಮಾಸ ದಿನ 17 ಸಲುವ ಪೌಷ ಬಹುಳದಿನ ವಿಶೇಷ :ಸಂಕಷ್ಟಹರ ಚತುರ್ಥಿ (ಚ.ಉ.ಗಂ. 9.03) ತದಿಗೆ 33|| ಗಳಿಗೆನಿತ್ಯ ನಕ್ಷತ್ರ :ಮಖಾ 45||| ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :4.30-6.00 ಗಂಟೆಗುಳಿಕ ಕಾಲ :3.00-4.30 ಗಂಟೆಸೂರ್ಯಾಸ್ತ :6.29 ಗಂಟೆಸೂರ್ಯೋದಯ :7.00 ಗಂಟೆ
ಮೇಷ
ಅಧ್ಯಯನ ಹೆಚ್ಚಿನ ಆಸಕ್ತಿ ವಹಿಸುವಿರಿ. ವೃತ್ತಿಯಲ್ಲಿ ಕಿರಿಕರಿಯನ್ನು ಅನುಭವಿಸಬೇಕಾದ ಅನಿವಾರ್ಯತೆ ತಲೆದೋರಲಿದೆ. ಅತಿಯಾದ ಕಾರ್ಯಬಾಹಳ್ಯ ಉಂಟಾಗುವ ಸಾಧ್ಯತೆ. ಕೆಲಸದ ಒತ್ತಡದಿಂದಾಗಿ ದುಗುಡ ಉಂಟಾದೀತು. ಹಿರಿಯರ ಮಾತನ್ನು ಕಡೆಗಣಿಸದಿರುವುದು ಒಳಿತು.
ವೃಷಭ
ಬಹುದಿನಗಳಿಂದ ನೆನೆಗುದಿಗೆ ಬಿದ್ದ ವಿವಾದವೊಂದು ನಿರ್ಣಯ ಕಾಣಲಿದೆ. ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳುವಿರಿ. ಉಪಾಧ್ಯಾಯ ವೃತ್ತಿಯಲ್ಲಿರುವವರಿಗೆ ಗೌರವಾದರಗಳು ದೊರೆಯಲಿವೆ. ಕಬ್ಬಿಣ ವಾ ಲೋಹ ವ್ಯಾಪಾರಿಗಳಿಗೆ ಹೆಚ್ಚಿನ ಲಾಭದ ನಿರೀಕ್ಷೆ.
ಮಿಥುನ
ವೃತ್ತಿಯಲ್ಲಿ ಯಶಸ್ಸು ಕಾಣಲಿದ್ದೀರಿ. ಆರೋಗ್ಯದ ಬಗ್ಗೆ ಗಮನವಿರಲಿ. ಬಡವರಿಗೆ ಧಾನ್ಯಗಳನ್ನು ದಾನ ಮಾಡುವುದರಿಂದ ಸಂತೃಪ್ತಿಯ ದಿನವಾಗಲಿದೆ. ಪ್ರೇಮ ವಿವಾಹಗಳು ಯಶವನ್ನು ಕಾಣುವವು. ಮಕ್ಕಳಿಂದ ನೆಮ್ಮದಿ. ದೇವತಾರಾಧನೆಯಿಂದ ಯಶಸ್ಸು.
ಕಟಕ
ಕಛೇರಿ ಕೆಲಸಗಳ ನಿಮಿತ್ತ ದೂರದ ಪ್ರಯಾಣ ಮಾಡಬೇಕಾದೀತು. ಉದ್ಯೋಗಸ್ಥರಿಗೆ ಹೆಚ್ಚಿನ ಬಿಡುವು ದೊರೆತು ಮಾನಸಿಕ ನೆಮ್ಮದಿ ದೊರಕುವುದು. ದಿನದ ಮಟ್ಟಿಗೆ ಸ್ಪೋಟಕ ವಸ್ತುಗಳಿಂದ ದೂರವಿರುವುದು ಒಳಿತು. ಮಹಿಳೆಯರಿಗೆ ಜವಾಬ್ದಾರಿಯಲ್ಲಿ ಹೆಚ್ಚಳವಾಗಲಿದೆ.
ಸಿಂಹ
ಗೃಹ ನಿರ್ಮಾಣ ವಾ ದುರಸ್ತಿ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಸಮಸ್ಯೆಗಳ ಪರಿಹಾರಕ್ಕಾಗಿ ಧಾರ್ಮಿಕ ಕಾರ್ಯ ನಡೆಸಲಿದ್ದೀರಿ. ದಾಂಪತ್ಯ ಸಮಸ್ಯೆಗಳಿಗೆ ಹಿರಿಯರ ಸಲಹೆಯ ಮೇರೆಗೆ ಉತ್ತಮ ರೀತಿಯ ಪರಿಹಾರ ಕಂಡುಬರಲಿದೆ. ಆಯುಧಗಳನ್ನು ಬಳಸುವಾಗಿ ಎಚ್ಚರಿಕೆ ವಹಿಸುವುದು ಒಳಿತು.
