
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹಿಮಂತ ಋತು,ಪುಷ್ಯ ಮಾಸ,
ಕೃಷ್ಣಪಕ್ಷ ,ಪ್ರಥಮ,
ಶುಕ್ರವಾರ,ಆಶ್ಲೇಷ ನಕ್ಷತ್ರ,
ರಾಹುಕಾಲ 11:09ರಿಂದ 12:36
ಗುಳಿಕಕಾಲ 08:15 ರಿಂದ 09:42
ಯಮಗಂಡಕಾಲ 3.30 ರಿಂದ 04:57
ಮೇಷ
ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿ ಹೊಂದಲಿವೆ. ಅಮೂಲ್ಯ ವಸ್ತುಗಳ ಸಂಗ್ರಹಣೆ ಮಾಡುವ ಸಾಧ್ಯತೆ. ಸಮಸ್ಯೆಗಳು ಪರಿಹಾರಗೊಳ್ಳುವುದರ ಜೊತೆಗೆ ಸಂತೃಪ್ತಿದಾಯಕ ದಾಂಪತ್ಯ ಜೀವನ ಅನುಭವಿಸಲಿದ್ದೀರಿ.
ವೃಷಭ
ಕಳೆದುಹೋದ ವಸ್ತುಗಳು ಪುನಃ ದೊರಕುವ ಸಾಧ್ಯತೆ. ಉದ್ಯೋಗದಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಲಿದೆ. ಕುಟುಂಬ ಸದಸ್ಯರೊಂದಿಗೆ ದೂರದ ಪ್ರಯಾಣ ಸಾಧ್ಯತೆ. ಮಕ್ಕಳಿಂದ ಕೀರ್ತಿ ಸಂಪಾದನೆಯಾಗಲಿದೆ.
ಮಿಥುನ
ಮಹಿಳೆಯರ ಇಷ್ಟಾರ್ಥಗಳು ಈಡೇರಿ ಸಂತಸ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕಾದೀತು. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಅಗತ್ಯ.
ಕಟಕ
ಉದ್ಯೋಗಸ್ಥ ಮಹಿಳೆಯರಿಗೆ ಪ್ರಶಂಸೆ. ಗೃಹ ಸಮಸ್ಯೆಗಳಿಗೆ ಪರಿಹಾರ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ವಸ್ತ್ರ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಗಾತಿ ಲಭ್ಯವಾಗುವ ಸಾಧ್ಯತೆ.
ಸಿಂಹ
ಉದ್ಯೋಗರಂಗದಲ್ಲಿ ಮೇಲಧಿಕಾರಿಗಳಿಂದ ಹೆಚ್ಚಿನ ಪ್ರೋತ್ಸಾಹ-ಸಹಕಾರ ದೊರಕಲಿದೆ. ವೃತ್ತಿಯಲ್ಲಿನ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸೂಕ್ತ.
ಕನ್ಯಾ
ಸರ್ಕಾರದಿಂದ ಸಹಾಯಧನ ದೊರಕುವ ಸಾಧ್ಯತೆ. ಹಿರಿಯರ ಸಲಹೆಯಿಂದಾಗಿ ವ್ಯವಹಾರದಲ್ಲಿ ಉತ್ತಮ ಫಲಿತಾಂಶ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ಮಹಿಳಾ ರಾಜಕಾರಣಿಗಳಿಗೆ ಯಶಸ್ಸು.
ತುಲಾ
ಗೃಹನಿರ್ಮಾಣ ಕಾರ್ಯಗಳನ್ನು ಮುಂದೂಡಬೇಕಾದ ಪರಿಸ್ಥಿತಿ. ವಿದೇಶ ಪ್ರಯಾಣದ ಸಾಧ್ಯತೆ. ಪಿತ್ರಾರ್ಜಿತ ಆಸ್ತಿ ದೊರಕಲಿದೆ. ಉನ್ನತ ಅಧ್ಯಯನದಲ್ಲಿ ಆಸಕ್ತಿ ಮೂಡಿ ಪ್ರಗತಿ ಹೊಂದುವಿರಿ. ಆರೋಗ್ಯದಲ್ಲಿ ಸುಧಾರಣೆ.
ವೃಶ್ಚಿಕ
ಸಾಮಾಜಿಕ ಗೌರವ ಪ್ರಾಪ್ತಿ. ಕೃಷಿಯಿಂದ ಧನಲಾಭ. ಆರೋಗ್ಯದ ವಿಚಾರದಲ್ಲಿ ಏರುಪೇರು. ವೈದ್ಯಕೀಯ ವೆಚ್ಚವನ್ನು ಭರಿಸಬೇಕಾದೀತು. ಮಿತ್ರರ ಸಹಕಾರದಿಂದ ಕೆಲಸ–ಕಾರ್ಯಗಳು ಸರಾಗವಾಗಲಿವೆ.
ಧನು
ಸ್ವಂತ ಉದ್ಯಮದಲ್ಲಿರುವವರಿಗೆ ಹೆಚ್ಚಿನ ಯಶಸ್ಸು. ಕೃಷಿಯಲ್ಲಿ ಬಿಡುವಿಲ್ಲದ ಕೆಲಸವಾದರೂ ಧನಧಾನ್ಯಭಿವೃದ್ಧಿಯಿಂದ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆಯಾಗಲಿದೆ. ಪ್ರಯಾಣದಿಂದ ಅಧಿಕ ಖರ್ಚು.
ಮಕರ
ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು. ಗೃಹಿಣಿಯರ ಅತ್ಯುತ್ಸಾಹ ಅವಘಡಕ್ಕೆ ಕಾರಣವಾದೀತು. ಆರ್ಥಿಕ ಸಮಸ್ಯೆ ಪರಿಹಾರವಾಗಿ ಋಣುಬಾಧೆಯಿಂದ ಮುಕ್ತರಾಗುವ ಸಾಧ್ಯತೆ ಕಂಡುಬರುತ್ತಿದೆ
ಕುಂಭ
ಹೊಸ ಯೋಜನೆಯನ್ನು ಪ್ರಾರಂಭಿಸುವ ಮುನ್ನ ಹಿರಿಯರ ಸಲಹೆ ಪಡೆಯುವುದು ಉತ್ತಮ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ನ್ಯಾಯಾಲಯದ ಕಟ್ಟಳೆಗಳಲ್ಲಿ ಜಯ. ದೇವತಾ ದರ್ಶನದಿಂದ ನೆಮ್ಮದಿ.
ಮೀನ
ನೂತನ ಗೃಹನಿರ್ಮಾಣದ ಚಿಂತನೆ ನಡೆಸಲಿದ್ದೀರಿ. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಪದೋನ್ನತಿ. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶ ದೊರಕಲಿದೆ. ರಹಸ್ಯ ವಿಚಾರವನ್ನು ಕಾಪಾಡಿಕೊಳ್ಳುವುದು ಉತ್ತಮ.