
ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹೇಮಂತ ಋತು, ಪುಷ್ಯಮಾಸ,
ಶುಕ್ಲ ಪಕ್ಷ, ಪೌರ್ಣಿಮೆ,
ವಾರ: ಗುರುವಾರ, ಪುಷ್ಯ ನಕ್ಷತ್ರ
ರಾಹುಕಾಲ: 02:03 ರಿಂದ 3:30
ಗುಳಿಕಕಾಲ: 9:42 ರಿಂದ 11: 09
ಯಮಗಂಡಕಾಲ: 06:49 8:15
ಮೇಷ
ವೈಯಕ್ತಿಕ ವ್ಯವಹಾರಗಳಲ್ಲಿ ಪ್ರಗತಿ. ಆದಾಯದಲ್ಲಿ ನಿಶ್ಚಿತತೆ. ಕ್ರೀಡಾಪಟುಗಳಿಗೆ ಸಾಧನೆಗೈಯುವ ದಿನವಾಗಲಿದೆ. ಕುಲದೇವತಾ ದರ್ಶನ ಭಾಗ್ಯ. ಮನೆಯಲ್ಲಿ ಅತಿಥಿ ಸತ್ಕಾರದಂತಹ ಸಂಭ್ರಮ ನಡೆಯಲಿದೆ.
ವೃಷಭ
ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಯ ಸಾಧ್ಯತೆ. ಆರ್ಥಿಕ ಸಂಕಷ್ಟಗಳು ದೂರವಾಗಲಿದೆ. ಮಕ್ಕಳಿಗೆ ಅನಿರೀಕ್ಷಿತವಾಗಿ ಹೊಸ ಉದ್ಯೋಗ ದೊರಕುವುದು ಅಥವಾ ಉದ್ಯೋಗದಲ್ಲಿ ಪಲ್ಲಟವಾಗುವ ಸಾಧ್ಯತೆ.
ಮಿಥುನ
ಉದ್ದು, ರಾಗಿ ಮುಂತಾದ ಬೆಳೆಗಳ ವ್ಯವಹಾರದಲ್ಲಿ ಹೆಚ್ಚಿನ ಲಾಭ. ಕಬ್ಬಿಣ ಮುಂತಾದ ಕಪ್ಪುಲೋಹಗಳ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ ಕುದುರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸಿನ ದಿನವಾಗಿದೆ.
ಕಟಕ
ಶುಭಕಾರ್ಯಗಳ ಬಗ್ಗೆ ಎಲ್ಲರೊಡನೆ ಸುದೀರ್ಘ ಚರ್ಚೆ ಮಾಡುವ ಸಾಧ್ಯತೆ. ಕಲಾಕೃತಿಗಳ ಮಾರಾಟಗಾರರಿಗೆ ವ್ಯವಹಾರದಲ್ಲಿ ಲಾಭ. ಸಂಗಾತಿಯೊಂದಿಗೆ ವಿನಾಕಾರಣ ವಾದ, ವಿವಾದಗಳು ಎದುರಾಗುವ ಸಾಧ್ಯತೆ.
ಸಿಂಹ
ಹಣಕಾಸಿನ ವಿಷಯದಲ್ಲಿ ಜಿಗುಟುತನ ತೋರುವುದು ಉತ್ತಮ. ಆತ್ಮೀಯ ಬಂಧುಗಳ ಆಗಮನ ಸಾಧ್ಯತೆ. ದೇಹಾರೋಗ್ಯದಲ್ಲಿ ಉತ್ತಮ ಸುಧಾರಣೆ. ಗೃಹನಿರ್ಮಾಣ ಕಾರ್ಯಗಳಲ್ಲಿ ವಿಳಂಬ ಸಾಧ್ಯತೆ.
ಕನ್ಯಾ
ಲೇವಾದೇವಿ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಸಾಧಾರಣ ಲಾಭ. ಭೂ ಸಂಬಂಧಿ ವ್ಯವಹಾರಗಳಿಗೆ ಸರ್ಕಾರಿ ವಲಯದಿಂದ ಉತ್ತಮ ಸಹಕಾರ ದೊರಕಲಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ.
ತುಲಾ
ಅತಿಯಾದ ಆಯಾಸ ಹಾಗೂ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಯ. ಮಕ್ಕಳೊಂದಿಗೆ ವಿನಾಕಾರಣ ಬಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ. ಸಂಗಾತಿಯ ಸಹಕಾರದಿಂದಾಗಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ.
ವೃಶ್ಚಿಕ
ಉದ್ಯೋಗಸ್ಥ ಮಹಿಳೆಯರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ, ಗೌರವಗಳು ದೊರಕುವ ಸಾಧ್ಯತೆ. ಗೃಹಾಲಂಕಾರ ವಸ್ತುಗಳನ್ನು ಖರೀದಿಸಲಿದ್ದೀರಿ. ಬಂಧುಗಳ ಸಂಭ್ರಮದಲ್ಲಿ ಭಾಗವಹಿಸಿ ಸಂತಸ.
ಧನು
ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಗೌರವ ಆದರಗಳು ಹೆಚ್ಚಲಿವೆ. ಪ್ರಶಸ್ತಿ, ಪುರಸ್ಕಾರಗಳ ಯೋಗ. ಉದ್ಯೋಗಸ್ಥರಿಗೆ ವರ್ಗಾವಣೆ ಬಗ್ಗೆ ಪ್ರಯತ್ನಿಸಲು ಉತ್ತಮ ದಿನವಾಗಿ ಪರಿಣಮಿಸಲಿದೆ.
ಮಕರ
ಗೃಹನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಹಣಕಾಸಿನ ಹೊಂದಾಣಿಕೆಯಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದವರಿಗೆ ಗೌರವ ಪ್ರಾಪ್ತಿ. ಕಲಾವಿದರಿಗೆ ಉತ್ತಮ ಅವಕಾಶಗಳು ಸಿಗಲಿವೆ.
ಕುಂಭ
ನ್ಯಾಯಾಲಯಗಳಲ್ಲಿನ ಮೊಕದ್ದಮೆಗಳು ನಿಮ್ಮ ಪರವಾಗಿ ತಿರುಗುವ ಸಾಧ್ಯತೆ ಎದ್ದು ಕಾಣುತ್ತಿದೆ. ವೈದ್ಯಕೀಯ ನೆರವಿಗಾಗಿ ಖರ್ಚು ಮಾಡಬೇಕಾದೀತು. ದೂರದ ಪ್ರಯಾಣದಿಂದ ಸಂಕಷ್ಟ.
ಮೀನ
ರಾಜಕೀಯದಲ್ಲಿರುವವರಿಗೆ ದುಗುಡ ದುಮ್ಮಾನಗಳು ಎದುರಾಗುವ ಸಾಧ್ಯತೆ. ಹಿಂಬಾಲಕರಿಂದಲೇ ಮೋಸ ಹೋಗುವ ಸಾಧ್ಯತೆ. ಆಸ್ತಿ ಸಂಪಾದನೆಯಲ್ಲಿ ಪ್ರಗತಿ ಕಂಡುಬರಲಿದೆ. ಆರೋಗ್ಯದ ಬಗ್ಗೆ ಗಮನ ಅಗತ್ಯ.