ಕನ್ಯಾ
ಬಡಗಿ ಕೆಲಸ, ಕಬ್ಬಿಣ ಕೆಲಸ ಮುಂತಾದ ಕುಶಲ ಕರ್ಮಿಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರಲಿದೆ. ಸಂಶೋಧನೆಯಲ್ಲಿ ತೊಡಗಿದವರಿಗೆ ಉತ್ತಮ ಮಾರ್ಗದರ್ಶನ ದೊರೆಯುವುದು. ಹೊಸ ಹೊಸ ವಿಷಯಗಳನ್ನು ಕಲೆಹಾಕುವಲ್ಲಿ ನಿರತರಾಗುವುದರಿಂದ ಬರವಣಿಗೆಯಲ್ಲಿ ವಿಳಂಬದ ಸಾಧ್ಯತೆ.
ತುಲಾ
ವ್ಯವಹಾರದಲ್ಲಿ ಉನ್ನತಿಯನ್ನು ಸಾಧಿಸುವಿರಿ. ಹಿತ ಶತ್ರುಗಳಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದ್ದು ಜಾಗರೂಕರಾಗಿರುವುದು ಉತ್ತಮ. ವೈದ್ಯಕೀಯ ಚಿಕಿತ್ಸೆಗಾಗಿ ಅಧಿಕ ಖರ್ಚನ್ನು ಭರಿಸಬೇಕಾದೀತು. ಬಂಧುಗಳ ಆಗಮನ ಸಾಧ್ಯತೆ.
ವೃಶ್ಚಿಕ
ವಿದ್ಯುದುಪಕರಣಗಳ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಏರಿಳಿತ ಸಾಧ್ಯತೆ. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಕ್ರಿಯ ಭಾಗವಹಿಸುವ ಸಾಧ್ಯತೆ ಇದೆ. ಸ್ವತಂತ್ರ ಉದ್ಯಮದಲ್ಲಿ ಯಶಸ್ಸನ್ನು ಕಾಣುವಿರಿ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರಗಳಿಂದ ಉತ್ತಮ ಆದಾಯ ನಿರೀಕ್ಷಿಸಬಹುದು.
ಧನು
ಉದ್ಯೋಗ ಕ್ಷೇತ್ರದಲ್ಲಿ ಪದೋನ್ನತಿಯಾಗುವ ಸಾಧ್ಯತೆ ಕಂಡುಬರುವುದು. ವಯಕ್ತಿಕ ವಿಷಯಗಳ ಬಗ್ಗೆ ಅತ್ಯಂತ ಜಾಗರೂಕರಾಗಿರುವುದು ಸೂಕ್ತ. ಆರೋಗ್ಯದಲ್ಲಿ ವೃದ್ಧಿಯನ್ನು ಕಾಣುವಿರಿ. ಪ್ರಾಪ್ತ ವಯಸ್ಕರಿಗೆ ಸಂತಾನ ಭಾಗ್ಯದ ಯೋಗ ಕಂಡುಬರುತ್ತಿದೆ.
ಮಕರ
ದಿನನಿತ್ಯದ ಕಾರ್ಯ ಚಟುವಟಿಕೆಗಳು ಉತ್ಸಾಹದಿಂದ ಕೂಡಿರುವವು. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಸರ್ಕಾರಿ ನೌಕರರಿಗೆ ಕಿರುಕುಳ ಉಂಟಾದೀತು. ಕುಟುಂಬ ಸಮೇತರಾಗಿ ದೂರದೂರಿನಲ್ಲಿರುವ ಕುಲದೇವತಾ ದರ್ಶನದ ಭಾಗ್ಯ ಕಂಡುಬರುವುದು.
ಕುಂಭ
ಹೊಸ ಗೃಹ ನಿರ್ಮಾಣದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಬಂಧುಗಳೊಂದಿಗಿನ ಬಾಂಧವ್ಯ ಗಟ್ಟಿಗೊಳ್ಳುವುದು. ಆರ್ಥಿಕ ಸಂಪನ್ಮೂಲಗಳು ಕೂಡಿಬರಲಿವೆ. ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಸಾಧ್ಯತೆ ಕಂಡುಬರುವುದು. ಸಹೋದರರ ಸಹಕಾರದಿಂದಾಗಿ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು.
ಮೀನ
ವ್ಯವಹಾರದ ಅಭಿವೃದ್ಧಿಗಾಗಿ ಹಣ ವಿನಿಯೋಗ ಮಾಡಲು ಸೂಕ್ತ ದಿನವಾಗಿದೆ. ಸ್ವಂತ ಉದ್ಯಮಿಗಳಿಗೆ ಉತ್ತಮ ಲಾಭದ ನಿರೀಕ್ಷೆ ಕಂಡುಬರುವುದು. ವಿದ್ಯಾರ್ಥಿಗಳಿಗೆ ಪ್ರಗತಿಯ ದಿನವಾಗಲಿದೆ. ಬೆಂಕಿಯ ಜೊತೆ ಕೆಲಸ ಮಾಡುವವರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯ.